ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೋ ವಾರ್ನಿಂಗ್ – ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸದಂತೆ ಎಚ್ಚರಿಕೆ

ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೋ ವಾರ್ನಿಂಗ್ –  ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸದಂತೆ ಎಚ್ಚರಿಕೆ

ಭಾರತ, ಚೀನಾ, ಬ್ರೆಜಿಲ್‌ ದೇಶಗಳಿಗೆ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್‌ ರುಟ್ಟೆ  ಎಚ್ಚರಿಕೆ ನೀಡಿದ್ದಾರೆ. ರಷ್ಯಾದೊಂದಿಗೆ ವ್ಯವಹಾರ ಮುಂದುವರಿಸಿದರೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಅಮೆರಿಕದ  ಸೆನೆಟರ್‌ಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಭಾರತ, ಚೀನಾ, ಬ್ರೆಜಿಲ್‌ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?

ಚೀನಾ ಹಾಗೂ ಬ್ರೆಜಿಲ್‌ ಅಧ್ಯಕ್ಷ, ಭಾರತದ ಪ್ರಧಾನಿ ಅವರು, ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸಿದ್ದಾರೆ. ತೈಲ ಮತ್ತು ಅನಿಲ ಖರೀದಿಸುವುದನ್ನು ಮುಂದುವರಿಸುವುದಾದರೆ, ಉಕ್ರೇನ್‌ ಜೊತೆ ಶಾಂತಿ ಮಾತುಕತೆಗೆ ಒತ್ತಡ ಹಾಕಿ. ಇಲ್ಲದಿದ್ದರೆ, ನಾವು 100 ಪ್ರತಿಶತ ದ್ವಿತೀಯ ನಿರ್ಬಂಧಗಳನ್ನು ವಿಧಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ಶಾಂತಿ ಮಾತುಕತೆಗೆ ಬದ್ಧರಾಗುವಂತೆ ಪುಟಿನ್‌ಗೆ ನೇರವಾಗಿ ಒತ್ತಾಯಿಸುವಂತೆ ರುಟ್ಟೆ ಮೂರು ರಾಷ್ಟ್ರಗಳ ನಾಯಕರಿಗೆ ಕರೆ ನೀಡಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು ತಿಳಿಸಿ. ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಡೊನಾಲ್ಡ್ ಟ್ರಂಪ್, ರಷ್ಯಾದ ರಫ್ತುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. 50 ದಿನಗಳಲ್ಲಿ ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ತಿಳಿಸಿದ್ದಾರೆ.

Kishor KV