2 ತಿಂಗಳ ಬಳಿಕ ಭೇಟಿ – ಹೆಂಡತಿಗೆ, ಮಗನಿಗೆ ಪ್ರೀತಿಯ ಅಪ್ಪುಗೆ ಕೊಟ್ಟ ಶುಭಾಂಶು ಶುಕ್ಲಾ

2  ತಿಂಗಳ ಬಳಿಕ ಭೇಟಿ – ಹೆಂಡತಿಗೆ, ಮಗನಿಗೆ ಪ್ರೀತಿಯ ಅಪ್ಪುಗೆ ಕೊಟ್ಟ ಶುಭಾಂಶು ಶುಕ್ಲಾ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ 18 ದಿನಗಳ ಕಾಲ ಸಂಶೋಧನೆ ಮಾಡಿ ಬಂದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ತಮ್ಮ ಹೆಂಡತಿ ಮತ್ತು ಮಗನನ್ನ ಭೇಟಿಯಾಗಿದ್ದಾರೆ. ಹೂಸ್ಟನ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಮತ್ತು ಅವರ ಆರು ವರ್ಷದ ಮಗ ಕಿಯಾಶ್ ಅವರನ್ನು ಭೇಟಿಯಾಗಿದ್ದಾರೆ.  ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಮತ್ತು ಅವರ ಆರು ವರ್ಷದ ಮಗ ಕಿಯಾಶ್ ಅವರನ್ನು ಅಪ್ಪಿಕೊಳ್ಳುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಸುಮಾರು ಎರಡು ತಿಂಗಳುಗಳ ಬಳಿಕ ತಮ್ಮ ಕುಟುಂಬವನ್ನ ಶುಕ್ಲಾ ಭೇಟಿಯಾಗಿದ್ದಾರೆ.

ಇನ್ನೂ ಶುಕ್ಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಕುಟುಂಬದ ಬಗ್ಗೆ ಬಾವುಕರಾಗಿ ಬರೆದುಕೊಂಡಿದ್ದಾರೆ.  ಬಾಹ್ಯಾಕಾಶ ಹಾರಾಟ ಅದ್ಭುತ ಆದರೆ ಬಹಳ ದಿನಗಳ ನಂತರ ನಮ್ಮ ಪ್ರೀತಿಪಾತ್ರರನ್ನು ನೋಡುವುದು ಅಷ್ಟೇ ಅದ್ಭುತ. ನಾನು ಕ್ವಾರಂಟೈನ್‌ಗೆ ಹೋಗಿ 2 ತಿಂಗಳುಗಳಾಗಿತ್ತು. ಕ್ವಾರಂಟೈನ್ ಕುಟುಂಬ ಭೇಟಿಗಳ ಸಮಯದಲ್ಲಿ ನಾವು 8 ಮೀಟರ್ ಅಂತರದಲ್ಲಿ ಇರಬೇಕಾಗಿತ್ತು. ನನ್ನ ಪುಟ್ಟ ಮಗುವಿಗೆ ತನ್ನ ಕೈಯಲ್ಲಿ ಸೂಕ್ಷ್ಮಜೀವಿಗಳಿವೆ ಎಂದು ಹೇಳಬೇಕಾಗಿತ್ತು ಮತ್ತು ಅದಕ್ಕಾಗಿಯೇ ಅವನು ನನ್ನ  ಮುಟ್ಟಲು ಸಾಧ್ಯವಾಗಲಿಲ್ಲ. ಅವನು ಪ್ರತಿ ಬಾರಿ ಭೇಟಿಗೆ ಬಂದಾಗಲೆಲ್ಲಾ ಅವನು ತನ್ನ ತಾಯಿಯನ್ನು ಕೇಳುತ್ತಿದ್ದ. ನಾನು ನನ್ನ ಕೈಗಳನ್ನು ತೊಳೆಯಬಹುದೇ?’ ಎಂದು ಕೇಳುತ್ತಿದ್ದ. ಅವನ ಪ್ರಶ್ನೆಗೆ ಉತ್ತರಿಸುವುದೇ ಸವಾಲಿನ ಕೆಲಸವಾಗಿತ್ತು ಎಂದು ಶುಕ್ಲಾ ಹೇಳಿದ್ದಾರೆ. ಇನ್ನೂ ಶುಕ್ಲಾ ಅವರ ಬಗ್ಗೆ ಅವರ ಪತ್ನಿ ಕೂಡ ಹಾಡಿ ಹೊಗಳಿದ್ದಾರೆ.

ಶುಭಾಂಶು ಅವರು ಬಾಹ್ಯಾಕಾಶ ಪ್ರವಾಸ ಮುಗಿಸಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶುಭಾಂಶು ಶುಕ್ಲಾ ಪತ್ನಿ ಕಾಮ್ನಾ ಶುಕ್ಲಾ, ಶುಭಾಂಶು ಈಗ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ನಮ್ಮ ತಕ್ಷಣದ ಗಮನವು ಅವರು ಭೂಮಿಯ ಮೇಲಿನ ಜೀವನಕ್ಕೆ ಸರಾಗವಾಗಿ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ. ಶುಭಾಂಶು ಅವರ ಬಾಹ್ಯಾಕಾಶ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ. ಶುಭಾಂಶು ಶುಕ್ಲಾ ತಮ್ಮ ಬಾಹ್ಯಾಕಾಶದಲ್ಲಿ ಮನೆಯೂಟವನ್ನು ಮಿಸ್‌ ಮಾಡಿಕೊಂಡಿರುತ್ತಾರೆ.ನಾನು ಅವರಿಗೆ ಇಷ್ಟವಾದ  ಅಡುಗೆ ಮಾಡುತ್ತೇನೆ ಅಂತ  ಶುಕ್ಲಾ ಅವರ ಪತ್ನಿ ಹೇಳಿದ್ದಾರೆ

Kishor KV