ನಟ ದರ್ಶನ್‌ಗೆ ಮಾದರಿಯಾದ ಹಾಸ್ಯನಟ – ಪತ್ನಿಗೆ ಅಶ್ಲೀಲ ಫೋಟೋ ಕಳಿಸಿದವನಿಗೆ ಬುದ್ಧಿ ಹೇಳಿದ ಸಂಜು ಬಸಯ್ಯ

ನಟ ದರ್ಶನ್‌ಗೆ ಮಾದರಿಯಾದ ಹಾಸ್ಯನಟ – ಪತ್ನಿಗೆ ಅಶ್ಲೀಲ ಫೋಟೋ ಕಳಿಸಿದವನಿಗೆ ಬುದ್ಧಿ ಹೇಳಿದ ಸಂಜು ಬಸಯ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹಾಸ್ಯನಟರೊಬ್ಬರು ಮಾದರಿಯಾಗಿದ್ದಾರೆ. ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನನ್ನು ಕರೆದು ಬುದ್ಧಿಹೇಳಿ ಕಳಿಸಿದ್ದಾರೆ. ಈ ಪ್ರಕರಣ ನೋಡಿದವರು ಡಿ ಬಾಸ್ ದರ್ಶನ್ ಹೀಗೆ ಮಾಡಬೇಕಿತ್ತು ಅಂತಾ ಹೇಳುತ್ತಿದ್ದಾರೆ.

ಇದನ್ನೂ ಓದಿ: ಅಮೃತಧಾರೆ ಧಾರಾವಾಹಿ ನಟಿಗೆ ಗಂಡನಿಂದಲೇ ಚಾಕು ಇರಿತ – ಪ್ರೀತಿಸಿ ಮದುವೆಯಾದ ಜೋಡಿ ನಡುವೆ ನಡೆದಿರುವುದು ಏನು?

ಚಿತ್ರದುರ್ಗದ ರೇಣುಕಾಸ್ವಾಮಿ ವಿಚಾರದಲ್ಲಿ ಡಿ ಬಾಸ್ ದರ್ಶನ್ ನಡೆದುಕೊಂಡಿದ್ದನ್ನ ಯಾರೂ ಮರೆತಿಲ್ಲ. ಇದೀಗ ಹಾಸ್ಯನಟ ಸಂಜು ಬಸ್ಯಾ ಇಂಥದ್ದೇ ಪ್ರಕರಣವನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಈ ಘಟನೆ ನಡೆದಿದೆ. ಸಂಜು ಬಸಯ್ಯ ಅವರ ಪತ್ನಿ ನಟಿ ಪಲ್ಲವಿ ಸಂಜು ಬಸಯ್ಯ ಅವರಿಗೆ ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಇನ್ಸ್ಟಾಗ್ರಾಮ್‌ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದ. ಅಶ್ಲೀಲ ಮೆಸೇಜ್ ಜೊತೆಗೆ ಅಶ್ಲೀಲ ಫೋಟೊಗಳನ್ನೂ ಕಳಿಸಿದ್ದ. ಇದರಿಂದ ಸಂಯಮ ಕಳೆದುಕೊಳ್ಳದ ಸಂಜು ಬಸಯ್ಯ ಅವರು ಬೈಲಹೊಂಗಲ ಪೊಲೀಸ್  ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಅಶ್ಲೀಲ ಸಂದೇಶ ಕಳಿಸಿದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಯುವಕನ ಭವಿಷ್ಯ ಹಾಳಾಗಬಾರದೆಂದು ಸಂಜು ಬಸಯ್ಯ ಅವರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇಂತಹದೇ ಪ್ರಕರಣದಲ್ಲಿ ಸದ್ಯ ನಟ ದರ್ಶನ್‌ಗೆ ಸಂಜು ಬಸಯ್ಯ ಮಾದರಿಯಾಗಿದ್ದಾರೆ.

ಇದೀಗ ಯುವಕ, ನಾನು ಬಹಳ ದಿವಸದಿಂದ ಇನ್‌ಸ್ಟಾಗ್ರಾಂ ಬಳಸುತ್ತಿದ್ದೆ. ಪಲ್ಲು ಸಂಜು ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ. ಈ ಬಗ್ಗೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ನನ್ನನ್ನ ಕರೆಸಿ, ಶಿಕ್ಷೆ ಕೊಟ್ಟಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿದಂತೆ ಇನ್ಯಾರೂ ಈ ರೀತಿ ಮಾಡಬೇಡಿ. ಎಲ್ಲರಲ್ಲೂ ಕ್ಷಮೆ ಕೇಳ್ತೀನಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Sulekha