ತಿಮ್ಮಪ್ಪನ ಭಕ್ತರಿಗೆ ಅನ್ನಪ್ರಸಾದದಲ್ಲಿ ಸಿಗಲಿದೆ ರುಚಿಕರ ವಡೆ- ಪ್ರತಿದಿನ 35 ಸಾವಿರ ಮಸಾಲಾ ವಡೆ ರೆಡಿ

ತಿಮ್ಮಪ್ಪನ ಭಕ್ತರಿಗೆ ಅನ್ನಪ್ರಸಾದದಲ್ಲಿ ಸಿಗಲಿದೆ ರುಚಿಕರ ವಡೆ- ಪ್ರತಿದಿನ 35 ಸಾವಿರ ಮಸಾಲಾ ವಡೆ ರೆಡಿ

ತಿರುಮಲ ತಿರುಪತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚು. ದಿನಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಾರೆ. ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ಕೂಡಾ ಇರುತ್ತದೆ. ಇದೀಗ ಟಿಟಿಡಿ ಅನ್ನಪ್ರಸಾದಕ್ಕೆ ಹೊಸ ರುಚಿ ಸೇರ್ಪಡೆ ಮಾಡಿದೆ.

ಇದನ್ನೂ ಓದಿ:ಗುರು ಪೂರ್ಣಿಮೆಯ ಮಹತ್ವವೇನು? – ಆಷಾಢ ಹುಣ್ಣಿಮೆಗೆ ಆಚರಿಸುವ ಪವಿತ್ರಹಬ್ಬದ ವಿಶೇಷತೆಗಳೇನು?

ಭಕ್ತರಿಗೆ ಶ್ರೀ ವೆಂಕಟೇಶ್ವರನ ದರ್ಶನದಿಂದ ಮನಸಿಗೆ ಎಷ್ಟು ನೆಮ್ಮದಿಯೋ, ಇಲ್ಲಿ ಕೊಡುವ ಅನ್ನಪ್ರಸಾದ ಹೊಟ್ಟೆಯ ಹಸಿವನ್ನು ತಣಿಸುವುದು ಕೂಡಾ ಅಷ್ಟೇ ಸತ್ಯ. ತಿಮ್ಮಪ್ಪನ ದರ್ಶನಕ್ಕೆ ಬಂದ ಭಕ್ತರು ಹಸಿವಿನೊಂದಿಗೆ ಆಗಮಿಸದಂತೆ ಬೆಟ್ಟದ ಮೇಲೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆದು ಪ್ರಸಾದ ನೀಡಲಾಗುತ್ತದೆ. ಇದರೊಂದಿಗೆ ತರಿಕೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದಲ್ಲೂ ಭಕ್ತರಿಗೆ ಮೂರು ಟೈಂ ನಲ್ಲೂ ಪ್ರಸಾದವನ್ನು ನೀಡಲಾಗುತ್ತದೆ. ಬೆಳಗ್ಗೆ ಉಪಹಾರ ಮಾತ್ರವಲ್ಲದೇ, ಮಧ್ಯಾಹ್ನ ಮತ್ತು ಸಂಜೆಯ ವೇಳೆ ಹೊಟ್ಟೆ ತುಂಬಾ ಅನ್ನಪ್ರಸಾದವನ್ನ ನೀಡಲಾಗುತ್ತದೆ. ಆದರೆ ಈಗ ಅನ್ನಪ್ರಸಾದದಲ್ಲಿ ಭಕ್ತರಿಗಾಗಿ ಹೊಸ ತಿನಿಸನ್ನು ಸೇರ್ಪಡೆ ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಶ್ರೀ ವೆಂಕಟೇಶ್ವರ ಸ್ವಾಮಿಯವರ ಅನ್ನಪ್ರಸಾದದಲ್ಲಿ ಮಸಾಲೆ ವಡೆಯನ್ನು ಸೇರ್ಪಡೆ ಮಾಡಿದೆ. ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆ ತಯಾರಿಸಲಾಗುವ ಈ ವಡೆಯನ್ನು, ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದಲ್ಲಿ ಭಕ್ತರಿಗೆ ನೀಡುತ್ತಿದೆ. ಮೊದಲು ಟ್ರಯಲ್ ಮಾಡಿ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಬಂದ ಬಳಿಕ ಈ ಹೊಸ ತಿನಿಸನ್ನು ಅನ್ನಪ್ರಸಾದದಲ್ಲಿ ಸೇರ್ಪಡೆ ಮಾಡಿದೆ. ಇದರೊಂ ತಿರುಮಲದಲ್ಲಿನ ಮಾತೃಶ್ರೀ ತರಿಕೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದಲ್ಲಿ ಟಿಟಿಡಿ ಚೇರ್ ಮನ್ ಬಿಆರ್ ನಾಯುಡು ಅವರು ಶ್ರಿವಾರಿ ಭಕ್ತರಿಗೆ ಮಸಾಲ ವಡೆಯನ್ನು ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಭಕ್ತರಿಗೆ ಸ್ವತಃ ಟಿಟಿಡಿ ಅಧ್ಯಕ್ಷರೇ ವಡೆಯ್ನು ಬಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

ಭಕ್ತರಿಗೆ ನೀಡುವ ಈ ವಡೆಯನ್ನು ಕಡಲೆಇಟ್ಟು, ಹಸಿಮೆಣಸಿನ ಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ, ಪುದಿನ ಹಾಗೂ ಸೊಂಪು ಹಾಕಿ ತಯಾರಿಸುತ್ತಾರೆ. ಅನ್ನಪ್ರಸಾದ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ 10:30 ರಿಂದ ಸಂಜೆ 4 ಗಂಟೆ ವರೆಗೂ ನಿತ್ಯ 35 ಸಾವಿರ ವಡೆಗಳನ್ನು ಭಕ್ತರಿಗೆ ನೀಡಲಾಗುತ್ತದೆ.

Sulekha