ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ – 4ನೇ ಪಂದ್ಯ.. 3 ಸೂತ್ರ ಸಿದ್ಧ.. ಕೈಕೊಟ್ಟವರನ್ನ ಕೈ ಬಿಟ್ಟು ಗೆಲ್ತಾರಾ?

ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದ ಭಾರತ ಮೂರನೇ ಮ್ಯಾಚ್ನೂ ಗೆಲ್ಲೋ ಕಾನ್ಫಿಡೆನ್ಸ್ನಲ್ಲೇ ಇತ್ತು. ಟಾರ್ಗೆಟ್ ಕೂಡ ಕಮ್ಮಿಯೇ ಇತ್ತು. ಬಟ್ ಅದೇನು ಓವರ್ ಕಾನ್ಫಿಡೆನ್ಸೋ.. ಇಲ್ಲ ಲಾರ್ಡ್ಸ್ ಪಿಚ್ ಬೌಲರ್ಗಳಿಗೆ ಪ್ಲಸ್ ಆಯ್ತೋ ಅಥವಾ ಬ್ಯಾಡ್ ಲಕ್ ಅನ್ಬೇಕೋ ಗೊತ್ತಿಲ್ಲ. ಅಂತಿಮವಾಗಿ ಆಂಗ್ಲರೇ ಮ್ಯಾಚ್ ಗೆದ್ರು. 22 ರನ್ ಗಳಿಂದ ಭಾರತವನ್ನ ಸೋಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸದ್ಯ ಸರಣಿಯ ಮುಂದಿನ ಪಂದ್ಯ ಜುಲೈ 23ರಂದು ಮ್ಯಾಂಚೆಸ್ಟರ್ನಲ್ಲಿ ಆರಂಭ ಆಗ್ಲಿದ್ದು, ಈ ಪಂದ್ಯದಿಂದ ಕೆಲ ಆಟಗಾರರನ್ನ ಕೈಬಿಡಲು ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ : ಕೆಣಕಿ ಕೆಟ್ಟ ಭಾರತ.. ಗೆದ್ದ ಇಂಗ್ಲೆಂಡ್ – ಭಾರತಕ್ಕೆ ಸ್ಲೆಡ್ಜ್ ರಿವರ್ಸ್ ಆಯ್ತಾ?
ಕರುಣ್ ನಾಯರ್ ಮೇಲೆ ಈ ಸಿರೀಸ್ನಲ್ಲಿ ಸಿಕ್ಕಾಪಟ್ಟೆ ಹೋಪ್ಸ್ ಇತ್ತು. 8 ವರ್ಷಗಳ ನಂತರ ಈ ಸರಣಿಯ ಮೂಲಕ ಟೀಂ ಇಂಡಿಯಾಗೆ ಮರಳಿದ ಕರುಣ್ ನಾಯರ್, ಹೇಗೆ ಪ್ರದರ್ಶನ ನೀಡುತ್ತಾರೆ ಅನ್ನೋ ಕುತೂಹಲ ಇತ್ತು. ಆದರೆ ಲೀಡ್ಸ್ನಿಂದ ಲಾರ್ಡ್ಸ್ ವರೆಗಿನ ಪ್ರತಿಯೊಂದು ಪಂದ್ಯದಲ್ಲೂ ಕರುಣ್ ನಾಯರ್ ನಿರಾಸೆ ಮೂಡಿಸಿದರು. ಮೊದಲ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್ ಅವರನ್ನು ಒಂದು ಟೆಸ್ಟ್ ಪಂದ್ಯದ ಬಳಿಕ ಹೊರಗಿಡಲಾಯಿತು. ಆದಾಗ್ಯೂ ಕರುಣ್ಗೆ ಎರಡನೇ ಮತ್ತು ಮೂರನೇ ಟೆಸ್ಟ್ಗಳಲ್ಲಿಯೂ ಆಡುವ ಅವಕಾಶ ನೀಡಲಾಯಿತು. ಆದರೆ ಎಲ್ಲಾ ಇನ್ನಿಂಗ್ಸ್ಗಳಲ್ಲಿ ಕರುಣ್ ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಈ ಸರಣಿಯಲ್ಲಿ, ಟೀಂ ಇಂಡಿಯಾದ ಅಗ್ರ ಕ್ರಮಾಂಕದಿಂದ ಅರ್ಧಶತಕವನ್ನೂ ಬಾರಿಸದ ಏಕೈಕ ಬ್ಯಾಟ್ಸ್ಮನ್ ಎಂದರೆ ಅದು ನಾಯರ್. ನಾಯರ್ ಆಡಿರುವ 3 ಟೆಸ್ಟ್ಗಳ 6 ಇನ್ನಿಂಗ್ಸ್ಗಳಲ್ಲಿ ಕೇವಲ 131 ರನ್ ಮಾತ್ರ ಬಾರಿಸಿದ್ದಾರೆ. ಒಂದೇ ಒಂದು ಇನ್ನಿಂಗ್ಸ್ನಲ್ಲೂ ಅರ್ಧಶತಕ ಕೂಡ ಅವ್ರ ಬ್ಯಾಟಿಂದ ಬಂದಿಲ್ಲ. ಟಾಪ್ ಆರ್ಡರ್ ನಲ್ಲಿ ಕೈಕೊಡ್ತಿರೋ ಕರುಣ್ಗೆ ಮುಂದಿನ ಪಂದ್ಯದಿಂದ ಡ್ರಾಪ್ ಮಾಡಿದ್ರೂ ಅಚ್ಚರಿ ಇಲ್ಲ.
ಇನ್ನು ಮುಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡೋದು ಕೂಡ ಡೌಟಿದೆ. ಯಾಕಂದ್ರೆ ಟೆಸ್ಟ್ ಸರಣಿಗೂ ಮುನ್ನ ಬುಮ್ರಾ ಈ ಸರಣಿಯಲ್ಲಿ ಕೇವಲ 3 ಟೆಸ್ಟ್ ಗಳನ್ನು ಆಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಲೀಡ್ಸ್ ಮತ್ತು ಲಾರ್ಡ್ಸ್ ಟೆಸ್ಟ್ ಆಡಿದ್ದ ಬುಮ್ರಾಗೆ ಎಡ್ಜ್ಬಾಸ್ಟನ್ ಟೆಸ್ಟ್ನಿಂದ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಟೀಂ ಇಂಡಿಯಾ ಮುಂದಿನ ಟೆಸ್ಟ್ನಲ್ಲೂ ಅವರಿಗೆ ವಿಶ್ರಾಂತಿ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದು ಈಗ ಪ್ರಶ್ನೆಯಾಗಿದೆ. ಅದೂ ಅಲ್ದೇ ಮುಂದಿನ ಟೆಸ್ಟ್ಗೆ 9 ದಿನಗಳ ಬ್ರೇಕ್ ಇದೆ. ಹೀಗಾಗಿ ಟೀಂ ಇಂಡಿಯಾ ಈ ಗ್ಯಾಪ್ನಲ್ಲಿ ರೆಸ್ಟ್ ನೀಡಿ ಮ್ಯಾಂಚೆಸ್ಟರ್ನಲ್ಲಿ ಕಣಕ್ಕಿಳಿಸುತ್ತಾರೋ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ. ಗೌತಮ್ ಗಂಭೀರ್ ಮತ್ತು ನಾಯಕ ಶುಭ್ಮನ್ ಗಿಲ್ ಈಗಾಗಲೇ ನಿರ್ಧರಿಸಿದ ಸೂತ್ರಕ್ಕೆ ಬದ್ಧರಾಗಿದ್ದರೆ, ಬುಮ್ರಾಗೆ ವಿಶ್ರಾಂತಿ ನೀಡುವುದು ಗ್ಯಾರಂಟಿ.
ಲಾರ್ಡ್ಸ್ನಲ್ಲಿ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ರನ್ನ ಪ್ಲೇಯಿಂಗ್ 11ನಲ್ಲಿ ಆಡಿಸಿದ ಮೇಲೆ ಸಾಕಷ್ಟು ಪ್ರಶ್ನೆಗಳು ಎದಿದ್ದವು. ಮುಖ್ಯ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟು ಸುಂದರ್ ಅವರನ್ನು ಮುಂದುವರೆಸಿದ್ದು, ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಆದರೆ ಲಾರ್ಡ್ಸ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಸುಂದರ್ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಆದಾಗ್ಯೂ ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ನಲ್ಲಿ ಎಫೆಕ್ಟಿವ್ ಆಗಿರಲಿಲ್ಲ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಕುಲ್ದೀಪ್ಗೆ ಚಾನ್ಸ್ ಕೊಡುತ್ತಾ ಅಥವಾ ಅವರ ಸ್ಥಾನದಲ್ಲಿ ನಾಲ್ಕನೇ ವೇಗಿಗೆ ತಂಡದಲ್ಲಿ ಸ್ಥಾನ ನೀಡುತ್ತಾ ಅನ್ನೋ ಕ್ಯೂರಿಯಾಸಿಟಿ ಇದೆ.

ನೋಡಿರಿ

