ಅಮೃತಧಾರೆ ಧಾರಾವಾಹಿ ನಟಿಗೆ ಗಂಡನಿಂದಲೇ ಚಾಕು ಇರಿತ – ಪ್ರೀತಿಸಿ ಮದುವೆಯಾದ ಜೋಡಿ ನಡುವೆ ನಡೆದಿರುವುದು ಏನು?

ಅಮೃತಧಾರೆ ಧಾರಾವಾಹಿ ನಟಿಗೆ ಗಂಡನಿಂದಲೇ ಚಾಕು ಇರಿತ – ಪ್ರೀತಿಸಿ ಮದುವೆಯಾದ ಜೋಡಿ ನಡುವೆ ನಡೆದಿರುವುದು ಏನು?

ಕನ್ನಡದ ಅಮೃತಧಾರೆ ಧಾರಾವಾಹಿಯ ನಟಿ ಶ್ರುತಿ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ನಟಿ ಶ್ರುತಿ ಅವರ ಗಂಡನೇ ಚಾಕು ಇರಿದಿರುವುದು ಬೆಳಕಿಗೆ ಬಂದಿದೆ. ನಟಿ ಶ್ರುತಿ ಮೈತುಂಬಾ ಚಾಕುವಿನಿಂದ ಇರಿತದ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಭೂಮಿಕಾ ಮಗು ಗಂಡು or  ಹೆಣ್ಣು? – ಶಕುಂತಲಾ ಕೈಯಲ್ಲಿ ಗೌತಮ್‌ ಮಗು?

‘ಅಮೃತಧಾರೆ’ ಧಾರಾವಾಹಿ ನಟಿ ಶ್ರುತಿ ಅವರಿಗೂ ಅವರ ಗಂಡ ಅಮರೇಶ್‌ಗೂ ಮನಸ್ತಾಪ ಉಂಟಾಗಿತ್ತು. ಜೊತೆಗೆ ಪತ್ನಿಯ ಶೀಲ ಶಂಕಿಸಿ ಪತಿ ಅಮರೇಶ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೀಗ ಶ್ರುತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರುತಿ ಅವರ ಪತಿ ಅಮರೇಶ್ ಅವರನ್ನು ಬಂಧಿಸಿದ್ದಾರೆ. ಅಮೃತಧಾರೆ’ ಸೇರಿದಂತೆ ಕನ್ನಡದ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿ ಶ್ರುತಿ ನಟಿಸಿದ್ದಾರೆ. ಶ್ರುತಿ ಶ್ರುತಿ ಹಾಗೂ ಅಮರೇಶ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿ ಲೀಸ್​ಗೆ ಮನೆ ಪಡೆದು ದಂಪತಿ ವಾಸವಿದ್ದರು. ಆದರೆ ಪತ್ನಿಯ ಬಗ್ಗೆ ಅಮರೇಶ್​ಗೆ ಅನುಮಾನಗಳಿದ್ದು, ಇದೇ ಕಾರಣಕ್ಕೆ ಪದೇ-ಪದೇ ಜಗಳಗಳು ನಡೆಯುತ್ತಿದ್ದವು. ಇದೇ ಏಪ್ರಿಲ್ ತಿಂಗಳಲ್ಲಿ ಶ್ರುತಿ, ಅಮರೇಶ್ ಇಂದ ದೂರಾಗಿ ತಮ್ಮ ಅಣ್ಣನ ಮನೆಗೆ ಬಂದಿದ್ದರು. ಅಲ್ಲಿಯೇ ವಾಸವಿದ್ದರು. ಆದರೆ ಅದಾದ ಬಳಿಕವೂ ಸಹ ಮನೆಯ ಲೀಸ್ ಹಣದ ಕುರಿತಾಗಿ ಜಗಳ ನಡೆದಿತ್ತು. ಇದರ ಕುರಿತಾಗಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು. ಬಳಿಕ ರಾಜಿ-ಸಂಧಾನ ನಡೆದು ನಿನ್ನೆಯಷ್ಟೆ ಅಂದರೆ ಗುರುವಾರ ಇಬ್ಬರೂ ಮತ್ತೆ ಒಟ್ಟಿಗೆ ನೆಲೆಸಲು ಒಪ್ಪಿದ್ದರು. ಮುನೇಶ್ವರ ಲೇಔಟ್​ನ ಮನೆಯಲ್ಲಿ ಇಬ್ಬರೂ ವಾಸವಿದ್ದರು. ಆದರೆ ರಾಜಿ-ಸಂಧಾನ ನಡೆದ ಮಾರನೇಯ ದಿನವೇ ಅಂದರೆ ಅಮರೇಶ್, ಶ್ರುತಿಗೆ ಚಾಕು ಇರಿದಿದ್ದಾನೆ. ಮೊದಲು ಶ್ರುತಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದ ಅಮರೇಶ್ ಆ ನಂತರ ಚಾಕುವಿನಿಂದ ಶ್ರುತಿಯ ಹೊಟ್ಟೆ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಶ್ರುತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಮರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ.

Sulekha