ಸಿನಿ ಪ್ರೇಮಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌! – ಇನ್ಮುಂದೆ 200 ರೂ.ಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡ್ಬೋದು!

ಸಿನಿ ಪ್ರೇಮಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌! – ಇನ್ಮುಂದೆ 200 ರೂ.ಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡ್ಬೋದು!

ಸಿನಿ ಪ್ರೇಮಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಇನ್ಮುಂದೆ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗಧಿಪಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಜೂ. ಎನ್​ಟಿಆರ್,  ಹೃತಿಕ್ ರೋಷನ್‌ನಿಂದ ರಶ್ಮಿಕಾ ಸಿನಿಮಾ ಪ್ರಚಾರ! – ಕೂರ್ಗ್‌ ಬ್ಯೂಟಿ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುತ್ತಾ?

ಕೊರೊನಾ ಬಳಿಕ ಜನರು ಓಟಿಟಿ ಪ್ಲಾಟ್‌ಫಾರ್ಮ್‌ ಅನ್ನ ಹೆಚ್ಚು ಅವಲಂಬಿಸಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೆಲವೇ ವಾರಗಳಲ್ಲಿ ಹೊಸ ಸಿನಿಮಾಗಳು ಒಟಿಟಿಗೆ ಬರಲು ಆರಂಭಿಸಿದವು. ಒಟಿಟಿ ಬಜೆಟ್‌ ಫ್ರೆಂಡ್ಲಿ ಆಗಿರೋದ್ರಿಂದ ಜನ ಥಿಯೇಟರ್‌ ಗೆ ಬರಲು ಹಿಂದೇಟು ಹಾಕಿದ್ದಾರೆ. ಇದು ಚಿತ್ರಮಂದಿರಗಳ ವ್ಯವಹಾರಕ್ಕೆ ಪೆಟ್ಟುಕೊಟ್ಟಂತಾಗಿದೆ. ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರು ಬಾರದೇ ಇರುವುದರಿಂದ ಅನೇಕ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕರ್ನಾಟಕದಲ್ಲಿಯೇ ಪರಭಾಷೆ ಸಿನಿಮಾಗಳು ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಪರಭಾಷೆ ಸಿನಿಮಾಗಳ ಟಿಕೆಟ್​ಗಳು ಸಾವಿರ ರೂಪಾಯಿ ಮೀರಿದ ಉದಾಹರಣೆ ಕೂಡ ಇದೆ. ಆದ್ದರಿಂದ ಟಿಕೆಟ್ ಬೆಲೆ ಕಡಿಮೆ ಆಗಬೇಕು ಎಂಬುದು ಬಹುದಿನಗಳ ಬೇಡಿಕೆ ಆಗಿತ್ತು. ಇದೀಗ ಕಡೆಗೂ ರಾಜ್ಯ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿದೆ.

ರಾಜ್ಯದ ಎಲ್ಲ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಇನ್ಮುಂದೆ ಏಕರೂಪದ ದರ ಇರಬೇಕು ಎಂದು ಸರ್ಕಾರ ಆದೇಶಿಸಿದೆ. ಆ ಮೂಲಕ ರಾಜ್ಯಾದ್ಯಂತ ಒಂದೇ ದರ ನಿಗದಿ ಮಾಡಲಾಗಿದೆ. ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂ. ಮೀರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯ ಆಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿದೆ.  ಇನ್ಮುಂದೆ ಪ್ರೇಕ್ಷಕರಿಗೆ ಟಿಕೆಟ್ ಬೆಲೆಯ ಹೊರೆ ಕಡಿಮೆ ಆಗಲಿದೆ. ಇದರಿಂದ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

Shwetha M