ಸೊಳ್ಳೆ ಕಾಟಕ್ಕೆ ಅಡುಗೆ ಮನೆಯ ಈ ವಸ್ತು ಬೆಸ್ಟ್! – ಒಂದೇ ಒಂದು ಈರುಳ್ಳಿಯಿಂದ ಸೊಳ್ಳೆಗಳು ಮಾಯ!

ಸಾಮಾನ್ಯವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಂತೂ ಹೇಳಬೇಕಿಲ್ಲ, ತುಂತುರು ಮಳೆಯಾದಾಗ ಸೊಳ್ಳೆಗಳ ಹರಡುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಸೊಳ್ಳೆಯ ಬತ್ತಿ, ಲಿಕ್ವಿಡ್ ಹಾಗೂ ವಿವಿಧ ಸೊಳ್ಳೆ ನಿವಾರಕಗಳನ್ನು ಬಳಸುತ್ತಾರೆ. ಇವುಗಳಿಂದ ಸ್ವಲ್ಪ ಮಟ್ಟಿಗೆ ಸೊಳ್ಳೆಗಳನ್ನು ತೊಡೆದುಹಾಕಬಹುದು. ಆದರೆ, ನಮ್ಮ ಆರೋಗ್ಯವು ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಅದಕ್ಕಾಗಿಯೇ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಹುದು.
ಇದನ್ನೂ ಓದಿ: ಮುಖದ ಕಾಂತಿ ಹೆಚ್ಚಿಸುತ್ತೆ ಕಡ್ಲೆ ಹಿಟ್ಟು! – ಈ ಫೇಸ್ ಪ್ಯಾಕ್ ಬಳಸಿದ್ರೆ ಮುಖದ ಕಲೆ ಮಾಯ!
ನಮ್ಮ ಮನೆಗಳಲ್ಲಿ ಈರುಳ್ಳಿಯನ್ನ ಹೆಚ್ಚಾಗಿ ಅಡುಗೆಗೆ ಬಳಸಲಾಗುತ್ತದೆ. ಆದರೆ ಸೊಳ್ಳೆಗಳನ್ನು ನಿವಾರಿಸಲು ಈರುಳ್ಳಿ ತುಂಬಾ ಉಪಯುಕ್ತವಾಗಿದೆ. ಈರುಳ್ಳಿಯಿಂದ ಸೊಳ್ಳೆಗಳನ್ನು ಆರಾಮವಾಗಿ ಓಡಿಸಬಹುದು. ಹೌದು, ಈರುಳ್ಳಿಯಲ್ಲಿ ಸಲ್ಫರ್ ಎಂಬ ಸಂಯುಕ್ತವಿದ್ದು, ಅದರ ಕಟುವಾದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಉಪ್ಪು ಈ ಸಲ್ಫರ್ ಸಂಯುಕ್ತಗಳ ವಾಸನೆಯನ್ನು ಹೆಚ್ಚಿಸಲು ಮತ್ತು ಗಾಳಿಯಲ್ಲಿ ಹರಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಸೊಳ್ಳೆಗಳು ಆ ಸ್ಥಳದಿಂದ ದೂರವಿರುತ್ತವೆ..
ಬಳಸುವ ಮೊದಲ ಮಾರ್ಗ
ಮೊದಲನೆಯದಾಗಿ ನೀವು ಈರುಳ್ಳಿಯನ್ನು ಸಿಪ್ಪೆ ತೆಗೆಯಬೇಕು. ನಂತರ ಈರುಳ್ಳಿಯಲ್ಲಿ ಎರಡು ಆಳವಾದ ರಂದ್ರ ಮಾಡಿ. ಆದರೆ ಈರುಳ್ಳಿ ಎರಡು ತುಂಡುಗಳಾಗಬಾರದು ಎಂಬುದನ್ನು ನೆನಪಿನಲ್ಲಿಡಿ. ಈಗ ತೆರೆದ ಭಾಗವನ್ನು ಉಪ್ಪಿನಿಂದ ತುಂಬಿಸಿ. ಉಪ್ಪುಸಹಿತ ಈರುಳ್ಳಿಯನ್ನು ಸೊಳ್ಳೆಗಳು ಹೆಚ್ಚು ಬರುವ ಸ್ಥಳದಲ್ಲಿ ಇರಿಸಿ.
ಇನ್ನೊಂದು ವಿಧಾನವೂ ಇದೆ. ಅದಕ್ಕಾಗಿ, ಈರುಳ್ಳಿಯ ಸಿಪ್ಪೆ ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿ ಪುಡಿಮಾಡಿ. ಈ ಪೇಸ್ಟ್ ಅನ್ನು ಸೋಸಿದರೆ ನಿಮಗೆ ಈರುಳ್ಳಿ ರಸ ಬರುತ್ತದೆ. ರಸಕ್ಕೆ 1-2 ಟೀ ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ದ್ರಾವಣವನ್ನು ತಯಾರಿಸಿ.
ನಂತರ ಈರುಳ್ಳಿ ರಸಕ್ಕೆ ಉಪ್ಪಿನ ದ್ರಾವಣ ಸೇರಿಸಿ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಸಂಜೆ ಮತ್ತು ಹೆಚ್ಚು ಸೊಳ್ಳೆಗಳು ಬರುವ ಕಡೆ, ಈ ದ್ರಾವಣವನ್ನು ಸಿಂಪಡಿಸಿ. ಸೊಳ್ಳೆಗಳು ಹೆಚ್ಚಾಗಿದ್ದರೆ, ದಿನಕ್ಕೆ 2-3 ಬಾರಿ ಸಿಂಪಡಿಸಿ ಇದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ನೋಡಿರಿ

