ಅನಾಮಧೇಯ ಭಕ್ತನಿಂದ ಶಿರಡಿಯ ಸಾಯಿಬಾಬಾ ದೇಗುಲಕ್ಕೆ 59 ಲಕ್ಷದ ಮೌಲ್ಯದ ಚಿನ್ನದ ಕಿರೀಟ ಅರ್ಪಣೆ!

ಅನಾಮಧೇಯ ಭಕ್ತನಿಂದ ಶಿರಡಿಯ ಸಾಯಿಬಾಬಾ ದೇಗುಲಕ್ಕೆ 59 ಲಕ್ಷದ ಮೌಲ್ಯದ ಚಿನ್ನದ ಕಿರೀಟ ಅರ್ಪಣೆ!

ದೇಶದಾದ್ಯಂತ ಗುರುವಾರ ಗುರುಪೂರ್ಣಿಮೆ ಆರಚಣೆ ಮಾಡಲಾಗಿತ್ತು. ಶಿರಡಿಯ ಸಾಯಿಬಾಬಾ ದೇವಸ್ಥಾನಲ್ಲೂ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸಿದ್ರು. ಈ ಸಂದರ್ಭದಲ್ಲೇ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದಾನವಾಗಿ ನೀಡಿದ್ದಾರೆ.

ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗೆ ಅನ್ನಪ್ರಸಾದದಲ್ಲಿ ಸಿಗಲಿದೆ ರುಚಿಕರ ವಡೆ- ಪ್ರತಿದಿನ 35 ಸಾವಿರ ಮಸಾಲಾ ವಡೆ ರೆಡಿ

ಶಿರಡಿ ಸಾಯಿಬಾಬಾ ದೇವಾಲಯದಲ್ಲಿ 1908 ರಿಂದಲೂ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ದೇಶಾದ್ಯಂತ ಹಾಗೂ ವಿದೇಶಿ ಭಕ್ತರಿಂದ ಹತ್ತಾರು ಕೊಡುಗೆಗಳು ದೇವಸ್ಥಾನಕ್ಕೆ ಹರಿದು ಬರುತ್ತದೆ. ಇದೀಗ ಅನಾಮಧೇಯ ಭಕ್ತರೊಬ್ಬರು ಚಿನ್ನದ ಕಿರೀಟವನ್ನು ದೇವರಿಗೆ ಅರ್ಪಿಸಿದ್ದಾರೆ. ದೇಣಿಗೆ ನೀಡಲಾದ 65 ಲಕ್ಷರೂ. ಮೌಲ್ಯದ ಆರಭರಣಗಳ ಪೈಕಿ 566 ಗ್ರಾಂ ತೂಕದ 59 ಲಕ್ಷ ಮೌಲ್ಯದ ಚಿನ್ನದ ಕಿರೀಟ, 54 ಗ್ರಾಂ ತೂಕದ ಚಿನ್ನದ ಹೂವುಗಳು (ಆಭರಣ), 2 ಕೆಜಿ ತೂಕದ ಬೆಳ್ಳಿಯ ಹಾರ ಸೇರಿವೆ. ಆಭರಣವನ್ನು ಬಾಬಾಗೆ ಅರ್ಪಿಸುವಾಗ ಭಕ್ತರು ತಮ್ಮ ಹೆಸರು ಅಥವಾ ವಿಳಾಸವನ್ನ ಬಹಿರಂಗಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಭಕ್ತರು ಕಾಣಿಕೆ ನೀಡಿರುವ ಬಗ್ಗೆ ಮಾತನಾಡಿರುವ ಶಿರಡಿ ಸಾಯಿ ಟ್ರಸ್ಟ್‌ನ ಸಿಇಒ ಗೋರಕ್ಷ ಗಾಡಿಲ್ಕರ್, ಇದು ಕೇವಲ ಹಣಕಾಸಿನ ದೃಷ್ಟಿಯಿಂದ ಅಮೂಲ್ಯವಾದ ದೇಣಿಗೆಯಾಗಿರದೇ, ಆಳವಾದ ಭಕ್ತಿ ಮತ್ತು ಭಕ್ತಿಯ ಸಂಕೇತವೂ ಆಗಿದೆ. ಜೊತೆಗೆ ಸಾಯಿ ಬಾಬಾ ಭಕ್ತನ ಹೃದಯದಿಂದ ಮೂಡಿದ ಭಕ್ತಿ ಮತ್ತು ಕೃತಜ್ಞತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.

Shwetha M