ರಿಷಬ್ ಕಂಡ್ರೆ ಗಂಭೀರ್‌ಗೆ ಆಗಲ್ಲ ಯಾಕೆ?- ಕೋಚ್‌ಗೆ ಬೇಕಾ ಪಂತ್ ಫೆಲ್ಯೂರ್?
Ro-Koಗೆ ಬಂದ ಗತಿ ಪಂತ್‌ಗೆ ಬರುತ್ತಾ?

ರಿಷಬ್ ಕಂಡ್ರೆ ಗಂಭೀರ್‌ಗೆ ಆಗಲ್ಲ ಯಾಕೆ?-   ಕೋಚ್‌ಗೆ  ಬೇಕಾ ಪಂತ್ ಫೆಲ್ಯೂರ್?Ro-Koಗೆ ಬಂದ ಗತಿ ಪಂತ್‌ಗೆ ಬರುತ್ತಾ?

ಟೀಂ ಇಂಡಿಯಾದಲ್ಲಿ ಯಾವುದೂ ಸರಿ ಇಲ್ವಾ? ಪಂತ್‌ನ ಕಂಡ್ರೆ ಗೌತಮ್‌ಗೆ ಆಗಲ್ವಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಅಂದಹಾಗೇ  ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸೋಲು ಕಂಡಿದೆ. 2ನೇ ಟೆಸ್ಟ್‌ ನಲ್ಲಿ ಭಾರತ ಗೆದ್ದಿದೆ. 3ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಆದ್ರೆ ಪಂತ್ ಮತ್ತು ಗಂಭೀರ್ ನಡೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆ ಹುಟ್ಟಿಕೊಂಡಿದೆ.

ರಿಷಭ್ ಪಂತ್ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ನಡುವೆ ಸಂಬಂಧಗಳು ಸರಿಯಾಗಿಲ್ಲ ಅನ್ನೋದ್ದನ್ನ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಚಾಂಪಿಯನ್ಸ್ ಟ್ರೋಫಿಯ ವೇಳೆ ಗೌತಮ್ ಗಂಭೀರ್‌ ಕೆಎಲ್ ರಾಹುಲ್ ತಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಹೇಳಿದ್ದರು. ಈ ಮೂಲಕ ರಿಷಭ್‌ ಪಂತ್‌ ಅವರನ್ನು ಚಾಂಪಿಯನ್ಸ್ ಟ್ರೋಫಿಯುದಕ್ಕೂ ಬೆಂಚ್ ಮೇಲೆ ಕೂರಿಸಿದ್ದರು. ಈ ವೇಳೆ ಪಂತ್ ಸಹ ತಮ್ಮ ಸಿಟ್ಟನ್ನು ಸಾಮಾಜಿಕ ತಾಣದಲ್ಲಿ ಹೊರ ಹಾಕಿದ್ದರು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವುದು ಈಗ ಇತಿಹಾಸ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಮುಗಿದು ಸರಿ ಸುಮಾರು 6 ತಿಂಗಳುಗಳೇ ಕಳೆದಿವೆ. ಈಗ ಟೀಮ್ ಇಂಡಿಯಾ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಈ ವೇಳೆ ರಿಷಭ್‌ ಪಂತ್ ಹಾಗೂ ಕೆಎಲ್ ರಾಹುಲ್ ಇಬ್ಬರೂ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಗೌತಮ್‌ ಗಂಭೀರ್‌ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೇ ವೇಳೆ ರಿಷಭ್ ಹಾಗೂ ಗಂಭೀರ್ ನಡುವಿನ ಮುನಿಸು ಇನ್ನು ತಣ್ಣಗೆ ಆಗಿಲ್ಲ ಎಂಬುದು ತಿಳಿಯುತ್ತದೆ.
ತಣ್ಣಗಾಗದ ರಿಷಬ್ , ಗೌತಮ್ ಮುನಿಸು

ಅಂದಹಾಗೇ ಮೊದಲ ಟೆಸ್ಟ್ ಪಂದ್ಯ ವೇಳೆ ಪತ್ರಿಕಾಗೋಷ್ಠೀಯಲ್ಲಿ ರಿಷಭ್ ಪಂತ್‌ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಏನು ಹೇಳುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಆಗ ಗಂಭೀರ್‌ ನೀವು ಹೀಗೆ ಹೇಳುತ್ತಿದ್ದರೆ ಅದು ಒಳ್ಳೆಯದು. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್, ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಶುಭಮನ್ ಗಿಲ್ ಶತಕ ಬಾರಿಸಿದರು. ಈ ಬಗ್ಗೆಯೂ ಮಾತನಾಡಬೇಕು. ನನಗೆ ಅದು ಸಹ ಇಷ್ಟವಾಗುತ್ತದೆ. ಕೆಎಲ್ ರಾಹುಲ್ ಶತಕ ಬಾರಿಸಿದ್ದಾರೆ. ನೀವು ಪ್ರಶ್ನೆಯನ್ನು ಇನ್ನು ಚೆನ್ನಾಗಿ ಕೇಳಬಹುದಿತ್ತು ಎಂದು ತಿಳಿಸಿದ್ದಾರೆ. ಇದ್ರಲ್ಲೇ ಗೊತ್ತಾಗುತ್ತೆ ಪಂತ್ ಕಂಡ್ರೆ ಗೌತಮ್‌ಗೆ ಆಗಲ್ಲ ಅನ್ನೋದು.. ಹೆಡ್ ಕೋಚ್​ ಗೌತಮ್​ ಗಂಭೀರ್​ ಆಡಿದ್ದ ಮಾತಿನಿಂದ ಇದಕ್ಕೆ ರೆಕ್ಕೆ-ಪುಕ್ಕ ಬಂದಿದೆ.

ಪಂತ್​ ಟೆಸ್ಟ್ ಕ್ಯಾಪ್ಟನ್ಸಿ ತಪ್ಪಿಸಿದ್ದೆ ಗಂಭೀರ್

ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯ ಬಳಿಕ ರಿಷಭ್ ಪಂತ್ ಹೆಸರು ನಾಯಕತ್ವದ ರೇಸ್​​ನಲ್ಲಿತ್ತು. ಜಸ್​​ಪ್ರಿತ್​ ಬೂಮ್ರಾ, ಕೆ.ಎಲ್.ರಾಹುಲ್ ಹೆಸರಿನ ಬಳಿಕ ಚಾಲ್ತಿಯಲ್ಲಿದ್ದ ಹೆಸರೇ ರಿಷಭ್ ಪಂತ್. ರಿಷಭ್​ ಪಂತ್​ ಬದಲಿಗೆ ಶುಭ್​ಮನ್ ಗಿಲ್​ಗೆ ನಾಯಕತ್ವ ನೀಡಲಾಯ್ತು. ಇದಕ್ಕೆ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್​. ಯುವ ನಾಯಕನ ಹುಡುಕಾಟದಲ್ಲಿದ್ದ ಸೆಲೆಕ್ಷನ್ ಕಮಿಟಿ, ರಿಷಭ್​​ಗೆ ನಾಯಕತ್ವ ನೀಡುವ ಬಗ್ಗೆ ಒಲವು ಹೊಂದಿತ್ತು. ಗೌತಮ್​​​​​ ಗಂಭೀರ್ ಅಪಸ್ವರ ಎತ್ತಿದ್ದರು. ಇದೇ ಕಾರಣಕ್ಕೆ ನಾಯಕನಾಗಬೇಕಿದ್ದ ಪಂತ್​​​ಗೆ, ಉಪ ನಾಯಕತ್ವ ಸಿಕ್ತು ಅನ್ನೋದು ಮೂಲಗಳ ಮಾಹಿತಿ.

2015ರಿಂದಲೇ ರಿಷಭ್ ಪಂತ್​ ಅಂದ್ರೆ ವಿರೋಧಿಸ್ತಿದ್ದ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆದ ಬಳಿಕವೂ ಅದನ್ನೇ ಮುಂದುವರಿಸಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಹಾಗೂ 2024ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರಿಷಭ್​ ಪಂತ್​ ಬದಲಿಗೆ ಕೆ.ಎಲ್.ರಾಹುಲ್​ ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದರು.

ಒಟ್ನಲ್ಲಿ, ಕೋಚ್ ಆಗಿ ತಮ್ಮದೇ ರಾಜ್ಯದ ಆಟಗಾರನ ಯಶಸ್ಸಿನ ಬಗ್ಗೆ ಮೆಚ್ಚಿಕೊಳ್ಳಬೇಕಾದ ಗಂಭೀರ್, ಪ್ರತಿ ವಿಚಾರದಲ್ಲೂ ಆತನಿಗೆ ಅಡ್ಡಿಯಾಗ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಂತೆ ಗಂಭೀರ್ ಪಂತ್ ಅವರನ್ನು ಕೈಬಿಡಲು ಪ್ಲ್ಯಾನ್ ಮಾಡುತ್ತಿದ್ದಾರ ಅನ್ನೋ ಅನುಮಾನಗಳಿವೆ. ಕೇವಲ ಒಂದು ಪಂದ್ಯದಲ್ಲಿ ವಿಫಲವಾದರೂ ಅವರನ್ನು ಕೈಬಿಡಲು ಅವರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Kishor KV