ಫ್ಯಾಷನ್‌ ಫ್ರೂಟ್‌ ಹಣ್ಣು ತಿಂದ್ರೆ ಈ ರೋಗಗಳು ಮಾಯ! –  ಆರೋಗ್ಯ ಪ್ರಯೋಜನಗಳು ಒಂದಾ.. ಎರಡಾ?

ಫ್ಯಾಷನ್‌ ಫ್ರೂಟ್‌ ಹಣ್ಣು ತಿಂದ್ರೆ ಈ ರೋಗಗಳು ಮಾಯ! –  ಆರೋಗ್ಯ ಪ್ರಯೋಜನಗಳು ಒಂದಾ.. ಎರಡಾ?

ಪ್ರಕೃತಿ ಇಲ್ಲದೆ ಮಾನವನ ಬದುಕು ಸಾಧ್ಯವಿಲ್ಲ. ಪ್ರಕೃತಿ ಮತ್ತು ಮಾನವ ಸಂಬಂಧ ಪರಸ್ಪರ ಅವಲಂಬಿತವಾಗಿದೆ. ಪ್ರಕೃತಿಯಲ್ಲಿ ವಿವಿಧ ಬಗೆಯ ಹಣ್ಣುಗಳು ಲಭ್ಯವಿದೆ. ಅವುಗಳಲ್ಲಿ ಕೆಲವು ಹಣ್ಣುಗಳು ವಿಶೇಷವಾದ ಔಷಧೀಯ ಗುಣವನ್ನು ಹೊಂದಿದೆ. ನಿಸರ್ಗದಲ್ಲಿ ಸಿಗುವ ಅಂತಹ ಅದ್ಭುತ ಹಣ್ಣುಗಳಲ್ಲಿ ಪ್ಯಾಷನ್ ಫ್ರೂಟ್ ಸಹ ಒಂದು. ಈ ಹಣ್ಣಿನ ಸೇವನೆ ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಇದನ್ನೂ ಓದಿ: ಕ್ಷಮೆ ಇಲ್ಲ, ಗಲ್ಲು ಶಿಕ್ಷೆ ಜಾರಿಗೊಳಿಸಬೇಕು – ನರ್ಸ್‌ ನಿಮಿಷಾ ಪ್ರಿಯಾ ಮರಣದಂಡನೆಗೆ ಪಟ್ಟು

ಫ್ಯಾಷನ್‌ ಫ್ರೂಟ್‌ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಕಬ್ಬಿಣ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಹಣ್ಣನ್ನು ಸೇವನೆ ಮಾಡೋದ್ರಿಂದ ಅನೇಕ ರೋಗಗಳ ವಿರುದ್ಧ ಹೋರಾಡಬಹುದು. ಪ್ಯಾಶನ್ ಫ್ರೂಟ್ ರಸವು ಗ್ಯಾಸ್ಟ್ರಿಕ್‌, ಅಜೀರ್ಣ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಉಪಯುಕ್ತವಾಗಿದೆ. ಇದರ ನೈಸರ್ಗಿಕ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇನ್ನು ಪ್ಯಾಶನ್ ಫ್ರೂಟ್ ಜ್ಯೂಸ್‌ ನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೀರ್ಘಾವಧಿಯಲ್ಲಿ ಮಧುಮೇಹದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಪ್ಯಾಶನ್ ಫ್ರೂಟ್ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳು ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯಕವಾಗಿವೆ.

ಪ್ಯಾಶನ್ ಫ್ರೂಟ್ ಎಲೆಗಳು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿ. ಈ ಎಲೆಗಳ ರಸ ಅಥವಾ ಕಷಾಯವನ್ನು ತಯಾರಿಸಿ ಊಟಕ್ಕೂ ಮುನ್ನ ಸೇವಿಸುವ ಮೂಲಕ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

Shwetha M