ಶಿವಣ್ಣ ಪುಣ್ಯಕೋಟಿಯಲ್ಲ ರೌಡಿ.. ಗಂಡನಿಂದ ಪಾರು ದೂರ? – ಶಿವ, ಪಾರ್ವತಿಯನ್ನ ಒಂದು ಮಾಡೋದ್ಯಾರು?

ರಾಣಿ ಮದುವೆ ಟೈಮ್‌ನಲ್ಲಿ ಅಮ್ಮ ಮಗನನ್ನು ಹೇಗಾದ್ರೂ ಮಾಡಿ ಒಂದು ಮಾಡ್ಬೇಕು.. ಶಿವಣ್ಣ ತಾಯಿಯನ್ನ ಮನೆಗೆ ಕರ್ಕೊಂಡು ಬರ್ಬೇಕು ಅಂತಾ ಪಾರು ಅಂದ್ಕೊಂಡಿದ್ದಾಳೆ.. ಇದೀಗ ಅಮ್ಮ ಮಗ ಮುಖಾಮುಖಿಯಾಗಿದ್ದಾರೆ. ಆದ್ರೆ ಆಕೆಯೇ ತನ್ನ ತಾಯಿ.. ಶಿವು ತನ್ನ ಮಗ ಅಂತ ಅವರಿಬ್ರಿಗೂ ಗೊತ್ತಿಲ್ಲ.. ಇದು ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಶಿವಣ್ಣನ ಇನ್ನೊಂದು ಮುಖ ಅನಾವರಣ ಆಗಿದೆ.. ಹಿಂದೆ ಅಣ್ಣಯ್ಯ ದೊಡ್ಡ ರೌಡಿಯಾಗಿದ್ನಾ? ಶಿವು ಜೈಲು ಸೇರಿದ್ನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಇದನ್ನೂ ಓದಿ: ರಾತ್ರಿ ವೇಳೆ ಪದೇ ಪದೆ ಬಾಯಾರಿಕೆ ಆಗುತ್ತಾ? – ಹಾಗಾದ್ರೆ ಈ ಸಮಸ್ಯೆ ಕಾಡೋದು ಫಿಕ್ಸ್!
ಅಣ್ಣಯ್ಯ ಸೀರಿಯಲ್ ವೀಕ್ಷಕರ ಮನಗೆದ್ದಿದೆ. ಸೀರಿಯಲ್ ಸ್ಟೋರಿ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಶಿವುಗೆ ತಂಗಿಯರಂದ್ರೆ ಪ್ರಾಣ.. ಅವ್ರಿಗೋಸ್ಕರ ಶಿವಣ್ಣ ಏನ್ ಬೇಕಾದ್ರೂ ಮಾಡೋದಿಕ್ಕೆ ರೆಡಿ ಇದ್ದಾನೆ.. ಆದ್ರೆ ತಾಯಿ ವಿಚಾರ ಬಂದ್ರೆ ಮಾತ್ರ ಉರಿದು ಬೀಳ್ತಾನೆ.. ತಾಯಿ ಸುದ್ದಿ ಬಂದ್ರೆ ಅಣ್ಣಯ್ಯ ಕೋಪ ಕಂಟ್ರೋಲ್ ಆಗಲ್ಲ.. ಇದೀಗ ಅಮ್ಮ ಮಗನ್ನ ಒಂದು ಮಾಡ್ಬೇಕು.. ರಾಣಿ ಮದುವೆ ಅತ್ತೆಯನ್ನ ಮನೆಗೆ ಕರ್ಕೊಂಡು ಬರ್ಬೇಕು ಅಂತಾ ಪಾರು ಶಪಕ ಮಾಡ್ಕೊಂಡಿದ್ದಾಳೆ. ಇದೀಗ ಶಿವು ತಾಯಿಯ ಬಗ್ಗೆ ಮಾಹಿತಿ ಕಲೆಕ್ಟ್ ಮಾಡ್ತಿದ್ದಾಳೆ. ಇದೀಗ ಸೀರಿಯಲ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಅಣ್ಣಯ್ಯನ ಇನ್ನೊಂದು ಮುಖ ಅನಾವರಣ ಆಗಿದೆ.
ಪಾರು ಜೊತೆ ಶಿವು ಜೈಲಿನಲ್ಲಿರುವ ಖೈದಿಗಳಿಗೆ ಚಿಕಿತ್ಸೆ ಕೊಡಲು ಬಂದಿದ್ದಾಳೆ. ಆಗ ಅವನು ಜೈಲು ನೋಡಿ ಗಂಭೀರವಾಗಿದ್ದಾನೆ. ಇನ್ನೊಂದು ಕಡೆ ಅಲ್ಲಿಯೇ ಶಿವು ತಾಯಿ ಕೂಡ ಇದ್ದಾಳೆ. ಶಿವು ಹಾಗೂ ಶಾರದಾ ಮುಖಾಮುಖಿಯಾಗಿದ್ದು, ಮಗನನ್ನು ನೋಡಿ ಅವಳು ಖುಷಿಪಟ್ಟಿದ್ದಾಳೆ. ಸೊಸೆ ಡಾಕ್ಟರ್ ಆಗಿದ್ದು, ಜೈಲಿನಲ್ಲಿರುವವರಿಗೆ ಸರಿಯಾಗಿ ಚಿಕಿತ್ಸೆ ಸಿಗಬೇಕು ಎಂದು ಅವಳು ಬಯಸುತ್ತಿದ್ದಾಳೆ. ಈ ವೇಳೆ ಶಿವಣ್ಣನಿಗೆ ಯಾರೋ ಕರೆದಂತೆ ಆಗಿದೆ. ಇದನ್ನ ಪಾರು ಬಳಿದ ಹೇಳಿದ. ಅದಕ್ಕೆ ನಿನಗೂ ಜೈಲಿಗೂ ಉತ್ತರ ದಕ್ಷಿಣ ಎಂದು ಪಾರು ಹೇಳುತ್ತಿದ್ದಂತೆ ಶಿವುಗೆ ಹಳೆಯ ದಿನಗಳೆಲ್ಲವೂ ನೆನಪಾಗಿದೆ. ಮಚ್ಚು ಹಿಡಿದುಕೊಂಡು ರೌಡಿಸಂ ಮಾಡುತ್ತಿದ್ದ ಶಿವು ಅವನಿಗೆ ನೆನಪಾಗಿದ್ದಾನೆ.
ಹೌದು.. ಜೀ ಕನ್ನಡ ವಾಹಿನಿ ಇದ್ರ ಪ್ರೋಮೋ ರಿಲೀಸ್ ಮಾಡಿದೆ. ಹೊಸ ಪ್ರೋಮೋದಲ್ಲಿ ಶಿವು ಗೆಟಪ್ ಚೇಂಜ್ ಆಗಿದೆ. ಶೇರ್ವಾನಿ ಹಾಕಿದ ಶಿವು ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ತಾನೆ.. ಕೈಯಲ್ಲಿ ಮಚ್ಚು ಹಿಡಿದುಕೊಂಡಿರ್ತಾನೆ. ಇನ್ನು ಅವನ ಮನೆ ಮುಂದೆ ನಾಲ್ವರು ಇರುತ್ತಾರೆ. ಈ ಹಿಂದೆ ಮುಂಬೈನಲ್ಲಿದ್ದೆ ಎನ್ನುತ್ತಿದ್ದ ಶಿವಣ್ಣ ಮೊದ್ಲು.. ದೊಡ್ಡ ರೌಡಿಯಾಗಿದ್ನಾ? ಇದಕ್ಕೂ ಮುನ್ನ ಜೈಲು ಸೇರಿದ್ದನಾ ಎಂಬ ಕುತೂಹಲ ಶುರುವಾಗಿದೆ. ಒಂದ್ವೇಳೆ ಶಿವು ಇತಿಹಾಸ ಬೇರೆಯೇ ಇದ್ದರೆ, ಅದನ್ನು ಪಾರು ಒಪ್ಪಿಕೊಳ್ತಾಳಾ? ಜೀವ ತೆಗೆಯುತ್ತಿದ್ದ ವ್ಯಕ್ತಿಯೇ ನನ್ನ ಗಂಡ ಅಂತ ಗೊತ್ತಾದರೆ ಅವಳು ಏನು ಮಾಡಲಿದ್ದಾಳೆ ಎಂಬ ಕುತೂಹಲ ಶುರುವಾಗಿದೆ.

ನೋಡಿರಿ

