ಕಾಂತಾರ ಸಿನಿಮಾ ಎದುರು ಬಾಲಿವುಡ್ ನಟರ ಅಗ್ನಿಪರೀಕ್ಷೆ – ಒಂದೇ ದಿನ ಬಿಗ್‌ಬಜೆಟ್ ಸಿನಿಮಾಗಳು ರಿಲೀಸ್

ಕಾಂತಾರ ಸಿನಿಮಾ. ದೇಶಾದ್ಯಂತ ಸದ್ದು ಮಾಡಿದ ಕನ್ನಡ ಸಿನಿಮಾ. ಇದೀಗ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೇಲೆಯೂ ಸಖತ್ ನಿರೀಕ್ಷೆ ಇದೆ. ಈ ಸಿನಿಮಾ ಅಕ್ಟೋಬರ್ 2ರಂದು ತೆರೆಕಾಣಲು ಸಜ್ಜಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದೆದುರು ಇದೀಗ ಬಾಲಿವುಡ್ ಸ್ಟಾರ್ ಹೀರೋಗಳ ಸಿನಿಮಾಗಳು ಪೈಪೋಟಿಗೆ ಇಳಿಯುತ್ತಿವೆ.
2022ರಲ್ಲಿ ಬಿಡುಗಡೆ ಆದ ಕನ್ನಡದ ಕಾಂತಾರ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಗಳಿಕೆಯಲ್ಲೂ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು. ಜೊತೆಗೆ ದೇಶಾದ್ಯಂತ ಸದ್ದು ಮಾಡುವ ಮೂಲಕ ಕಾಂತಾರ ಕನ್ನಡ ಚಿತ್ರರಂಗದ ಗೌರವ ಎತ್ತಿಹಿಡಿದಿತ್ತು. ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಪ್ರೀಕ್ವೆಲ್ ಮಾಡಲು ನಿರ್ಧರಿಸಲಾಯಿತು. ಪ್ರೀಕ್ವೆಲ್ಗೆ ‘ಕಾಂತಾರ: ಚಾಪ್ಟರ್ 1’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.
ಸಾಮಾನ್ಯವಾಗಿ ಹೈವೋಲ್ಟೇಟ್ ಸಿನಿಮಾದ ಎದುರು ಸ್ಪರ್ಧೆಗೆ ಇಳಿಯಲು ಬೇರೆ ಸಿನಿಮಾಗಳು ತಯಾರಿರುವುದಿಲ್ಲ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ ಆಗುವ ದಿನವೇ ಬಾಲಿವುಡ್‌ನ ಸ್ಟಾರ್ ನಟರ ಸಿನಿಮಾ ಕೂಡಾ ರಿಲೀಸ್ ಆಗಲಿದೆ. ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಎದುರು ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾ ಬಿಡುಗಡೆ ಆಗಲಿದೆ. ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಶಶಾಂಕ್ ಖೈತಾನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ 2ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ‘ಕಾಂತಾರ: ಚಾಪ್ಟರ್ 1’ ಚಿತ್ರದ ಜೊತೆ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗಲಿದೆ. ಕರಣ್ ಜೋಹರ್ ಅವರು ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾ ಕೂಡ ಅಕ್ಟೋಬರ್ 2ರಂದು ತೆರೆಕಾಣಲಿದೆ. ಆ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ರಜೆ ಇರುವುದರಿಂದ ಬಾಲಿವುಡ್ ಸ್ಟಾರ್ ಗಳ ಸಿನಿಮಾ ಇದೇ ದಿನ ರಿಲೀಸ್ ಆಗಲಿದೆ.

ನೋಡಿರಿ

