10 ದಶಕಗಳ ಕಾಲ ಪ್ರೀತಿ, 7 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ – ಸೈನಾ ಮತ್ತು ಕಶ್ಯಪ್ ಜೋಡಿ ದೂರ.. ದೂರ

10 ದಶಕಗಳ ಕಾಲ ಪ್ರೀತಿ, 7 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ – ಸೈನಾ ಮತ್ತು ಕಶ್ಯಪ್ ಜೋಡಿ ದೂರ.. ದೂರ

ಬ್ಯಾಡ್ಮಿಂಟನ್ ತಾರಾ ದಂಪತಿ ತಮ್ಮ 7 ವರ್ಷಗಳ ದಾಂಪತ್ಯ ಜೀವನದಿಂದ ದೂರಾಗುವುದಾಗಿ ಘೋಷಿಸಿದ್ದಾರೆ. ಸೈನಾ ನೆಹ್ವಾಲ್ ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ದೂರ ಆಗುತ್ತಿರುವ ಬಗ್ಗೆ, ಯಾಕೆ ದೂರ ದೂರ ಆಗುತ್ತಿದ್ದೇವೆ ಎಂಬ ಬಗ್ಗೆಯೂ ತಿಳಿಸಿದ್ದಾರೆ.

ಇದನ್ನೂ ಓದಿ:23 ವರ್ಷದ ಯಾನಿಕ್ ಸಿನ್ನರ್ ವಿಂಬಲ್ಡನ್ ದೊರೆ – ಸ್ಪೇನ್ ಟೆನ್ನಿಸ್ ಕಿಂಗ್ ಅಲ್ಕರಾಝ್ ಗರ್ವಭಂಗ

ಸೈನಾ ನೆಹ್ವಾಲ್ ಇನ್​ಸ್ಟಾಗ್ರಾಮ್​​ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಕಶ್ಯಪ್ ಜೊತೆಗಿನ 7 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ‘ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ನೆಹ್ವಾಲ್ ಬರೆದುಕೊಂಡಿದ್ದಾರೆ.

ಸೈನಾ ಮತ್ತು ಕಶ್ಯಪ್ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ಬೆಳೆದರು. ಸೈನಾ ಒಲಿಂಪಿಕ್​ನಲ್ಲಿ ಕಂಚು ಮತ್ತು ವಿಶ್ವದ ನಂ. 1 ಶ್ರೇಯಾಂಕದೊಂದಿಗೆ ಜಾಗತಿಕ ತಾರೆಯಾಗಿದ್ದಾರೆ. ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಹೆಸರು ಮಾಡಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿ 2018 ರಲ್ಲಿ ವಿವಾಹವಾಗಿತ್ತು ಜೋಡಿ. ಬ್ಯಾಡ್ಮಿಂಟನ್‌ನಿಂದ ನಿವೃತ್ತರಾದ ನಂತರ ಕಶ್ಯಪ್ ಕೋಚಿಂಗ್‌ಗೆ ತಿರುಗಿದರು. ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಸೈನಾಗೆ ತರಬೇತಿ ನೀಡಿದರು. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಕಶ್ಯಪ್ ಕೋಚ್ ಆಗಿದ್ದರು. 2016ರ ನಂತರ ಸೈನಾ ಎದುರಿಸಿದ ಗಾಯಗಳಿಂದ ಚೇತರಿಸಿಕೊಳ್ಳಲು ಕಶ್ಯಪ್ ಸಹಾಯ ಮಾಡಿದ್ದರು. ಕಶ್ಯಪ್ ಮೈದಾನದಲ್ಲಿ ಮತ್ತು ಪಂದ್ಯಾವಳಿಗಳಲ್ಲಿ ನೆಹ್ವಾಲ್​ಗೆ ಗೇಮ್ ಸ್ಟ್ಯಾಟರ್ಜಿಗಳನ್ನು ನೀಡುತ್ತಿದ್ದರು. ನೆಹ್ವಾಲ್ ಕೊನೆಯ ಬಾರಿಗೆ ಜೂನ್ 2023 ರಲ್ಲಿ ವೃತ್ತಿಪರ ಸರ್ಕ್ಯೂಟ್‌ನಲ್ಲಿ ಆಡಿದ್ದಾರೆ. ನೆಹ್ವಾಲ್ ಇನ್ನೂ ಬ್ಯಾಡ್ಮಿಂಟನ್​​ಗೆ ನಿವೃತ್ತಿ ಘೋಷಿಸಿಲ್ಲ.

Sulekha