ತಂದೆ ಕೈಯಿಂದಲೇ ಹತ್ಯೆಯಾದ ಟೆನ್ನಿಸ್ ಪಟು – ರೀಲ್ಸ್, ಮ್ಯೂಸಿಕ್ ಆಲ್ಬಂ ವಿಚಾರಕ್ಕೆ ಮಗಳಿಗೆ ಗುಂಡೇಟು

ತಂದೆ ಕೈಯಿಂದಲೇ ಹತ್ಯೆಯಾದ ಟೆನ್ನಿಸ್ ಪಟು – ರೀಲ್ಸ್, ಮ್ಯೂಸಿಕ್ ಆಲ್ಬಂ ವಿಚಾರಕ್ಕೆ ಮಗಳಿಗೆ ಗುಂಡೇಟು

ಟೆನ್ನಿಸ್ ಪಟು ರಾಧಿಕಾ ಯಾದವ್ ಹತ್ಯೆ ನಡೆದಿದ್ದು ಯಾಕೆ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಟೆನಿಸ್ ಪಟು ರಾಧಿಕಾ ಯಾದವ್ ಮೇಲೆ ಸ್ವಂತ ತಂದಯೇ 5 ಸುತ್ತಿನ ಗುಂಡು ಹಾರಿಸಿದ್ದಾರೆ. ದೇಹಕ್ಕೆ 3 ಗುಂಡುಗಳು ಹೊಕ್ಕಿವೆ. ರಾಧಿಕಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇದೀಗ ಪಾಪಿ ತಂದೆಯ ಕೃತ್ಯಕ್ಕೆ ಕಾರಣ ಏನು ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ:ಮಕ್ಕಳಗಾಲಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ ದಾರುಣ ಅಂತ್ಯ – ಮಗುವಿನ ಆಸೆಯಲ್ಲಿ ಪ್ರಾಣಬಿಟ್ಟ ಅಮಾಯಕಿ

ಹರ್ಯಾಣ ರಾಜ್ಯದ ಟೆನಿಸ್ ಪ್ಲೇಯರ್ ಆಗಿ ರಾಧಿಕಾ ಯಾದವ್ ಗುರುತಿಸಿಕೊಂಡಿದ್ದರು. ಇದೀಗ ತಂದೆಯಿಂದಲೇ ದುರಂತ ಅಂತ್ಯ ಕಂಡಿದ್ದಾಳೆ. ಗುರುಗಾಂವ್‌ನ ಸೆಕ್ಟರ್ 57 ಮನೆಯಲ್ಲೇ ಈ ಘಟನೆ ನಡೆದಿದೆ. ತಂದೆ ಹಾರಿಸಿದ 5 ಸುತ್ತುಗಳ ಗುಂಡಿನಲ್ಲಿ ಮೂರು ರಾಧಿಕಾ ದೇಹ ಹೊಕ್ಕಿದೆ. ಸ್ಥಳದಲ್ಲೇ ರಾಧಿಕಾ ಯಾದವ್ ಮೃತಪಟ್ಟಿದ್ದಾರೆ. ಇತ್ತ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಮಗಳ ಮೇಲೆ ತಂದೆ ಗುಂಡು ಹಾರಿಸಿದ್ದೇಕೆ ಎಂಬ ವಿಚಾರವನ್ನು ನೋಡೋದಾದರೆ, ಟೆನಿಸ್ ಪ್ಲೇಯರ್ ಆಗಿದ್ದ ರಾಧಿಕಾ ಯಾದವ್ ಹರ್ಯಾಣ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಳು. ಟೆನಿಸ್ ಅಕಾಡೆಮಿ ನಡೆಸುತ್ತಿದ್ದ ರಾಧಿಕಾ ಬಗ್ಗೆ ತಂದೆ ತೀವ್ರ ಅಸಮಾಧಾನಗೊಂಡಿದ್ದರು. ಟೆನಿಸ್ ಅಕಾಡೆಮಿ ಮುಚ್ಚುವಂತೆ ಸೂಚಿಸಿದ್ದರು. ಆದರೆ ತಂದೆ ಮಾತನ್ನು ಧಿಕ್ಕರಿಸಿದ್ದ ಕಾರಣ ಕಳದ ಕೆಲ ದಿನಗಳಿಂದ ವಾಗ್ವಾದ ನಡೆದಿತ್ತು. ಇದೇ ಕಾರಣದಿಂದ ಜುಲೈ 10ಕ್ಕೆ ತಂದೆ ಮತ್ತು ಮಗಳ ನಡುವೆ ಮತ್ತೆ ಜಗಳವಾಗಿದೆ. ಕೋಪಗೊಂಡ ತಂದೆ ರಿವಾಲ್ವರ್‌ನಿಂದ ಗುಂಡಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ  ಇತ್ತೀಚಿನ ದಿನಗಳಲ್ಲಿ ರಾಧಿಕಾ ಯಾದವ್ ಟೆನಿಸ್ ಆಸಕ್ತಿ ಕಳೆದುಕೊಂಡಿದ್ದು ಮಾತ್ರವಲ್ಲ, ಹೆಚ್ಚಿನ ಸಮಯ ರೀಲ್ಸ್, ಸೋಶಿಯಲ್ ಮೀಡಿಯಾದಲ್ಲಿ ಕಳೆಯಲು ಆರಂಭಿಸಿದ್ದಾಳೆ. ಇದು ತಂದೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ಬಾರಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ರಾಧಿಕಾ ಯಾದವ್ ಮಾಡಿದ್ದ ಒಂದು ರೀಲ್ಸ್ ತಂದೆ ಸಹನೆ ಕಟ್ಟೆ ಒಡೆದಿದೆ. ಈ ರೀಲ್ಸ್ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಸಭ್ಯತೆ ಮೀರಿ ಹೋಗಬಾರದು ಎಂದು ಕಿವಿ ಮಾತು ಹೇಳಿದ್ದರು. ಇದೇ ವಿಚಾರವಾಗಿ ಜಗಳವಾಗಿ ಹತ್ಯೆ ನಡೆದಿದೆ ಅನ್ನೋ ಮಾತುಗಳು ಕೇಳಿಬಂದಿದೆ. ವಾಗ್ವಾದ ಬಳಿಕ ರಾಧಿಕಾ ಯಾಧವ್ ಅಡುಗೆ ಕೋಣೆಗೆ ತೆರಳಿದ ವೇಳೆ ತಂದೆ ಗುಂಡಿನ ಮಳೆ ಸುರಿಸಿರುವುದಾಗಿ ಪ್ರಾಥಮಿಕ ಮೂಲಗಳು ಹೇಳುತ್ತಿದೆ.

ತಂದೆ ಮಗಳನ್ನ ಹತ್ಯೆ ಮಾಡಿರುವ ಹಿಂದೆ ಇನ್ನೊಂದು ವಿಚಾರ ಇದೆ ಅನ್ನೋ ಮಾಹಿತಿ ಸಿಕ್ಕಿದೆ. ಮ್ಯೂಸಿಕ್‌ ಆಲ್ಬಂ ವಿಚಾರದಲ್ಲಿ ಸಿಟ್ಟಾಗಿ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನಾ ಎಂಬ ಆಯಾಮದಲ್ಲಿ ಈಗ ತನಿಖೆ ಆರಂಭವಾಗಿದೆ. ತಂದೆ ದೀಪಕ್ ಯಾದವ್‌ ವಿಚಾರಣೆ ನಡೆಯುತ್ತಿದೆ.

Sulekha