ಸೇಫ್ ಆಗಿ ಭೂಮಿಗೆ ಬಂದ ಶುಭಾಂಶು ಶುಕ್ಲಾ – ಯಶಸ್ವಿಯಾಗಿ ಮುಗಿದ ನಾಲ್ವರ ಗಗನಯಾತ್ರೆ

ಸೇಫ್ ಆಗಿ ಭೂಮಿಗೆ ಬಂದ ಶುಭಾಂಶು ಶುಕ್ಲಾ – ಯಶಸ್ವಿಯಾಗಿ ಮುಗಿದ ನಾಲ್ವರ ಗಗನಯಾತ್ರೆ

18 ದಿನ ಬಾಹ್ಯಾಕಾಶದಲ್ಲೇ ವಾಸ ಮಾಡಿ  ವಿವಿಧ ಅಧ್ಯಯನ ನಡೆಸಿದ  ಶುಭಾಂಶು ಶುಕ್ಲಾ ಸೇಫ್ ಆಗಿ ಭೂಮಿಗೆ ಬಂದಿದ್ದಾರೆ. ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನಾಲ್ವರು ಗಗನಯಾತ್ರಿಗಳು ಸೇಫ್ ಆಗಿ  ಲ್ಯಾಂಡ್​ ಆದ್ರು.

ಇದನ್ನೂ ಓದಿ: ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಜೀವ ಉಳಿಸೋಕೆ ಕಸರತ್ತು – ಮರಣದಂಡನೆ ಮುಂದೂಡಿಕೆ ?

ಜೂನ್ 25ರ ಬುಧವಾರ ಅಂತರಿಕ್ಷಯಾನ ಹೊರಟಿದ್ದ ಯಾತ್ರಿಗಳು.. 26ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು.. ಇದೀಗ ಭಾರತದ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಮಂಗಳವಾರ ( ಇಂದು) ಮಧ್ಯಾಹ್ನ   3.01 ರ ಸುಮಾರಿಗೆ  ಭೂಮಿಗೆ ಬಂದ್ರು.

ಐಎಸ್‌ಎಸ್‌ನಲ್ಲಿ 433 ಗಂಟೆ ಕಳೆದು, 288 ಬಾರಿ ಭೂಮಿಗೆ ಪ್ರದಕ್ಷಿಣೆ ಹಾಕಿದ್ದ ಶುಕ್ಲಾ, ಪೆಗ್ಗಿ ವಿಟ್ಸನ್‌, ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ಟಿಬೋರ್‌ ಕಾಪು ಭೂಮಿಗೆ ಇಳಿಯುತ್ತಿದ್ದಂತೆ ಎಲ್ಲರ ಸಂಭ್ರಮಿಸಿದ್ರು. ಅದರಲ್ಲೂ ಶುಕ್ಲಾ ಅವರ ತಂದೆ, ತಾಯಿ ದೇವರಿಗೆ ಕೈ ಮುಗಿದು, ಖುಷಿಯಲ್ಲಿ ಕಣ್ಣೀರು ಸುರಿಸಿದ್ರು.

 

Kishor KV