ಸಾವಿರಾರು ಅಡಿ ಎತ್ತರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!

ಈಗಂತೂ ಡೆಸ್ಟಿನೇಷನ್ ವೆಡ್ಡಿಂಗ್, ಪ್ರೀ ವೆಡ್ಡಿಂಗ್ ಶೂಟ್‌ಗಳದ್ದೇ ಕಾರುಬಾರು. ವಿವಾಹ ಎಂದಾಕ್ಷಣ ಈ ಎಲ್ಲವೂ ನೆನಪಿಗೆ ಬಂದು ಬಿಡುತ್ತದೆ. ಕನಸಿನಂತೆ ಮದುವೆ ಆಗ್ಬೇಕು ಅಂತಾ ನವ ಜೋಡಿಗಳು ಪ್ಲ್ಯಾನ್ ಮಾಡ್ತಾರೆ.. ಇದೀಗ ಇಲ್ಲೊಂದು ಜೋಡಿ ಆಕಾಶದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಇದ್ರ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಭಾರತೀಯ ಸೇನೆ ಬಲ ಹೆಚ್ಚಿಸಲಿದೆ ಅಪಾಚೆ ಹೆಲಿಕಾಪ್ಟರ್ – ವಿಶ್ವದ ಅತ್ಯಾಧುನಿಕ ಹೆಲಿಕಾಪ್ಟರ್ ಪಾಕ್ ಗಡಿಯಲ್ಲಿ ನಿಯೋಜನೆ!
ಈಗಿನ ಯುವಕ ಯುವತಿಯರು ತಮ್ಮ ಮದುವೆ ಹೀಗೆ ಆಗ್ಬೇಕು.. ಎಲ್ಲರಿಗಿಂತ ಡಿಫ್ರೆಂಟ್ ಆಗಿ ಮದುವೆ ಆಗ್ಬೇಕು ಅಂತಾ ಕನಸು ಕಾಣ್ತಾರೆ. ಇದೀಗ ಇಲ್ಲೊಂದು ಜೋಡಿ ವಿಮಾನದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಖ್ಯಾತ ಏವಿಯೇಶನ್ ಸ್ಯಾಮ್ ಚುಯಿ ಮತ್ತು ಫಿಯೋನಾ ಆಕಾಶದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಅರಬ್ ಎಮಿರೇಟ್ಸ್‌ನ ಫುಜೈರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಬೋಯಿಂಗ್ 747 ವಿಮಾನದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮದುವೆಯಾದರು. ಅವರ ಮದುವೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಚುಯಿ ತನ್ನ ಪತ್ನಿ ಫಿಯೋನಾ ಜೊತೆ ರೆಡ್ ಕಾರ್ಪೆಟ್ ಮೇಲೆ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಬಿಳಿ ಬಣ್ಣದ ಉಡುಪಿನಲ್ಲಿರುವ ಈ ದಂಪತಿ ಆಕಾಶದಲ್ಲಿ ತಮ್ಮ ಮದುವೆಯ ಸ್ಥಳಕ್ಕೆ ಹೋಗುವಾಗ ನಗುತ್ತಾ ಕ್ಯಾಮೆರಾಗಳತ್ತ ಕೈ ಬೀಸಿದ್ದಾರೆ.
ಇದು “ನಮ್ಮ ಜೀವನದ ಅತ್ಯುತ್ತಮ ದಿನ” ಎಂದು ವಿವರಿಸುತ್ತಾ, ಚುಯಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್, ಹಂಚಿಕೊಂಡಿದ್ದಾನೆ. ಫಿಯೋನಾ ಈ ಹಿಂದೆ ಬರೆದ ಹಾಡನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡುವ ಮೂಲಕ ಆಚರಣೆಯನ್ನು ಇನ್ನಷ್ಟು ವಿಶೇಷವಾಗಿಸಿದಳು. ಅಲ್ಲಿ ಅತಿಥಿಗಳು ಸುತ್ತುವರಿದಿದ್ದು, ದಂಪತಿಯನ್ನು ಅಭಿನಂದಿಸಿದರು. ಹಾಗೂ ಎಲ್ಲರೂ ಸೇರಿ ವಿಮಾನದಲ್ಲಿ ನೃತ್ಯ ಮಾಡಿದರು ಮತ್ತು ಆಟಗಳನ್ನು ಆಡಿದ್ದಾರೆ. ಸಾವಿರಾರು ಅಡಿ ಎತ್ತರದ ಗಾಳಿಯಲ್ಲಿ ದಂಪತಿ ತಮ್ಮ ವಿಶೇಷ ದಿನವನ್ನು ಬಹಳ ಅದ್ಧೂರಿಯಾಗಿ, ಆಚರಿಸಿದ್ದಾರೆ.

ನೋಡಿರಿ

