ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಕಾವ್ಯಮಾರನ್ – RCB ಮಾಜಿ ವೇಗಿ SRH ತಂಡಕ್ಕೆ ಬೌಲಿಂಗ್ ಕೋಚ್

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಕಾವ್ಯಮಾರನ್ –  RCB ಮಾಜಿ ವೇಗಿ SRH ತಂಡಕ್ಕೆ ಬೌಲಿಂಗ್ ಕೋಚ್

2026 ಐಪಿಎಲ್​ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಕಾವ್ಯಮಾರನ್ ತಂಡ ಸಾಕಷ್ಟು ಮುಖಭಂಗಕ್ಕೆ ಒಳಗಾಗಿತ್ತು. ಹೀಗಾಗಿ ಹೈದರಾಬಾದ್ ಪ್ರಾಂಚೈಸಿ ಈಗಲೇ ಇಡೀ ತಂಡಕ್ಕೆ ಸರ್ಜರಿ ಶುರುಮಾಡಿದೆ. ಜೊತೆಗೆ ಮುಂದಿನ ಐಪಿಎಲ್‌ನಲ್ಲಿ ಗೆಲುವು ಪಡೆಯಲು ಈಗಲೇ ಕೋಚ್‌ಗಳ ಹುಡುಕಾಟದಲ್ಲಿ ಸಕ್ಸಸ್ ಕೂಡಾ ಆಗಿದೆ.

ಇದನ್ನೂ ಓದಿ:HITಮ್ಯಾನ್ ​ಗಿಲ್ಲ ODI ಕ್ಯಾಪ್ಟನ್ಸಿ – ಆಸೀಸ್ ಸರಣಿಗೆ ಗಿಲ್ ನಾಯಕ?

ಸನ್‌ರೈಸರ್ಸ್ ಹೈದರಾಬಾದ್ ತಂಡವು 2026ರ ಐಪಿಎಲ್​ಗೆ ಮಾಜಿ ಭಾರತೀಯ ವೇಗದ ಬೌಲರ್ ವರುಣ್ ಆರೋನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಐಪಿಎಲ್​ನಲ್ಲಿ ಈ ಹಿಂದೆ ಆರ್​ಸಿಬಿ ತಂಡದ ಪರ ಆಡಿದ್ದ ವರುಣ್, ಈಗ ತಮ್ಮ ಅನುಭವವನ್ನು SRH ತಂಡಕ್ಕೆ ನೀಡಲಿದ್ದಾರೆ. ಇದರಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಹೊಸ ಶಕ್ತಿ ಸಿಗುವ ನಿರೀಕ್ಷೆಯಿದೆ. ವೇಗದ ಬೌಲಿಂಗ್ ಮೂಲಕ ಟೀಂ ಇಂಡಿಯಾದಲ್ಲೂ ವರುಣ್ ಆರೋನ್ ಹೆಸರು ಮಾಡಿದ್ದರು. ಕಳೆದ ಸೀಸನ್​ನಲ್ಲಿ ತಂಡದ ಭಾಗವಾಗಿದ್ದ ಜೇಮ್ಸ್ ಫ್ರಾಂಕ್ಲಿನ್ ಬದಲಿಗೆ ವರುಣ್ ಆರೋನ್ ಅವರನ್ನು ತಂಡಕ್ಕೆ ನೇಮಕಗೊಳ್ಳಲಾಗಿದ್ದು, ಈ ಮಾಹಿತಿಯನ್ನು ಸ್ವತಃ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೀಡಿದೆ.

ವರುಣ್ ಆರೋನ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಆಡಿದ್ದಾರೆ . ಈ ವರ್ಷದ ಆರಂಭದಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವರುಣ್​ಗೆ ಈಗ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿರುವ ಎಸ್​ಆರ್​​ಹೆಚ್, ‘‘ನಮ್ಮ ಕೋಚಿಂಗ್ ಸಿಬ್ಬಂದಿಗೆ ಆಕ್ರಮಣಕಾರಿ ಬೌಲರ್‌ಗೆ ಸ್ವಾಗತ . ವರುಣ್ ಆರೋನ್ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಹೊಸ ಬೌಲಿಂಗ್ ಕೋಚ್ ಆಗಿರುತ್ತಾರೆ’ ಎಂದು ಬರೆದುಕೊಂಡಿದೆ . ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ತಮ್ಮ ವೇಗದಿಂದ ಎಲ್ಲರನ್ನೂ ಮೆಚ್ಚಿಸಿದ್ದ ವರುಣ್​ಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಇದಕ್ಕೆ ಕಾರಣ ಅವರ ಇಂಜುರಿ ಸಮಸ್ಯೆ. ಈ ಸಮಸ್ಯೆಯಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ವರ್ಷ ನಡೆಯಲಿಲ್ಲ. 2011 ರಲ್ಲಿ ಅಂತರರಾಷ್ಟ್ರೀಯ ವೃತ್ತಿಜೀವನ ಪ್ರಾರಂಭಿಸಿದ ವರುಣ್ ಆರೋನ್, 2015 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಸಮಯದಲ್ಲಿ, ಅವರು 9 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು, ಆಡಿದ 9 ಟೆಸ್ಟ್‌ಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದ್ದ ವರುಣ್, ಏಕದಿನ ಮಾದರಿಯಲ್ಲಿ 11 ವಿಕೆಟ್‌ಗಳನ್ನು ಉರುಳಿಸಿದ್ದರು. ಇದಲ್ಲದೆ, ವರುಣ್ 52 ಐಪಿಎಲ್ ಪಂದ್ಯಗಳನ್ನು ಆಡಿದ್ದು 50 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

Sulekha