ಬಿಹಾರದ ಜನತೆಗೆ ಬಂಪರ್‌ – 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಘೋಷಿಸಿದ ಸಿಎಂ ನಿತೀಶ್ ಕುಮಾರ್

ಬಿಹಾರದ ಜನತೆಗೆ ಬಂಪರ್‌ – 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಘೋಷಿಸಿದ ಸಿಎಂ ನಿತೀಶ್ ಕುಮಾರ್

ಬಿಹಾರ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದೆ. ಇದೀಗ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಹಾರದಲ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬಿಹಾರ ಸಿಎಂ ನಿತೀಶ್ ಕುಮಾರ್ ಹೊಸ ಯೋಜನೆಯೊಂದನ್ನ ಘೋಷಣೆ ಮಾಡಿದ್ದಾರೆ. ರಾಜ್ಯದ ಜನರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ವಿಂಡೀಸ್ ಸ್ಟಾರ್ ಕ್ರಿಕೆಟರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಣೆ – ತವರಿನಲ್ಲಿ ಕೊನೇ ಪಂದ್ಯದ ನಂತರ ವಿದಾಯ

ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈವರೆಗೂ ಚುನಾವಣಾ ಆಯೋಗ ಯಾವುದೇ ದಿನಾಂಕವನ್ನು ಪ್ರಕಟಿಸಿಲ್ಲ.  ಆದ್ರೀಗ ಬಿಹಾರ ಸಿಎಂ ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ನಿತೀಶ್‌ ಕುಮಾರ್‌ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಆರಂಭದಿಂದಲೂ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ. ಆದರೆ ಇದೀಗ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ರಾಜ್ಯದ ಜನರಿಗೆ 125 ಯೂನಿಟ್‌ವರೆಗೂ ಗೃಹಬಳಕೆ ಉಚಿತ ವಿದ್ಯುತ್ ನೀಡಲಾಗುವುದು. ಗ್ರಾಹಕರು 125 ಯೂನಿಟ್‌ವರೆಗೂ ಯಾವುದೇ ಹಣ ಪಾವತಿಸಬೇಕಿಲ್ಲ. ಉಚಿತ ವಿದ್ಯುತ್ ಯೋಜನೆಯ ಮೂಲಕ ರಾಜ್ಯದ 1.67 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿದ್ದು, ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

Shwetha M