ಟೆಸ್ಟ್ ಫೈಟ್ ನ ಮಹಾಗೋಡೆ ರಾಹುಲ್ ದ್ರಾವಿಡ್ – ಯಂಗ್ ಪ್ಲೇಯರ್ಸ್ ತಾಳ್ಮೆ ಕಳ್ಕೊಂಡ್ರಾ?

ಟಿ-20, ಒಡಿಐ ಫಾರ್ಮೆಟ್ ಕ್ರಿಕೆಟ್ಗೆ ಯಂಗ್ ಜನರೇಷನ್ ಅಟ್ರಾಕ್ಟ್ ಆಗಿರಬಹುದು. ಒಂದೇ ದಿನದಲ್ಲಿ ಮ್ಯಾಚ್ ಮುಗಿದು ಬಿಡುತ್ತಲ್ಲ ಅನ್ನೋದು ಅವ್ರ ಕ್ರೇಜ್ಗೆ ಕಾರಣ. ಬಟ್ ರಿಯಲ್ ಕ್ರಿಕೆಟ್ ಫ್ಯಾನ್ಸ್ ಯಾವತ್ತಿದ್ರೂ ಟೆಸ್ಟ್ ಮ್ಯಾಚ್ನೇ ಇಷ್ಟ ಪಡ್ತಾರೆ. ಅದ್ರಲ್ಲೂ ರೆಡ್ ಬಾಲ್ ಕ್ರಿಕೆಟ್ನಲ್ಲಿ ಭಾರತದ ಪಾಲಿಗೆ ತಡೆಗೋಡೆಯಂತಿದ್ದ ರಾಹುಲ್ ದ್ರಾವಿಡ್ರನ್ನ ಮರೆಯೋಕೆ ಸಾಧ್ಯನೇ ಇಲ್ಲ. ಪ್ರೆಶರ್ನ ಹೇಗೆ ಹ್ಯಾಂಡಲ್ ಮಾಡ್ಬೇಕು? ಕೂಲ್ ಌಂಡ್ ಕಾಮ್ ಆಗಿ ಹೇಗೆ ಇನ್ನಿಂಗ್ಸ್ ಕಟ್ಟಬೇಕು? ಟೆಸ್ಟ್ನಲ್ಲಿ ಪೇಷನ್ಸ್ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ತೋರಿಸಿ ಕೊಟ್ಟಿದ್ದೇ ರಾಹುಲ್ ದ್ರಾವಿಡ್. ದ್ರಾವಿಡ್ ಕ್ರಿಕೆಟ್ನಿಂದ ದೂರ ಸರಿದು ದಶಕಗಳೇ ಕಳೆದ್ರೂ ಯಾಕೆ ಅಭಿಮಾನಿಗಳು ಅವ್ರನ್ನ ಆರಾಧಿಸ್ತಾರೆ ಅನ್ನೋದಕ್ಕೆ ಅವ್ರ ಸಾಧನೆಗಳೇ ಸಾಕ್ಷಿ. ಟೆಸ್ಟ್ ಕ್ರಿಕೆಟ್ನಲ್ಲಿ ದ್ರಾವಿಡ್ ಬ್ಯಾಟಿಂಗ್ ಸ್ಟೈಲೇ ನಿಜಕ್ಕೂ ಅತ್ಯದ್ಭುತ.
ಇದನ್ನೂ ಓದಿ : ಭಾರತಕ್ಕೆ MUST WIN ಚಾಲೆಂಜ್! – 4ನೇ ಟೆಸ್ಟ್.. ಸುದರ್ಶನ್ ವಾಪಸ್!?
ದಿ ವಾಲ್ ಅಂದಾಗ ಥಟ್ ಅಂತಾ ನೆನಪಾಗೋದೇ ರಾಹುಲ್ ದ್ರಾವಿಡ್. ತಮ್ಮ ಜಿಗುಟು ಬ್ಯಾಟಿಂಗ್ ಶೈಲಿಯಿಂದಲೇ ಬೌಲರ್ಗಳ ಬೆವರಿಳಿಸುತ್ತಿದ್ದ ದಿಗ್ಗಜ. ಭಾರತದ ಮಹಾ ಗೋಡೆ ಎಂದೇ ಟೈಟಲ್ ಪಡೆದಿರೋ ರಾಹುಲ್ ದ್ರಾವಿಡ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬರು. ಮಧ್ಯಪ್ರದೇಶದಲ್ಲಿ ಜನಿಸಿದರೂ, ಕರ್ನಾಟಕದ ಪರವಾಗಿ ಕ್ರಿಕೆಟ್ ಜಗತ್ತಿನಲ್ಲಿ ಅಚ್ಚಳಿಯದ ದಾಖಲೆಗಳನ್ನು ಬರೆದ ಕ್ರಿಕೆಟಿಗ ರಾಹುಲ್ ದ್ರಾವಿಡ್. ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ರಷ್ಟು ಪೇಷನ್ಸ್ ನ ಬೇರೆ ಯಾವುದೇ ಆಟಗಾರನಿಂದಲೂ ನೋಡೋಕೆ ಚಾನ್ಸೇ ಇಲ್ಲ. ಬೇರೆಲ್ಲಾ ಪ್ಳೇಯರ್ಸ್ ನೇಮ್ ಫೇಮ್ ಹಿಂದೆ ಬಿದ್ದು ಬಿಗ್ ಹಿಟ್ಗಳನ್ನ ಬಾರಿಸಿ ಜನಪ್ರಿಯತೆ ಗಳಿಸ್ತಿದ್ರು. ಬಟ್ ದ್ರಾವಿಡ್ ಮೈದಾದನಲ್ಲಿ ಹಾಗೇ ಮೈದಾನದ ಹೊರಗೂ ತೀರಾ ಸರಳ ವ್ಯಕ್ತಿತ್ವ. ದ್ರಾವಿಡ್ ಒಮ್ಮೆ ಮೈದಾನಕ್ಕಿಳಿದರೆ, ಅವರ ವಿಕೆಟ್ ಪಡೆಯುವುದೇ ಬೌಲರ್ಗಳಿಗೆ ಸವಾಲಾಗಿತ್ತು. ಎದುರಾಳಿ ಬೌಲರ್ ಅದೆಷ್ಟೇ ಮಾರಕ ದಾಳಿ ನಡೆಸಿದ್ರೂ ಈಸಿಯಾಗಿ ಡಿಫೆನ್ಸ್ ಮಾಡಿಕೊಂಡು ಆತನ ಅಷ್ಟೂ ಶಕ್ತಿಯನ್ನ ಒಂದೇ ಸೆಕೆಂಡ್ನಲ್ಲಿ ಠುಸ್ ಮಾಡಿಬಿಡ್ತಿದ್ರು. ಇದೇ ತಾಳ್ಮೆಯಿಂದಲೇ ಹಲವು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
ದಾಖಲೆಗಳ ‘ಮಹಾಗೋಡೆ’!
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ
ಒಟ್ಟು 31,258 ಎಸೆತ, ಸರಿಸುಮಾರು 5,210 ಓವರ್ ಗಳು
ಅತಿ ಹೆಚ್ಚು ನಿಮಿಷಗಳು ಬ್ಯಾಟಿಂಗ್ ಮಾಡಿದ ದಾಖಲೆ ದ್ರಾವಿಡ್ ಹೆಸರಲ್ಲಿ
44,152 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಏಕೈಕ ಬ್ಯಾಟರ್
ಡಕ್ ಅಥವಾ ಸೊನ್ನೆ ಸುತ್ತದೇ ಸತತ ಅತಿ ಹೆಚ್ಚು ಏಕದಿನ ಇನ್ನಿಂಗ್ಸ್
ಸತತ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನ್ನಿಂಗ್ಸ್ ಅಂದ್ರೆ 173 ಇನ್ನಿಂಗ್ಸ್
ಒಂದು ವರ್ಷದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆ
1999ರಲ್ಲಿ ದಾಖಲೆಯ 43 ಏಕದಿನ ಪಂದ್ಯ, ಜೊತೆಯಾಟದಲ್ಲೂ ವಿಶ್ವದಾಖಲೆ
ವೀರೇಂದ್ರ ಸೆಹ್ವಾಗ್ ರೊಂದಿಗೆ 410 ರನ್, ವಿವಿಎಸ್ ಲಕ್ಷ್ಮಣ್ ಜೊತೆ 376 ರನ್
164 ಟೆಸ್ಟ್ ಪಂದ್ಯಗಳ 286 ಇನ್ನಿಂಗ್ಸ್, 36 ಶತಕ ಮತ್ತು 63 ಅರ್ಧಶತಕ
13,222 ರನ್, 344 ಏಕದಿನ ಪಂದ್ಯಗಳ 318 ಇನ್ನಿಂಗ್ಸ್ ಮೂಲಕ 12 ಶತಕ
ಕ್ರಿಕೆಟ್ ಕಾಶಿ ಅಂತಾನೇ ಕರೆಸಿಕೊಳ್ಳೋ ಲಾರ್ಡ್ಸ್ ನಲ್ಲಿ ಮೊದಲ ಟೆಸ್ಟ್
1996 ರಲ್ಲಿ ಸಂಜಯ್ ಮಂಜ್ರೇಕರ್ ಬದಲಿಗೆ ರಾಹುಲ್ ದ್ರಾವಿಡ್ ಸ್ಥಾನ
ಫಸ್ಟ್ ಮ್ಯಾಚಲ್ಲೇ ಕೂಲ್ ಌಂಡ್ ಕಾಮ್ ಆಗಿ ರಾಹುಲ್ 95 ರನ್
ಎದುರಿಸಿದ್ದು ಬರೋಬ್ಬರಿ 267 ಎಸೆತಗಳನ್ನ, ಕೇವಲ ಆರು ಬೌಂಡರಿ
. ಏಕದಿನ ಮಾದರಿಯಲ್ಲೂ ದ್ರಾವಿಡ್ ಬದಲಿ ಆಟಗಾರನಾಗಿಯೇ ಚಾನ್ಸ್
1996ರ ಏಪ್ರಿಲ್ 3 ರಂದು ತಮ್ಮ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ
ಈ ಪಂದ್ಯದಲ್ಲಿ ಭಾರತದ ತಂಡವು 199 ರನ್, ಶ್ರೀಲಂಕಾ 12 ರನ್ ಗಳಿಂದ ಸೋಲು
15 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಟಿ-20ಯಲ್ಲಿ ಆಡಿದ್ದು ಒಂದೇ ಪಂದ್ಯ
2011ರಲ್ಲಿ ಇಂಗ್ಲೆಂಡ್ ವಿರುದ್ಧ ಏಕೈಕ ಟಿ 20 ಪಂದ್ಯದಲ್ಲಿ 21 ಎಸೆತಗಳಲ್ಲಿ 31 ರನ್
ಹೀಗೆ ಆಟಗಾರನಾಗಿ ಅಷ್ಟೇ ಅಲ್ಲದೆ ಕೋಚ್ ಆಗಿಯೂ ದ್ರಾವಿಡ್ ಸಕ್ಸಸ್ಫುಲ್ ಆಗಿದ್ದಾರೆ. ಟೀಮ್ ಇಂಡಿಯಾದ ಯುವ ಆಟಗಾರರನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತರು. ಇವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಸಹ ಗೆದ್ದಿತ್ತು. ಅಲ್ಲದೆ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಾಗಲು ತಂಡಕ್ಕೆ ಇವರದ್ದೇ ಮಾರ್ಗದರ್ಶನ. ದೇಶಕ್ಕೆ ಕೀರ್ತಿ ತಂದ ಸಾಧಕರ ಪಟ್ಟಿಯಲ್ಲಿ ದ್ರಾವಿಡ್ ಹೆಸರು ಮುಂಚೂಣಿಯಲ್ಲಿದೆ. ಸದ್ಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೋಚ್ ಆಗಿ ಅಲ್ಲಿಯೂ ಪ್ರತಿಭಾವಂತ ಕ್ರಿಕೆಟಿಗರಿಗೆ ದಾರಿ ದೀಪವಾಗುತ್ತಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಪಳಗಿದ ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್, ಪೃಥ್ವಿ ಶಾ ಸೇರಿದಂತೆ ಸಾಕಷ್ಟು ಪ್ಲೇಯರ್ಸ್ ಇದ್ದಾರೆ. ಒಟ್ನಲ್ಲಿ ರಾಹುಲ್ ದ್ರಾವಿಡ್ ಅಂದ್ರೆ ಅದು ಬರೀ ಹೆಸರಲ್ಲ. ನಿಸ್ವಾರ್ಥ ಮನಸ್ಸಿನ ಅಪ್ಪಟ ಅಪರಂಜಿಯಂತ ವ್ಯಕ್ತಿತ್ವ.

ನೋಡಿರಿ

