ಟೆಸ್ಟ್ ಗೆಲುವಿಗಾಗಿ ENG ಅಡ್ಡದಾರಿ – ಬುಮ್ರಾ ಗಾಯಗೊಳಿಸಲೆಂದೇ ಬೌನ್ಸರ್ಸ್?
ಸ್ಟೋಕ್ಸ್ & ಜೋಫ್ರಾ ಕಳ್ಳಾಟ ರಿವೀಲ್!

ಟೆಸ್ಟ್ ಗೆಲುವಿಗಾಗಿ ENG ಅಡ್ಡದಾರಿ – ಬುಮ್ರಾ ಗಾಯಗೊಳಿಸಲೆಂದೇ ಬೌನ್ಸರ್ಸ್?ಸ್ಟೋಕ್ಸ್ & ಜೋಫ್ರಾ ಕಳ್ಳಾಟ ರಿವೀಲ್!

ಬೌಲಿಂಗ್​ನಲ್ಲಿ ಮಿಸ್ಟರ್ ಪರ್ಪೆಕ್ಷನಿಸ್ಟ್ ಅಂತೇನಾದ್ರೂ ಇದ್ರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರನೇ. ಅವು ಹಾಕೋ ಪ್ರತೀ ಬಾಲ್​ ಕೂಡ ಬ್ಯಾಟರ್​ಗಳ ಎದೆ ನಡುಗಿಸಿ ಬಿಡುತ್ತೆ. ಅವ್ರ ಬೌಲಿಂಗ್​ನಲ್ಲಿ ಬಿಗ್ ಹಿಟ್ ಬಾರಿಸೋದಿರ್ಲಿ ಡಿಫೆನ್ಸ್ ಮಾಡಿಕೊಂಡ್ರೆ ಸಾಕಪ್ಪ ಅಂತಾರೇ. ಅದ್ರಲ್ಲೂ ಯಾರ್ಕರ್​ಗಳಂತೂ ಸ್ಟಂಪ್​ಗಳ ಬುಡವನ್ನೇ ಕಿತ್ತೆಸೆದು ಬಿಡುತ್ವೆ. ಸದ್ಯ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರೋ ಬುಮ್ರಾ ಆಂಗ್ಲರು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದ್ರು. ಇದೇ ಕಾರಣಕ್ಕೆ ಬುಮ್ರಾ ವಿರುದ್ಧ ಇಂಗ್ಲೆಂಡ್ ಪಡೆ ಬಹುದೊಡ್ಡ ಸಂಚನ್ನೇ ಹೂಡಿತ್ತು ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : RCB ವೇಗಿ ಯಶ್ ದಯಾಳ್‌ಗೆ ಕೋರ್ಟ್ ರಿಲೀಫ್ – ಬಂಧನಕ್ಕೆ ಹೈಕೋರ್ಟ್ ತಡೆ

ಬುಮ್ರಾ ಗಾಯಗೊಳಿಸೋಕೆ ಬೌನ್ಸರ್ ಹಾಕಿದ್ರಾ ಜೋಫ್ರಾ?

ಲಾರ್ಡ್ಸ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಈಸಿ ಟಾರ್ಗೆಟ್​ನೂ ಕೂಡ ಚೇಸ್ ಮಾಡೋಕೆ ಆಗ್ದೇ ಸೋಲೊಪ್ಪಿಕೊಂಡಿದೆ. ಇದ್ರ ಹಿಂದೆ ಆಂಗ್ಲರ ಮೈಂಡ್​ಗೇಮ್ ಕಂಪ್ಲೀಟ್ ಆಗಿ ವರ್ಕ್ ಆಗಿತ್ತು. 193 ರನ್​ಗಳ ಗುರಿ ನೀಡಿ ಸೈಕಲಾಜಿಕಲ್ ಫಾರ್ಮೂಲಾ ಬಳಸಿ 22 ರನ್​ಗಳಿಂದ ವಿನ್ ಆಗಿದ್ರು. ಅಷ್ಟೇ ಅಲ್ದೇ ಪಂದ್ಯವನ್ನು ಗೆಲ್ಲೋಕೆ ಯಾವ ದಾರಿ ಬೇಕಾದ್ರೂ ಹಿಡೀತಾರೆ ಕ್ರೀಡಾ ಮನೋಭಾವವನ್ನೇ ಮರೀತಾರೆ ಅಂತಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸ್ಫೋಟಕ ಆರೋಪ ಮಾಡಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ವೇಳೆ ಅವರನ್ನೇ ಟಾರ್ಗೆಟ್ ಮಾಡಿದ್ರು.  ಐದನೇ ದಿನದಂದು ಬೌನ್ಸರ್‌ಗಳ ಮೂಲಕ ಬುಮ್ರಾ ಅವರನ್ನು ಔಟ್ ಮಾಡಲು ಮತ್ತು ಇಂಜುರಿಗೊಳಿಸೋಕೆ ಪ್ಲ್ಯಾನ್ ರೂಪಿಸಿದ್ರು ಎಂದು ಆರೋಪ ಮಾಡಿದ್ದಾರೆ.

ಔಟ್ ಆಗದೇ ಇದ್ರೆ ಗಾಯಗೊಳಿಸೋದೇ ಉದ್ದೇಶವಾಗಿತ್ತಾ?

ಮೂರನೇ ಪಂದ್ಯದ ಬಳಿಕ ಮಾತನಾಡಿರುವ ಮೊಹಮ್ಮದ್ ಕೈಫ್, ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಯೋಜನೆ ಏನಾಗಿತ್ತು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ. ಟೀಂ ಇಂಡಿಯಾ ಪರ 10ನೇ ಸ್ಲಾಟ್​ನಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ಜಸ್ಪ್ರೀತ್ ಬುಮ್ರಾ ತಮ್ಮ ಸಾಮರ್ಥ್ಯಕ್ಕೂ ಮೀರಿ ಬ್ಯಾಟ್ ಬೀಸಿದ್ರು. ಪ್ಯೂರ್ ಬೌಲರ್ ಆಗಿದ್ರೂ ಅವ್ರ ಡಿಫೆನ್ಸಿವ್ ಬ್ಯಾಟಿಂಗ್​ನ ಮೆಚ್ಚಲೇಬೇಕು. ಬರೋಬ್ಬರಿ 54 ಎಸೆತಗಳನ್ನ ಎದುರಿಸಿದ್ರು. ಅದ್ರಲ್ಲಿ ಒಂದು ಫೋರ್ ಕೂಡ ಬಾರಿಸಿದ್ರು. ಸೋ ಜಡೇಜಾಗೆ ಒಳ್ಳೆ ಸಾಥ್ ನೀಡಿದ್ದ ಬುಮ್ರಾ ಆಂಗ್ಲ ಬೌಲರ್​ಗಳ ಬೆವರಿಳಿಸಿದ್ರು. ನಿಧಾನವಾಗಿ ಇಬ್ಬರ ಪಾರ್ಟ್ನರ್​ಶಿಪ್ ಬಿಲ್ಡ್ ಆಗಿದ್ದನ್ನ ನೋಡಿದ್ದ ಸ್ಟೋಕ್ಸ್ ಮತ್ತು ಆರ್ಚರ್ ಬುಮ್ರಾರನ್ನ ಟಾರ್ಗೆಟ್ ಮಾಡಿದ್ರಂತೆ. ನಿರಂತರವಾಗಿ ಬೌನ್ಸರ್ ಎಸೆದು ಔಟ್ ಆಗದಿದ್ದರೆ ಅಟ್​ಲೀಸ್ಟ್ ಬೆರಳು ಅಥವಾ ಭುಜಕ್ಕೆ ಹೊಡೆದು ಗಾಯಗೊಳಿಸುವುದು ಅವರ ಇಂಟೆನ್ಷನ್ ಆಗಿತ್ತು. ತಮ್ಮ ಬ್ಯಾಟ್ಸ್‌ಮನ್‌ಗಳು ಯಾರ ಬೌಲಿಂಗ್​ನಲ್ಲಿ ಬ್ಯಾಟ್ ಬೀಸಲು ಕಷ್ಟಪಡುತ್ತಾರೋ, ಅಂತಹ ಮುಖ್ಯ ಬೌಲರ್‌ಗೆ ಗಾಯಗೊಳಿಸುವುದು ಬೌಲರ್‌ಗಳ  ಮನಸ್ಸಿನಲ್ಲಿರುತ್ತದೆ. ಇದೇ ಅವರ ಯೋಜನೆಯಾಗಿತ್ತು ಎಂದು ಕೈಫ್ ಹೇಳಿದ್ದಾರೆ.

2 ಪಂದ್ಯಗಳಿಂದ 12 ವಿಕೆಟ್ ಉರುಳಿಸಿದ ಬುಮ್ರಾ!

ಮೊದಲ ಪಂದ್ಯದ ಮೊದಲನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​​ ಕಬಳಿಸಿದ್ದ ಬುಮ್ರಾ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ವಿಕೆಟ್ ಲೆಸ್ ಆಗಿದ್ರು. ಆ ಬಳಿಕ ಎರಡನೇ ಪಂದ್ಯದಲ್ಲಿ ಬುಮ್ರಾಗೆ ರೆಸ್ಟ್ ನೀಡಲಾಗಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಬುಮ್ರಾ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಉರುಳಿಸಿದ್ರು. ಹಾಗೇ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಪಡೆದಿದ್ರು. ಸೋ ಟೋಟಲ್ಲಾಗಿ ನಾಲ್ಕು ಇನ್ನಿಂಗ್ಸ್​ಗಳಿಂದ ಎರಡು ಫೈಫರ್ ಸೇರಿದಂತೆ ಒಟ್ಟಾರೆಯಾಗಿ 12 ವಿಕೆಟ್ ಬೇಟೆಯಾಡಿದ್ದಾರೆ.

Shantha Kumari