ಕಾಳಿ ದೇವಸ್ಥಾನಕ್ಕೆ ಕದಿಯಲು ಬಂದ ಕಳ್ಳನಿಗೆ ಜೋರು ನಿದ್ದೆ – ಬೆಳಗ್ಗೆ ಬಂದು ಗುಡ್ ಮಾರ್ನಿಂಗ್ ಹೇಳಿದ್ರು ಪೊಲೀಸ್ರು

ಕಾಳಿ ದೇವಸ್ಥಾನಕ್ಕೆ ಕದಿಯಲು ಬಂದ ಕಳ್ಳನಿಗೆ ಜೋರು ನಿದ್ದೆ – ಬೆಳಗ್ಗೆ ಬಂದು ಗುಡ್ ಮಾರ್ನಿಂಗ್ ಹೇಳಿದ್ರು ಪೊಲೀಸ್ರು

ಅದು ಕಾಳಿ ದೇಗುಲ. ಅಲ್ಲಿ ಬೆಲೆಬಾಳುವ ವಸ್ತುಗಳು ದೇವಸ್ಥಾನದಲ್ಲಿದ್ದವು. ಕಾಳಿ ದೇವಿ ಭಕ್ತರು ದೇವಿಯ ಅಲಂಕಾರಕ್ಕೆ ಬೆಲೆಬಾಳುವ ವಸ್ತುಗಳನ್ನ ದೇಣಿಗೆಯಾಗಿ ನೀಡಿದ್ದರು. ಇದರ ಮೇಲೆ ಕಳ್ಳನ ಕಣ್ಣುಬಿದ್ದಿತ್ತು. ಆದ್ರೆ, ದೇವಿಯ ಸನ್ನಿಧಿಗೆ ಬಂದ ಆತನಿಗೆ ಅದೇನಾಗಿತ್ತೋ.. ನೆಮ್ಮದಿಯಲ್ಲಿ ನಿದ್ದೆಗೆ ಜಾರಿದ್ದ. ನಂತರ ಪೊಲೀಸರೇ ಬಂದು ಕಳ್ಳನಿಗೆ ಗುಡ್‌ಮಾರ್ನಿಂಗ್ ಅಂತಾ ಹೇಳಿ ಎಬ್ಬಿಸಿದ್ದಾರೆ.

ಇದನ್ನೂ ಓದಿ:ಚೀನಾದಲ್ಲಿ ಭಯೋತ್ಪಾದನೆ ವಿರುದ್ಧ ಗುಡುಗಿದ ಜೈ ಶಂಕರ್ – ರಾಜಿ ಮಾಡಿಕೊಳ್ಳದೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಎಚ್ಚರಿಕೆ

ಈ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್‌ಭೂಮ್‌ನ ಮಾರುಕಟ್ಟೆ ಪ್ರದೇಶದಲ್ಲಿರುವ ಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಳ್ಳನನ್ನು ವೀರ್ ನಾಯಕ್ ಎಂದು ಗುರುತಿಸಲಾಗಿದೆ. ಕಳ್ಳತನಕ್ಕೆ ಬಂದ ವೀರ್ ನಾಯಕ್, ದೇವಸ್ಥಾನದ ಹಿಂಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದೊಳಗೆ ಕಳವು ಮಾಡಲು ಬರುವ ಮೊದಲೇ  ಕಳ್ಳ ಸೋಮವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಹೆಚ್ಚು ಮದ್ಯ ಸೇವಿಸಿದ್ದನು. ನಂತರ ಕಾಳಿ ದೇವಸ್ಥಾನದ ಮುಂಭಾಗದ ಗೋಡೆಯನ್ನು ಹತ್ತಿ ಬಾಗಿಲಿನ ಬೀಗ ಮುರಿದು ದೇವಸ್ಥಾನದೊಳಗೆ ಪ್ರವೇಶಿಸಿದ್ದಾನೆ. ದೇವಾಲಯದ ಒಳಗಿನ ಕಾಳಿ ಮಾತೆಯ ವಿಗ್ರಹದ ಮೇಲೆ ಅಲಂಕರಿಸಿದ್ದ ಆಭರಣಗಳು ಮತ್ತು ಪೂಜಾ ತಾಳಿ, ಲೋಟ, ಗಂಟೆ, ಅಲಂಕಾರ ಸಾಮಗ್ರಿಗಳು ಇತ್ಯಾದಿಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದನು. ನಂತರ ಅವನಿಗೆ ನಿದ್ರೆ ಬಂದಿದೆ. ಕುಡಿದ ಮತ್ತಿನಲ್ಲಿ ಅವನು ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಮಂಗಳವಾರ ಬೆಳಿಗ್ಗೆ ಜನರು ದೇವಸ್ಥಾನದ ಬಾಗಿಲನ್ನು ನೋಡಿದಾಗ, ದೇವಸ್ಥಾನದ ಒಳಗೆ ಒಬ್ಬ ವ್ಯಕ್ತಿ ನಿದ್ರಿಸುತ್ತಿರುವುದು ಕಂಡು ಬಂತು. ಚೀಲವನ್ನು ತೆರೆದಾಗ, ಅದರಲ್ಲಿ ದೇವಸ್ಥಾನದ ವಸ್ತುಗಳಿರುವುದು ಕಂಡುಬಂದಿತ್ತು. ಅವರು ತಕ್ಷಣ ಬರಜಮ್ಡಾ ಒಪಿ ಉಸ್ತುವಾರಿ ಬಾಲೇಶ್ವರ್ ಒರಾನ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆದರು. ಕಳ್ಳತನ ಮಾಡಲು ದೇವಸ್ಥಾನ ಪ್ರವೇಶಿಸಿದ ಕಳ್ಳ ಗಾಢ ನಿದ್ರೆ ಜಾರಿರುವುದು ಕಂಡು ಬಂತು. ನಾಯಕ್ ಗರ್ಭಗುಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ. ಬರ ಜಮಡಾ ಪೊಲೀಸರು ಸ್ಥಳಕ್ಕೆ ತಲುಪಿ ಕಳ್ಳನನ್ನು ಎಬ್ಬಿಸಿದ್ದಾರೆ. ನಂತರ ಕದ್ದ ಮಾಲುಗಳೊಂದಿಗೆ ವಶಕ್ಕೆ ಪಡೆದಿದ್ದಾರೆ.

Sulekha