ರಾಮಾಯಣ ಸಿನಿಮಾ ಬಜೆಟ್ 4 ಸಾವಿರ ಕೋಟಿ! – ಯಶ್ ಸಂಭಾವನೆ ಎಷ್ಟು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಮಾಯಣ ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡ್ತಿವೆ. ಇದೀಗ ಸಿನಿಮಾದ ಬಜೆಟ್ ಸಾಕಷ್ಟು ಚರ್ಚೆಯಲ್ಲಿದೆ. ರಾಮಾಯಣ ಸಿನಿಮಾದ ಬಜೆಟ್ ಬಗ್ಗೆ ನಿರ್ದೇಶಕರೇ ಅಪ್ಡೇಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರಿಗೆ ಬಿಗ್ ಶಾಕ್ – ಆಗಸ್ಟ್ 1 ರಿಂದ ಆಟೋ ದರ ಏರಿಕೆ!
ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾ ರಾಮಾಯಣ ರಿಲೀಸ್ ಮುನ್ನವೇ ದಾಖಲೆ ಬರೆಯುತ್ತಿದೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಪ್ರಮುಖರಲ್ಲಿ ನಿಮಿತ್ ಮಲ್ಹೋತ್ರಾ ಕೂಡ ಒಬ್ಬರು. ಇವರ ಜೊತೆ ರಣಬೀರ್ ಕಪೂರ್, ಯಶ್ ಮೊದಲಾದವರು ಬಂಡವಾಳ ಹೂಡಿದ್ದಾರೆ. ನಿಮಿತ್ ಅವರು ಈ ಸಿನಿಮಾದ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ಬಜೆಟ್ ಊಹೆಗೂ ಮೀರಿದೆ. ಈ ಸಿನಿಮಾದ 2 ಪಾರ್ಟ್ ನ ಬಜೆಟ್ ಬರೋಬ್ಬರಿ 50 ಮಿಲಿಯನ್ ಅನ್ನೋ ವಿಚಾರ ರಿವೀಲ್ ಆಗಿದೆ.
ರಾಮಾಯಣ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡೂ ಪಾರ್ಟ್ನ ಮೊತ್ತ ಸೇರಿದರೆ 50 ಮಿಲಿಯನ್ ಡಾಲರ್ ಆಗಲಿದೆ. ಅಂದರೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ. ನಾವು ವಿಶ್ವದ ಅತಿ ದೊಡ್ಡ ಸಿನಿಮಾ ಮಾಡುತ್ತಿದ್ದೇವೆ. ಅದ್ಭುತ ಸ್ಟೋರಿ ಮತ್ತು ಈ ಚಿತ್ರವನ್ನು ವಿಶ್ವವೇ ನೋಡಬೇಕು. ಆದಾಗ್ಯೂ ಹಾಲಿವುಡ್ ಸಿನಿಮಾಗಳಿಗಿಂತ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಹಣವೇ ಎಲ್ಲವೂ ಅಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ. ಅಂದರೆ ಪ್ರತಿ ಪಾರ್ಟ್ಗೆ 2 ಸಾವಿರ ಕೋಟಿ ರೂಪಾಯಿ ಖರ್ಚಾದಂತೆ ಆಗಿದೆ.
ಈ ಚಿತ್ರಕ್ಕೆ ಯಶ್ ಅವರು ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಬದಲಿಗೆ ತಮಗೆ ಸಂಭಾವನೆ ರೂಪದಲ್ಲಿ ಬರಬೇಕಿದ್ದ 100 ಕೋಟಿ ರೂಪಾಯಿ ಹಣವನ್ನು ಅವರು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಮೂಲಕ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಅವರು ಚಿತ್ರದ ಮೇಲೆ 100-150 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರು ಇನ್ನೂ ಹೆಚ್ಚಿನ ಹಣವನ್ನು ಹಾಕಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ನೋಡಿರಿ

