ನೀರಸ ಕ್ರಿಕೆಟ್ ಎಂದ ಶುಭ್ಮನ್ ಗಿಲ್ ಗೆ ಆಂಗ್ಲರ ಟಕ್ಕರ್ – ಕ್ರಿಕೆಟ್ ಚಾನ್ಸ್ ಕೊಟ್ರೂ ಕರುಣ್ ನಾಯರ್ ಮಿಸ್ ಮಾಡೆದ್ದೆಲ್ಲಿ?
5 ವಿಕೆಟ್ ಗೊಂಚಲು ಪಡೆದು ಬುಮ್ರಾ ದಾಖಲೆ

ನೀರಸ ಕ್ರಿಕೆಟ್ ಎಂದ ಶುಭ್ಮನ್ ಗಿಲ್ ಗೆ ಆಂಗ್ಲರ ಟಕ್ಕರ್ – ಕ್ರಿಕೆಟ್ ಚಾನ್ಸ್ ಕೊಟ್ರೂ ಕರುಣ್ ನಾಯರ್ ಮಿಸ್ ಮಾಡೆದ್ದೆಲ್ಲಿ?5 ವಿಕೆಟ್ ಗೊಂಚಲು ಪಡೆದು ಬುಮ್ರಾ ದಾಖಲೆ

ಇಂಗ್ಲೆಂಡ್​ನ ಲಾರ್ಡ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್​ ಸ್ಟೋಕ್ಸ್​ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡಿದ್ದರು. ಮೊದಲ ದಿನ ಬೋರಿಂಗ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪಡೆ ​ 2ನೇ ದಿನದಾಟದ ಅರ್ಧದಲ್ಲೇ ಆಲೌಟ್​ ಆಗಿದೆ. ಮಿಡಲ್ ಆರ್ಡರ್‌ನಲ್ಲಿ ಬ್ಯಾಟ್ ಬೀಸಿದ ಓಲಿ ಪೋಪ್ 44 ಹಾಗೂ ಜೋ ರೂಟ್​ ಶತಕ ಟೀಮ್ ಇಂಡಿಯಾಕ್ಕೆ ಸ್ವಲ್ಪ ಭಾರವಾಗಿದ್ದು ಕೂಡಾ ನಿಜ. ಪೋಪ್​ಗೆ ಜಡೇಜಾ ಬ್ರೇಕ್ ಹಾಕಿದರೆ, ರೂಟ್​ಗೆ ಬುಮ್ರಾ ಬಿಗ್ ಶಾಕ್ ಕೊಟ್ಟಿದ್ದರು.

ಇದನ್ನೂ ಓದಿ: 19 ಪಂದ್ಯ.. 12 ಸೋಲು.. 3 ಗೆಲುವು.. ಭಾರತಕ್ಕೆ ಲಾರ್ಡ್ಸ್ ಅಗ್ನಿ ‘ಪರೀಕ್ಷೆ’ – ಬೇಕಂತಲೇ ಹಸಿರು ಪಿಚ್ ಮಾಡಿದ್ರಾ?

ಎರಡನೇ ದಿನದ ವಿಶೇಷ ಎಂದರೆ, ಬುಮ್ರಾ ನಾಲ್ವರನ್ನು ಕ್ಲೀನ್ ಬೋಲ್ಡ್​ ಮಾಡಿರೋದು. ಇದರೊಂದಿಗೆ ಬುಮ್ರಾ ಈ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದಿದ್ದು ಕೂಡಾ ದಾಖಲೆ ಬರೆಯಿತು. ಅತೀ ಹೆಚ್ಚು 5 ವಿಕೆಟ್ ಪಡೆದ ಸಾಧನೆ ಮಾಡಿದ್ರು ಬುಮ್ರಾ. ಹಾಗೇ ವಿದೇಶಿ ನೆಲದಲ್ಲಿ 13ನೇ ಬಾರಿ 5 ವಿಕೆಟ್​ ಗೊಂಚಲು ಪಡೆದು ಕಪಿಲ್​ ದೇವ್​ ಅವರನ್ನು ಹಿಂದಿಕ್ಕಿದ್ದಾರೆ. ಕಪಿಲ್ ದೇವ್ 12 ಬಾರಿ ಈ ಸಾಧನೆ ಮಾಡಿದ್ರು.  ಅದ್ರಲ್ಲೂ ಕಪಿಲ್​ ದೇವ್​ ವಿದೇಶದಲ್ಲಿ 66 ಟೆಸ್ಟ್​ ಆಡಿದ್ದರೆ, ಬುಮ್ರಾ 35 ಟೆಸ್ಟ್​ಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಇನ್ನು ಇಂಗ್ಲೆಂಡ್ ಬೌಲರ್ ಜೋಪ್ರಾ ಅರ್ಚರ್ ಟೆಸ್ಟ್ ಆಡಿರೋದು ಆಫ್ಟರ್ 4 ಇಯರ್ಸ್ ಆದ್ಮೇಲೆ. ಚೋಪ್ರಾ ಬೌಲಿಂಗ್ ಗೆ ಬಂದ 3ನೇ ಬಾಲ್‌ಗೆ ಯಶಸ್ವಿ ಜೈಸ್ವಾಲ್ ರನ್ನ ಔಟ್ ಮಾಡgb ಮೂಲಕ ತನ್ನ ಸಾಮರ್ಥ್ಯ ತೋರಿದರು. ಇದು ಇಂಗ್ಲೆಂಡ್ ಬಲವನ್ನ ಮತ್ತಷ್ಟು ಹೆಚ್ಚಿಸ್ತು. ಆದ್ರೆ, ಇಲ್ಲಿ ನಾವು ಗಮನಿಸಬೇಕಾದ್ದು ಮತ್ತೊಂದು ವಿಚಾರ. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಕೆಟ್ ಕಾಶಿಯಲ್ಲಿ ಮೆರೆದಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಕರುಣಾಜನಕ ಕಥೆ ಮುಂದುವರೆದಿದೆ.

ನಮ್ಮ ಮುಂದಿರೋ ಪ್ರಶ್ನೆ ಕರುಣ್ ಪ್ರಾಬ್ಲಂ ಏನು ಅನ್ನೋದು. ಡಿಯರ್ ಕ್ರಿಕೆಟ್.. ಗೀವ್ ಮಿ ಒನ್ ಮೋರ್ ಚಾನ್ಸ್ ಎಂದು ಕೇಳಿಕೊಂಡಿರೋ ಕರುಣ್ ಗೆ ಕ್ರಿಕೆಟ್ ಚಾನ್ಸ್ ಕೊಟ್ಟಿದೆ. ಇದಾದ ಮೇಲೆ ಡೊಮೆಸ್ಟಿಕ್ ನಲ್ಲಿ ಚೆನ್ನಾಗಿ ಆಡಿದ್ರು ಕರುಣ್. ಇಲ್ಲೇ ಇರೋದು ನೋಡಿ ಟ್ವಿಸ್ಟ್. ಡೊಮೆಸ್ಟಿಕ್ ಬ್ಯಾಟಿಂಗ್‌ನಲ್ಲಿ ಕರುಣ್ ತಾಳ್ಮೆಯಿಂದ ಆಡ್ತಾರೆ. ತಾಳ್ಮೆಯ ಆಟದಿಂದಲೇ ಸ್ಕೋರ್ ಬಿಲ್ಡ್ ಮಾಡ್ಕೊಳ್ತಾರೆ. ಆಂಗ್ಲರ ನೆಲದಲ್ಲಿ ಕರುಣ್ ನಾಯರ್ ಫಾರ್ಮ್ ಗೆ ಏನೋ ಪ್ರಾಬ್ಲಂ ಆಗ್ತಿಲ್ಲ.  ಬ್ಯಾಟಿಂಗ್ ಲೈನ್ ಅಪ್ ಕೂಡಾ ಚೆನ್ನಾಗಿದೆ. ತಾಳ್ಮೆ ಬೇಕಷ್ಟೇ. ಜೊತೆಗೆ ಅದೃಷ್ಟವೂ ಬೇಕು ಬಿಡಿ. ಕರುಣ್ ನೆಕ್ಸ್ಟ್ ಬ್ಯಾಟಿಂಗ್ ಮಾಡೋಕೆ ಬಂದಾಗ ತನ್ನ ಸ್ಟೈಲ್ ಮರೆಯದೇ, ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ್ರೆ ಮಾತ್ರ ಟೀಮ್ ನಲ್ಲಿ ಸ್ಥಾನ ಗಟ್ಟಿಯಾಗಿರುತ್ತೆ.

ಆಂಗ್ಲರ ಬ್ಯಾಟಿಂಗ್‌ಗೆ  ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಫಸ್ಟ್ ಡೇನೇ ಗೇಲಿ ಮಾಡಿದ್ದರು. ಇಂಗ್ಲೆಂಡ್ ರ ಬ್ಯಾಟಿಂಗ್ ಬೋರಿಂಗ್ ಅಂತಾ ಟೀಕೆ ಮಾಡಿದ್ರು. ಇದನ್ನ ಬ್ರಿಟಿಷ್ ಪಡೆ ಸೀರಿಯಸ್ಸಾಗಿಯೇ ತಗೊಂಡ ಹಾಗಿತ್ತು. ಗಿಲ್ ಇನ್ನೇನು ತನ್ನ ಖದರ್ ತೋರಿಸಬೇಕು ಅನ್ನೋವಷ್ಟರಲ್ಲಿ ಕೇವಲ 16 ರನ್‌ಗೆ ಪೆವಿಲಿಯನ್ ದಾರಿ ತೋರಿಸಿಯೇ ಬಿಟ್ರು. ಆಂಗ್ಲರ ಎದುರು ಮತ್ತೊಮ್ಮೆ ಶೈನ್ ಆಗ್ಬೇಕು ಅನ್ನೋ ಗಿಲ್ ಆಸೆ 16 ರನ್‌ಗಳಿಗೆ ಮುಗಿದೇಹೋಗಿತ್ತು. ದಿನದಾಟದಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. ರಾಹುಲ್ 53 ಮತ್ತು ಪಂತ್ 19 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಭಾರತ ಇಂಗ್ಲೆಂಡ್‌ಗಿಂತ 242 ರನ್ ಹಿಂದಿದೆ. ಮೂರನೇ ದಿನ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ಸ್ ಬ್ಯಾಟಿಂಗ್ ನಲ್ಲಿ ಜಾದೂ ಮಾಡ್ತಾರಾ ಅನ್ನೋ ಕುತೂಹಲ ಎಲ್ಲರಿಗೂ ಇದೆ.

 

Sulekha