ನಿಧಿ ಅಲ್ಲ.. ನಿತ್ಯಾ ಜೊತೆ ಕರ್ಣ ಮದುವೆ! -ಅಕ್ಕನಿಗಾಗಿ ಪ್ರೀತಿ ತ್ಯಾಗ ಮಾಡ್ತಾಳಾ ನಿಧಿ?

ಒಬ್ಬ ಹೀರೋ.. ಇಬ್ಬರು ನಾಯಕಿಯರು.. ವಿಶೇಷ ಕಥೆಯುಳ್ಳ ಕರ್ಣ ಸೀರಿಯಲ್ ಆರಂಭದಲ್ಲೇ ವೀಕ್ಷಕರ ಮನಗೆದ್ದಿದೆ.. ಪ್ರಸೂತಿ ತಜ್ಞನಾಗಿರುವ ಕರ್ಣ ಎಂದರೆ, ಆತನ ಸ್ಟುಡೆಂಟ್ ನಿಧಿಗೆ ಪಂಚಪ್ರಾಣ. ಕರ್ಣನನ್ನ ಸೀರಿಯಸ್ ಆಗಿ ಪ್ರೀತಿ ಮಾಡುತ್ತಿದ್ದಾಳೆ.. ಹೀಗಾಗಿ ಆಕೆ ಸದಾ ಕನಸಿನ ಲೋಕದಲ್ಲಿ ತೇಲಾಡ್ತಿರ್ತಾಳೆ. ಇದೀಗ ನಿತ್ಯಾಗೆ ಕೂಡ ಕರ್ಣ ಪರಿಚಯ ಆಗಿದ್ದಾನೆ. ನಿತ್ಯ ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಮಾಡಿಸಲು ಕರ್ಣ ಓಡಾಡುತ್ತಿದ್ದಾನೆ. ಆದ್ರೀಗ ಕರ್ಣ ಸಿಗೋದು ನಿಧಿಗಲ್ಲ.. ನಿತ್ಯಾಗೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಇದನ್ನೂ ಓದಿ: ತಂದೆ ಕೈಯಿಂದಲೇ ಹತ್ಯೆಯಾದ ಟೆನ್ನಿಸ್ ಪಟು – ರೀಲ್ಸ್, ಮ್ಯೂಸಿಕ್ ಆಲ್ಬಂ ವಿಚಾರಕ್ಕೆ ಮಗಳಿಗೆ ಗುಂಡೇಟು
ಕರ್ಣ ಸೀರಿಯಲ್ ಆರಂಭದಲ್ಲೇ ವೀಕ್ಷಕರ ಮನಗೆದ್ದಿದೆ. ಕರ್ಣ ವಿರುದ್ಧ ನಡೀತಿರೋ ಷಡ್ಯಂತ್ರಗಳು.. ನಿತ್ಯ ನಿಧಿ ನಡುವಿನ ಬಾಂಧವ್ಯ.. ಕರ್ಣನ ಮೇಲೆ ನಿಧಿಗಿರುವ ಪ್ರೀತಿ.. ಇವೆಲ್ಲ ವೀಕ್ಷಕರನ್ನ ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ತಿದೆ. ಆದ್ರೀಗ ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ಸಿಗೋತರ ಕಾಣ್ತಿದೆ. ನಿಧಿ ಕರ್ಣನನ್ನು ತುಂಬಾ ಪ್ರೀತಿಸ್ತಾ ಇದ್ರೂ ಮದುವೆ ಆಗೋದು ನಿತ್ಯಾಳನ್ನಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.
ಹೌದು.. ನಿಧಿ ಕರ್ಣನ ಸ್ಟೂಡೆಂಟ್… ಹ್ಯಾಂಡ್ಸಮ್ ಲೆಕ್ಷರ್ ಕರ್ಣ ಮೇಲೆಗೆ ನಿಧಿಗೆ ಪ್ರೀತಿ ಹುಟ್ಟಿದೆ.. ಕರ್ಣ ಎಲ್ಲಿ ಹೋದ್ರೂ ಆಕೆ ಹಿಂಬಾಲಿಸಿಕೊಂಡು ಬರ್ತಿರ್ತಾಳೆ.. ಸಿಸೇರಿಯನ್ ಸಂದರ್ಭದಲ್ಲೂ ನಿಧಿ ಕರ್ಣನಿಗೆ ಸಹಾಯ ಮಾಡಿದ್ಲು. ಕರೆಂಟ್ ಹೋದ ಸಂದರ್ಭದಲ್ಲಿ ನಿಧಿ ಮೊಬೈಲ್ ಟಾರ್ಚ್ ಅನ್ ಮಾಡಿ ಆಪರೇಷನ್ ಸಹಾಯ ಮಾಡಿದ್ಲು.. ನಿಧಿಯ ಒಳ್ಳೆ ಕೆಲಸ ಕರ್ಣನಿಗೆ ಇಷ್ಟ ಆಗಿದೆ. ಹೀಗಾಗಿ ಆಕೆಯನ್ನ ಹೊಗಳಿದ್ದಾನೆ. ಬಳಿಕ ನಿಧಿಯನ್ನ ಡ್ರಾಪ್ ಕೂಡ ಮಾಡಿದ್ದ.. ನಿಧಿ ಕರ್ಣಗೆ ಪ್ರಪೋಸ್ ಮಾಡಲು ಮುಂದಾಗಿದ್ದಾಳೆ.. ಮತ್ತೊಂದ್ಕಡೆ ನಿತ್ಯಾಳಿಗೆ ಕರ್ಣನನ್ನ ಕಂಡ್ರೆ ಆಗ್ತಿಲ್ಲ.. ಆತನನ್ನ ಕಂಡ್ರೆ ಉರಿದು ಬೀಳ್ತಾಳೆ. ಯಾಕಂದ್ರೆ ಅವರಿಬ್ರು ಮೊದಲ ಭೇಟಿಯಲ್ಲೇ ಕಿತ್ತಾಡಿಕೊಂಡಿದ್ರು..
ನಿತ್ಯ ಹುಡುಗಿಯೊಬ್ಬಳನ್ನ ಜೊತೆ ಆಸ್ಪತ್ರೆಗೆ ಕರ್ಕೊಂಡು ಬಂದಿದ್ಲು. ಆಕೆ ಪ್ರೆಗ್ನೆಂಟ್.. ಅಬೋರ್ಷನ್ ಮಾಡಿ ಅಂತಾ ಕರ್ಣನ ಬಳಿ ಹೇಳಿದ್ಲು. ಆದ್ರೆ ಕರ್ಣ ಇದಕ್ಕೆ ಒಪ್ಪಿಲ್ಲ. ತಾನು ಜೀವ ಉಳಿಸೋನು.. ಜೀವ ತೆಗೆಯೋನು ಅಲ್ಲ ಅಂತಾ ಖಡಕ್ ಆಗಿ ಹೇಳಿದ್ದ.. ಹೀಗಾಗಿ ಕರ್ಣನನ್ನು ನಿತ್ಯ ದುಷ್ಮನ್ ತರ ನೋಡ್ತಿದ್ದಾಳೆ. ಆದ್ರೀಗ ನಿತ್ಯ ಮದುವೆಗೆ ಸಹಾಯ ಮಾಡಲು ಕರ್ಣ ಆಕೆಯ ಮನೆಗೆ ಬಂದಿದ್ದಾನೆ.. ನಿತ್ಯ ಒಬ್ಬನ್ನ ಲವ್ ಮಾಡ್ತಿದ್ದಾಳೆ 15 ದಿನದಲ್ಲಿ ಮದುವೆ ಆಗ್ತೀನಿ ಅಂತಾ ಹೊರಟಿದ್ದಾಳೆ. ಇದೀಗ ನಿತ್ಯ ಅಜ್ಜಿ ಕರ್ಣನ ಸಹಾಯ ತೆಗೆದುಕೊಂಡಿದ್ದಾಳೆ. ಅಜ್ಜಿಗೆ ಕೊಟ್ಟ ಮಾತಿನಂತೆ ಕರ್ಣ ನಿತ್ಯ ಮದುವೆ ಕೆಲಸಕ್ಕಾಗಿ ಆಕೆ ಜೊತೆ ಓಡಾಡ್ತಿದ್ದಾನೆ. ಆದ್ರೆ ನಿತ್ಯ ಕರ್ಣನಿಗೆ ಪದೇ ಪದೆ ಅವಮಾನ ಮಾಡ್ತಿದ್ದಾಳೆ. ಇದೀಗ ನಿತ್ಯ ತೇಜಸ್ ನ ಮದುವೆ ಆಗಲ್ಲ.. ಕರ್ಣನನ್ನ ಮದುವೆ ಆಗ್ತಾಳೆ.. ಸೀರಿಯಲ್ ಡೈರೆಕ್ಟರ್ ದೊಡ್ಡ ಟ್ವಿಸ್ಟ್ ಕೊಡ್ತಾರೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಹೌದು.. ನಿತ್ಯನ ಬಾಯ್ ಫ್ರೆಂಡ್ ಒಳ್ಳೆಯವನಲ್ಲ.. ಆತ ಸುಳ್ಳು ಹೇಳಿ ಮದುವೆ ಆಗ್ತಿದ್ದಾನೆ ಅನ್ನೋದು ಆತನ ವರ್ತನೆಯಿಂದಲೇ ಗೊತ್ತಾಗ್ತಿದೆ. ತಂದೆ ತಾಯಿ ಬಗ್ಗೆ ಕೇಳಿದ್ರೆ, ಅವ್ರು ಅಬ್ರಾಡ್ನಲ್ಲಿದ್ದಾರೆ. ಅವ್ರು ತುಂಬಾ ಬ್ಯೂಸಿ ಇದ್ದಾರೆ.. ಫೋನ್ನಲ್ಲಿ ಮಾತಾಡೋದಿಕ್ಕೂ ಸಾಧ್ಯ ಆಗಲ್ಲ.. ಮದುವೆ ಟೈಮ್ನಲ್ಲಿ ಅವ್ರು ಇಲ್ಲಿಗೆ ಬರ್ತಾರೆ.. ನೀವು ಮದುವೆ ಸಿದ್ಧತೆ ಮಾಡಿಕೊಳ್ಳಿ ಅಂತಾ ಆತ ಹೇಳ್ತಿದ್ದಾನೆ. ಹೀಗಾಗಿ ಆತ ಮದುವೆ ವೇಳೆ ನಿತ್ಯಾಗೆ ಕೈಕೊಟ್ಟು ಹೋಗ್ತಾನೆ.. ನಿತ್ಯ ಜೊತೆ ಕರ್ಣ ಮದುವೆಯನ್ನ ಮಾಡಿಸ್ಬೋದು ಅಂತಾ ವೀಕ್ಷಕರು ಲೆಕ್ಕಾಚಾರ ಹಾಕಿದ್ದಾರೆ.

ನೋಡಿರಿ

