ಭಾರತಕ್ಕೆ MUST WIN ಚಾಲೆಂಜ್! – 4ನೇ ಟೆಸ್ಟ್.. ಸುದರ್ಶನ್ ವಾಪಸ್!?
ಬುಮ್ರಾಗೆ ರೆಸ್ಟ್ ಕೊಟ್ರೆ ಯಾರಿಗೆ ಚಾನ್ಸ್?

ಭಾರತಕ್ಕೆ MUST WIN ಚಾಲೆಂಜ್! – 4ನೇ ಟೆಸ್ಟ್.. ಸುದರ್ಶನ್ ವಾಪಸ್!?ಬುಮ್ರಾಗೆ ರೆಸ್ಟ್ ಕೊಟ್ರೆ ಯಾರಿಗೆ ಚಾನ್ಸ್?

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗ್ಲೇ ಮೂರು ಪಂದ್ಯಗಳು ಮುಗಿದಿವೆ. ಎರಡು ಮ್ಯಾಚ್ ಗೆದ್ದಿರೋ ಇಂಗ್ಲೆಂಡ್​ ನಾಲ್ಕನೇ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಇನ್ನೊಂದು ಮ್ಯಾಚ್ ಗೆದ್ರೂ ಸರಣಿ ಇಂಗ್ಲೆಂಡ್ ವಶವಾಗುತ್ತೆ. ಬಟ್ ಮೂರನೇ ಪಂದ್ಯದಲ್ಲಿ ಗೆಲ್ಲೋ ಮ್ಯಾಚ್​ನ ಸೋತಿರೋ ಟೀಂ ಇಂಡಿಯಾಗೆ ಸರಣಿಯಲ್ಲಿ ಉಳೀಬೇಕು ಅಂದ್ರೆ ಶತಾಯ ಗತಾಯ ಮುಂದಿನ ಪಂದ್ಯವನ್ನ ಗೆಲ್ಲಲೇಬೇಕು. ಆಗ ಸರಣಿ ಸಮಬಲ ಆಗುತ್ತೆ. ಕೊನೇ ಪಂದ್ಯದ ರಿಸಲ್ಟ್ ಸರಣಿ ಯಾರಿಗೆ ಅನ್ನೋದನ್ನ ಡಿಸೈಡ್ ಮಾಡುತ್ತೆ. ಹೀಗಾಗಿ ತಂಡದಲ್ಲಿ ಬದಲಾವಣೆಗಳೊಂದಿಗೆ ಅಖಾಡಕ್ಕೆ ಇಳಿಯೋಕೆ ಪ್ಲ್ಯಾನ್ ನಡೀತಿದೆ. ಅಲ್ದೇ ಲಾಂಗ್ ಬ್ರೇಕ್ ಕೂಡ ಇರೋದ್ರಿಂದ ಸಾಕಷ್ಟು ಚರ್ಚೆಗಳೂ ನಡೆಯಲಿವೆ.

ಇದನ್ನೂ ಓದಿ : 6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಜುಲೈ 23 ರಿಂದ ಶುರುವಾಗಲಿದೆ. ಅಂದರೆ ಮೂರನೇ ಮತ್ತು ನಾಲ್ಕನೇ ಪಂದ್ಯದ ನಡುವೆ 9 ದಿನಗಳ ಗ್ಯಾಪ್ ಇದೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು ಉಭಯ ತಂಡಗಳಲ್ಲೂ ಒಂದಷ್ಟು ಬದಲಾವಣೆಗಳು ಆಗೋದು ಪಕ್ಕಾ ಇದೆ. ಮುಂದಿನ ಪಂದ್ಯ ಗೆದ್ರೆ ಇಂಗ್ಲೆಂಡ್ ಸರಣಿ ಗೆಲ್ಲುತ್ತೆ.. ಭಾರತ ಗೆದ್ರೆ ಸರಣಿ ಸಮಬಲ ಆಗುತ್ತೆ. ಅಂತಿಮ ಟೆಸ್ಟ್ ಪಂದ್ಯ  ಫೈನಲ್ ಫೈಟ್ ಆಗಿ ಕನ್ವರ್ಟ್ ಆಗುತ್ತೆ. ಹೀಗಾಗಿ 4ನೇ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ವರ್ಕ್ ಲೋಡ್ ಮ್ಯಾನೇಜ್​ಮೆಂಟ್ ಪಾಲಿಸಿ ಪ್ರಕಾರ ನಾಲ್ಕನೇ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯೋ ಸಾಧ್ಯತೆ ಇದೆ. ಸರಣಿಗೂ ಮುನ್ನವೇ ಮೂರೇ ಮ್ಯಾಚ್ ಆಡಿಸೋದು ಅಂತಾ ಬಿಸಿಸಿಐ ಘೋಷಣೆ ಮಾಡಿತ್ತು. ಅದನ್ನೇ ಅನುಸರಿಸಿದ್ರೆ ಬುಮ್ರಾ ಮ್ಯಾಂಚೆಸ್ಟರ್ ಮ್ಯಾಚ್​ನಿಂದ ಹೊರಗುಳಿಯಲಿದ್ದಾರೆ.  ಜಸ್ಪ್ರೀತ್ ಬುಮ್ರಾ ಮೊದಲ ಹಾಗೇ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಸಿರೀಸ್​ನಲ್ಲಿ ಸೆಕೆಂಡ್ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. 2 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ. ಲೀಡ್ಸ್ ಮತ್ತು ಲಾರ್ಡ್ಸ್​ನಲ್ಲಿ ಫೈಫರ್ ಸಾಧನೆ ಮಾಡಿದ್ದಾರೆ. ಜಸ್ಪ್ರೀತ್ ರೆಸ್ಟ್ ಮಾಡಿದ್ರೆ ಅರ್ಶದೀಪ್ ಸಿಂಗ್ ಮ್ಯಾಂಚೆಸ್ಟರ್​ನಲ್ಲಿ ತಮ್ಮ ಟೆಸ್ಟ್ ಡೆಬ್ಯೂ ಮಾಡಬಹುದು. ಇತ್ತ ರಿಷಭ್ ಪಂತ್ ಕೂಡ ಆಡೋದು ಡೌಟ್ ಇದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಸಾಕಷ್ಟು ನೋವು ಅನುಭವಿಸಿದ್ದರು. ಗಾಯದ ಹೊರತಾಗಿಯೂ ಮೊದಲ ಇನ್ನಿಂಗ್ಸ್​ನಲ್ಲಿ 74 ರನ್ ಗಳಿಸಿದ್ದರು. ಸೋ ಮುಂದಿನ ಪಂದ್ಯದಲ್ಲಿ ಕಂಪ್ಲೀಟ್ ರಿಕವರ್ ಆದ್ರೆ ಆಡ್ತಾರೆ ಅಂತಾ ನಾಯಕ ಗಿಲ್ ಕೂಡ ಹೇಳಿದ್ದಾರೆ. 8 ದಿನ ಬ್ರೇಕ್ ಇರೋದ್ರಿಂದ ಪಂತ್ ರಿಕವರ್ ಆಗಬಹುದು. ಇನ್ನು ಕಳೆದ ಮೂರು ಪಂದ್ಯಗಳಲ್ಲೂ ಬಿಗ್ ಸ್ಕೋರ್ ಬಾರಿಸದ ಕರುಣ್ ನಾಯರ್​ರನ್ನ ಮ್ಯಾನೇಜ್​ಮೆಂಟ್ ಡ್ರಾಪ್ ಮಾಡೋ ಚಾನ್ಸಸ್ ಇದೆ. 6 ಇನ್ನಿಂಗ್ಸ್​ಗಳಿಂದ ಕರುಣ್ ಕೇವಲ 131 ರನ್ ಕಲೆ ಹಾಕಿದ್ದಾರೆ. ಸೋ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್​ಗೆ ಮತ್ತೆ ಚಾನ್ಸ್ ನೀಡಬಹುದು. ಉಳಿದಂತೆ ಮೂರನೇ ಪಂದ್ಯದ ಆಟಗಾರರೇ ಕಂಟಿನ್ಯೂ ಆಗ್ತಾರೆ.

ಈಗಾಗ್ಲೇ ಸರಣಿಯಲ್ಲಿ ಲೀಡ್ ಸಾಧಿಸಿರೋ ಇಂಗ್ಲೆಂಡ್ ಕೂಡ ನಾಲ್ಕನೇ ಪಂದ್ಯದಲ್ಲಿ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.  ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಶೋಯೆಬ್ ಬಶೀರ್ ಸರಣಿಯಿಂದ ರೂಲ್ಡ್ ಔಟ್ ಆಗಿದ್ದು ಅವ್ರ ಬದಲಿಗೆ ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 35 ವರ್ಷದ ಸ್ಪಿನ್ನರ್ ಲಿಯಾಮ್ ಡಾಸನ್, 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಹಲವು ವರ್ಷಗಳಿಂದ ಹ್ಯಾಂಪ್‌ಶೈರ್ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದು ಇದೀಗ ನ್ಯಾಷನಲ್ ಟೀಮ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಡಾಸನ್ ಇದುವರೆಗೆ ತಮ್ಮ 212 ಪ್ರಥಮ ದರ್ಜೆ ಪಂದ್ಯಗಳಲ್ಲಿ 371 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 18 ಶತಕಗಳೊಂದಿಗೆ 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಹೀಗಾಗಿ ಅನುಭವಿಯಾಗಿರೋ ಡಾಸನ್ ತಂಡಕ್ಕೆ ಮರಳಿರೋದು ಇಂಗ್ಲೆಂಡ್ ಗೆ ಹೆಚ್ಚಿನ ಬಲ ತಂದಿದೆ.

ಇನ್ನು ನಾಲ್ಕನೇ ಪಂದ್ಯ ನಡೆಯಲಿರೋ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಲ್ಲಿಯವರೆಗೆ 85 ಟೆಸ್ಟ್ ಪಂದ್ಯಗಳನ್ನು ಆಯೋಜನೆ ಮಾಡ್ಲಾಗಿದೆ. ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 32 ಬಾರಿ ಗೆದ್ದಿವೆ. ಹಾಗೇ ಎರಡನೇ ಬಾರಿ ಬ್ಯಾಟ್ ಮಾಡಿದ ತಂಡಗಳು 17 ಸಲ ವಿನ್ ಆಗಿವೆ. ಇನ್ನುಳಿದ 36 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ನಲ್ಲಿ ತೆಂಡೂಲ್ಕರ್-ಅ್ಯಂಡರ್ಸನ್ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತ್ತು. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 336 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ 22 ರನ್​ಗಳ ವಿಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

Shantha Kumari