ಅಯ್ಯಯ್ಯೋ.. ಆಕಾಶದಲ್ಲಿ ಹಾರಾಡೋ ವಿಮಾನವನ್ನೇ ಕದ್ದ ಭೂಪ! – ಆಮೇಲೆ ಏನಾಯ್ತು ಗೊತ್ತಾ?

ಈಗೀಗ ಕಳ್ಳರ ಕಾಟ ಜಾಸ್ತಿಯಾಗಿದೆ. ಚಿನ್ನ.. ದುಡ್ಡು ಬಿಡಿ.. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನವನ್ನ ಕೂಡ ಕಳ್ಳತನ ಮಾಡ್ತಾರೆ.. ಆದ್ರೆ ಇಲ್ಲೊಬ್ಬ ಪೈಲೆಟ್ ವಿಮಾದ ಜೊತೆಯೇ ಪಾರಾರಿಯಾಗಿದ್ದ.. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: ಕಾಳಿ ದೇವಸ್ಥಾನಕ್ಕೆ ಕದಿಯಲು ಬಂದ ಕಳ್ಳನಿಗೆ ಜೋರು ನಿದ್ದೆ – ಬೆಳಗ್ಗೆ ಬಂದು ಗುಡ್ ಮಾರ್ನಿಂಗ್ ಹೇಳಿದ್ರು ಪೊಲೀಸ್ರು
ಸಾಮಾನ್ಯವಾಗಿ ಫ್ಲೈಟ್ ಹೈಜಾಕ್ ಮಾಡೋದು, ರೌಡಿಗಳ ವಿಮಾನದ ಜೊತೆ ಪರಾರಿ ಆಗೋದನ್ನ ಸಿನಿಮಾಗಳಲ್ಲಿ ನೋಡಿರ್ತೇವೆ. ಆದ್ರೆ ಕೆನಡಾದಲ್ಲಿ ಪೈಲೆಟ್ ಸಿನಿಮಾ ರೀತಿಯಲ್ಲೇ ವಿಮಾನದ ಜೊತೆ ಪರಾರಿಯಾಗಿದ್ದಾನೆ. ವಿಮಾನ ಲ್ಯಾಂಡ್ ಮಾಡಿದ ಸಂದರ್ಭದಲ್ಲಿ ಪೈಲಟ್‌ನನ್ನು ಬಂಧಿಸಲಾಗಿದೆ.
ಸಣ್ಣ ಸೆಸ್ನಾ 172 ವಿಮಾನವನ್ನು ಪೈಲೆಟ್ ಕಳ್ಳತನ ಮಾಡಿದ್ದ.. ವಿಮಾನದ ಜೊತೆ ಪರಾರಿಯಾಗ್ತಿದ್ದಂತೆ ಏರ್‌ಪೋರ್ಟ್ ವಿಮಾನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆನಾಡ ಗಡಿ ಪ್ರವೇಶಿಸಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ವಿಮಾನ ಲ್ಯಾಂಡ್ ಆಗುವ ಮುನ್ನವೇ ಏರ್ಪೋರ್ಟ್ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ವಿಮಾನ ಲ್ಯಾಂಡ್ ಆಗ್ತಿದ್ದಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಪೈಲಟ್‌ನನ್ನು ಬಂಧಿಸಿದ್ದಾರೆ. ಪೈಲಟ್‌ನನ್ನು ಬಂಧಿಸುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈವರೆಗೆ ಏರ್‌ಪೋರ್ಟ್ ಅಧಿಕಾರಿಗಳಾಗಲಿ ಅಥವಾ ಪೊಲೀಸರು ವಿಮಾನ ಕದ್ದ ಪೈಲೆಟ್ ಯಾರು ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ವಿಮಾನ ಲ್ಯಾಂಡ್ ಆಗೋವಾಗ ಈತನೊಬ್ಬನೇ ಇದ್ದ ಎಂದು ವರದಿಯಾಗಿದೆ. ಈ ಪುಟಾಣಿ ವಿಮಾನವನ್ನು ಈತ ಕಳ್ಳತನ ಮಾಡಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ಕೆನಡಾದ ವ್ಯಾಂಕೋವರ್ ನಲ್ಲಿಯೇ ಲ್ಯಾಂಡ್ ಮಾಡಲು ನಿರ್ಧರಿಸಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈತ ಲ್ಯಾಂಡ್ ಮಾಡಿರುವ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ನೋಡಿರಿ

