ಕೊಚ್ಚಿ ಬ್ಲೂ ಟೈಗರ್ಸ್ ತೆಕ್ಕೆಗೆ ಸಂಜು ಸ್ಯಾಮ್ಸನ್ – ಕೆಸಿಎಲ್ ಗೆ ಎಂಟ್ರಿಕೊಟ್ಟ ಸಂಜು ದುಬಾರಿ ಮೊತ್ತಕ್ಕೆ ಹರಾಜು
ಒಂದು ತಂಡದಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ ನೋಡಲು ಕೌಂಟ್‌ಡೌನ್ ಸ್ಟಾರ್ಟ್

ಕೊಚ್ಚಿ ಬ್ಲೂ ಟೈಗರ್ಸ್ ತೆಕ್ಕೆಗೆ ಸಂಜು ಸ್ಯಾಮ್ಸನ್ – ಕೆಸಿಎಲ್ ಗೆ ಎಂಟ್ರಿಕೊಟ್ಟ ಸಂಜು ದುಬಾರಿ ಮೊತ್ತಕ್ಕೆ ಹರಾಜುಒಂದು ತಂಡದಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ ನೋಡಲು ಕೌಂಟ್‌ಡೌನ್ ಸ್ಟಾರ್ಟ್

ಭಾರತೀಯ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ ಇದೇ ಮೊದಲ ಬಾರಿಗೆ ಕೆಸಿಎಲ್‌ಗೆ ಎಂಟ್ರಿಕೊಟ್ಟಿದ್ದಾರೆ. ಕೇರಳ ಕ್ರಿಕೆಟ್ ಲೀಗ್ ಗೆ ಸಂಜು ಸ್ಯಾಮ್ಸನ್ ಎಂಟ್ರಿಕೊಡುತ್ತಿದ್ದಂತೆ ದುಬಾರಿ ಬೆಲೆಗೆ ಹರಾಜಾಗಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ:CSK & RR ಟ್ರೇಡ್ ವಿಂಡೋ ಟೆಕ್ನಿಕ್ – ಸಂಜುಗಾಗಿ ಅಶ್ವಿನ್ & ದುಬೆ ರಿಲೀಸ್?

ರಾಜಸ್ತಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಈ ಬಾರಿ ಐಪಿಎಲ್‌ನಲ್ಲಿ ಟೀಮ್ ಚೇಂಜ್ ಮಾಡುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದರ ಮಧ್ಯೆ ಸಂಜು ಸದ್ದಿಲ್ಲದೇ ಕೇರಳ ಕ್ರಿಕೆಟ್ ಲೀಗ್ ಗೆ ಎಂಟ್ರಿಕೊಟ್ಟಿದ್ದಾರೆ. ಕೊಚ್ಚಿ ಬ್ಲೂ ಟೈಗರ್ಸ್ ತಂಡದ ಪಾಲಾಗಿದ್ದಾರೆ. ಅವರನ್ನು 26.80 ಲಕ್ಷ ರೂಪಾಯಿಗೆ ಕೊಚ್ಚಿ ಬ್ಲೂ ಟೈಗರ್ಸ್ ತಂಡ ಖರೀದಿಸಿದೆ.

ಕೇರಳ ಕ್ರಿಕೆಟ್ ಲೀಗ್ ನ ಎರಡನೇ ಸೀಸನ್​ನಲ್ಲಿ ಸಂಜು ಕಣಕ್ಕಿಳಿಯಲಿದ್ದು, ಕೊಚ್ಚಿ ಬ್ಲೂ ಟೈಗರ್ಸ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಇನ್ನೊಂದು ಮಹತ್ವದ ವಿಚಾರವೆಂದರೆ ಕೊಚ್ಚಿ ಬ್ಲೂ ಟೈಗರ್ಸ್ ಈ ಫ್ರಾಂಚೈಸಿ, ಸಂಜು ಖರೀದಿಗಾಗಿ ತನ್ನ ಪರ್ಸ್​ನ ಅರ್ಧದಷ್ಟು ಹಣವನ್ನು ಖರ್ಚು ಮಾಡಿದೆ. ಆದರೆ, ತಂಡದ ನಾಯಕತ್ವವನ್ನು ಸಂಜು ಸ್ಯಾಮ್ಸನ್‌ ಅವರ ಅಣ್ಣ ಸ್ಯಾಲಿ ಸ್ಯಾಮ್ಸನ್‌ ಅವರಿಗೆ ನೀಡಿದೆ.

ಕೇರಳ ಕ್ರಿಕೆಟ್ ಲೀಗ್ 2025 ರ ಹರಾಜಿನಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಹೆಚ್ಚಿನ ಬೇಡಿಕೆಯಿತ್ತು. ಆದಾಗ್ಯೂ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು 26.80 ಲಕ್ಷ ರೂ.ಗೆ ಖರೀದಿಸಿತು. ಈ ಹರಾಜಿನಲ್ಲಿ, ಎಲ್ಲಾ ತಂಡಗಳು ಆಟಗಾರರಿಗಾಗಿ ಖರ್ಚು ಮಾಡಲು ತಲಾ 50 ಲಕ್ಷ ರೂ.ಗಳನ್ನು ಹೊಂದಿದ್ದವು. ಆದರೆ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಮ್ಮ ಒಟ್ಟು ಹಣದ 50% ಕ್ಕಿಂತ ಹೆಚ್ಚು ಖರ್ಚು ಮಾಡಿದೆ. ಇದರೊಂದಿಗೆ, ಈ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿ ಸಂಜು ಹೊರಹೊಮ್ಮಿದ್ದಾರೆ. ಹರಾಜಿನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ತಂಡ ಸ್ಯಾಲಿ ಸ್ಯಾಮ್ಸನ್ ಅವರನ್ನು ಸಹ 75,000 ರೂ.ಗಳಿಗೆ ಖರೀದಿಸಿದೆ. ಜೊತೆಗೆ ಇವರಿಗೆ ತಂಡದ ನಾಯಕನ ಪಟ್ಟ ಕೂಡಾ ಕಟ್ಟಿದೆ. ಇದುವರೆಗೆ ಕೇರಳ ಪರ ಒಂದೇ ಒಂದು ಪಂದ್ಯವನ್ನು ಆಡಿರದ ಸ್ಯಾಲಿ ಸ್ಯಾಮ್ಸನ್ ಬೌಲಿಂಗ್ ಆಲ್​ರೌಂಡರ್ ಆಗಿದ್ದಾರೆ. ಸ್ಯಾಲಿ ಸ್ಯಾಮ್ಸನ್ ಇಲ್ಲಿಯವರೆಗೆ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 38 ರನ್ ಗಳಿಸಿದ್ದಾರೆ.

ಈ ಮೊದಲು ಕೇರಳ ಕ್ರಿಕೆಟ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಲೀಗ್ ರಾಯಭಾರಿಯಾಗಿದ್ದ ಸಂಜು, ಟೀಂ ಇಂಡಿಯಾ ಪರವಾಗಿ ಆಡುತ್ತಿದ್ದ ಕಾರಣ ಈ ಸೀಸನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಈ ಟೂರ್ನಮೆಂಟ್‌ನ ಎರಡನೇ ಸೀಸನ್ ಆಗಸ್ಟ್ 21 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ.

Sulekha