ತಮಿಳು ಚಿತ್ರದಲ್ಲಿ ಚಿನ್ನತಲಾ, ಧೋನಿ ಆಕ್ಟಿಂಗ್? – ತೆರೆ ಮೇಲೂ ಕುಚಿಕುಗಳ ಹವಾ!?

ಸುರೇಶ್ ರೈನಾ.. ಕ್ರೀಸ್ ಗೆ ಎಂಟ್ರಿ ಕೊಟ್ರೆ ಸಾಕು.. ಸಿಕ್ಸ್.. ಫೋರ್ ಫಿಕ್ಸ್.. ರೈನಾ ಆಡ್ತಿದ್ದಾರೆ ಅಂದ್ರೆ ಫ್ಯಾನ್ಸ್ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು.. ಆದ್ರೆ ಸುರೇಶ್ ರೈನಾ ಕ್ರಿಕೆಟ್‌ನಿಂದ ದೂರವಾಗಿ ವರ್ಷಗಳೇ ಕಳೆದಿದೆ. ಅದೆಷ್ಟೋ ಫ್ಯಾನ್ ಚಿನ್ನತಲಾನ ಕ್ರೀಸ್‌ನಲ್ಲಿ ಮಿಸ್ ಮಾಡಿಕೊಳ್ತಿದ್ದಾರೆ.. ಇದೀಗ ಮಿಸ್ಟರ್ ಐಪಿಎಲ್.. ಫ್ಯಾನ್‌ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.. ಇನ್ಮುಂದೆ ಫ್ಯಾನ್ಸ್ ಚಿನ್ನತಲಾರನ್ನ ಕಣ್ತುಂಬಿಕೊಳ್ಬೋದು.. ಆದ್ರೆ ಮೈದಾನದಲ್ಲಲ್ಲ.. ಸಿನಿಮಾ ಪರದೆ ಮೇಲೆ.. ಸುರೇಶ್ ರೈನಾ ಸಿನಿಮಾವೊಂದ್ರಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಬುಮ್ರಾ ಎಂಟ್ರಿ.. ದುಬಾರಿ ಕೃಷ್ಣ ಔಟ್ – ಕರುಣ್‌ಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್
ಸಿನಿಮಾ ರಂಗಕ್ಕೂ ಕ್ರಿಕೆಟ್‌ಗೂ ಅವಿನಾಭಾವ ಸಂಬಂಧ.. ಈಗಾಗಲೇ ಕೆಲ ಕ್ರಿಕೆಟ್ ದಿಗ್ಗಜರ ಜೀವನಾಧಾರಿತ ಕತೆ ತೆರೆಗೆ ಬಂದಿದ್ರೆ.. ಇನ್ನೂ ಕೆಲ ಕ್ರಿಕೆಟರ್ಸ್ ಸಿನಿಮಾಗಳಲ್ಲಿ ಆಕ್ಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಇದೀಗ ಇದೇ ಸಾಲಿಗೆ ಸೇರಲಿದ್ದಾರೆ ಚಿನ್ನತಲಾ.. ಹೌದು.. ಸುರೇಶ್ ರೈನಾ ಮೈದಾನದಲ್ಲಿ ಕಾಣಿಸಿಕೊಂಡ್ರು ಅಂದ್ರೆ ಫ್ಯಾನ್ಸ್‌ಗೆ ಹಬ್ಬ.. ಕ್ರೀಸ್ನಲ್ಲಿದ್ದಷ್ಟು ಹೊತ್ತು ಸಿಕ್ಸರ್, ಬೌಂಡರಿಗಳು ಸುರಿಮಳೆ ಸುರಿಸ್ತಿದ್ದ ರೈನಾ, ಮೈದಾನದಲ್ಲಿ ಸಖತ್ ಆ್ಯಕ್ಟೀವ್ ಪ್ಲೇಯರ್ ಆಗಿದ್ರು.. ಫೀಲ್ಡಿಂಗ್ ವಿಚಾರಕ್ಕೆ ಬಂದ್ರೂ ಅದ್ರಲ್ಲೂ ಎತ್ತಿದ ಕೈ.. ಸುರೇಶ್ ರೈನಾ.. 322 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.. 07ಶತಕ.. 48 ಅರ್ಧಶತಕ ಬಾರಿಸಿ 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ರು.. ಅಷ್ಟೇ ಅಲ್ಲ.. ಸುರೇಶ್ ರೈನಾ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆನ್ನೆಲುಬು ಕೂಡ ಆಗಿದ್ದರು. 15 ಸೀಸನ್ ಗಳಲ್ಲಿ 5,528 ರನ್ ಗಳಿಸಿ Mr.IPL ಎಂಬ ಬಿರುದನ್ನೂ ಕೂಡ ಪಡೆದಿದ್ರು.. ಹೀಗಾಗೇ ಸುರೇಶ್ ರೈನಾರನ್ನು ಚೆನ್ನೈ ನ ಜನ ಪ್ರೀತಿಯಿಂದ ಚಿನ್ನತಲಾ ಅಂತಾ ಕರಿತಾರೆ.. ಆದ್ರೆ ರೈನಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವ್ರನ್ನ ಮೈದಾನದಲ್ಲಿ, ಟಿವಿ ಪರದೆ ಮೇಲೆ ನೋಡಿ ವರ್ಷಗಳೇ ಉರುಳಿವೆ. ರೈನಾ ಆಟವನ್ನ ಫ್ಯಾನ್ಸ್ ಮಿಸ್ ಮಾಡಿಕೊಳ್ತಿದ್ದಾರೆ.. ಆದ್ರೆ ಇನ್ಮುಂದೆ ಹಾಗಾಗಲ್ಲ.. ಸುರೇಶ್ ರೈನಾ ಸಿನಿಮಾದಲ್ಲಿ ನಟಿಸಲಿದ್ದಾರೆ.
ಹೌದು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿರೋ ರೈನಾಗೆ ಸಾವಿರಾರು ಅಭಿಮಾನಿಗಳು ಇದ್ದಾರೆ. ಇದೀಗ ಸುರೇಶ್ ರೈನಾ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಪ್ರೊಡೆಕ್ಷನ್ ನಂ.1 ಹೆಸರಿನಲ್ಲಿ ಡ್ರೀಮ್ ನೈಟ್ ಸ್ಟೋರಿಸ್ ಪ್ರೈವೆಟ್ ಲಿಮಿಟೆಡ್ ನಿರ್ಮಾಣ ಮಾಡ್ತಿದ್ದು, ಚಿನ್ನತಲಾರ ಡೆಬ್ಯು ಟೀಸರ್ ಬಿಡುಗಡೆ ಮಾಡಿದೆ. ಈ ಚಿತ್ರವನ್ನ ಕಾಲಿವುಡ್‌ನ ಖ್ಯಾತ ನಿರ್ದೇಶಕ ಲೋಗನ್ ನಿರ್ದೇಶಿಸುತ್ತಿದ್ದಾರೆ. ಡ್ರೀಮ್ ನೈಟ್ ಸ್ಟೋರೀಸ್ ನಿರ್ಮಾಣ ಕಂಪನಿಯಡಿಯಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಡೆಬ್ಯೂ ಟೀಸರ್ ನೋಡಿದಾಗ ಇದೊಂದು ಕ್ರಿಕೆಟ್ ಆಧಾರಿತ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಆದ್ರೆ ಈ ಸಿನಿಮಾದ ಟೈಟಲ್ ಏನು? ಸುರೇಶ್ ರೈನಾ ಈ ಚಿತ್ರದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ತಾರಾ..? ಇಲ್ಲ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಅಧಿಕೃತವಾಗಿಲ್ಲ. ಬಹುಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಈ ಸಿನಿಮಾದಲ್ಲಿ ಸುರೇಶ್ ರೈನಾ, ಪಾತ್ರವೇನು..? ಎಂಬುವುದು ಭಾರೀ ಕುತೂಹಲ ಕೆರಳಿಸಿದೆ.
ಮತ್ತೊಂದ್ಕಡೆ ಸುರೇಶ್ ರೈನಾ ನಟಿಸುತ್ತಿರೋ ಸಿನಿಮಾದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.. ಧೋನಿ ಹಾಗೂ ಸುರೇಶ್ ರೈನಾ ಕುಚಿಕು ದೋಸ್ತಿಗಳು.. ಅನೇಕ ಪಂದ್ಯಗಳನ್ನ ಒಟ್ಟಿಗೆ ಆಡಿದ್ದಾರೆ.. ಈ ಇಬ್ಬರು ಸ್ಟಾರ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಸಿನಿಮಾ ಡೆಬ್ಯೂ ರಿಲೀಸ್ ವೇಳೆ ಎಂ ಎಸ್ ಧೋನಿ ಈ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ ಅಂತಾ ಕೇಳಲಾಗಿತ್ತು.. ಆಗ ರೈನಾ.. ಈ ಬಗ್ಗೆ ಅವ್ರೇ ಆನ್ಸರ್ ಮಾಡ್ತಾರೆ ಎಂದು ಹೇಳಿದ್ದಾರೆ. ಸುರೇಶ್ ರೈನಾ ಮಾತು ಕೇಳ್ತಿದ್ದಂತೆ ಎಂಎಸ್ ಧೋನಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್ ಅಂತಾ ಫ್ಯಾನ್ಸ್ ಹೇಳಿದ್ದಾರೆ.. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.. ಇನ್ನೂ ಸಿನಿಮಾದಲ್ಲಿ ಯಾರೆಲ್ಲಾ ಆಕ್ಟ್ ಮಾಡ್ತಾರೆ ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ.. ಒಟ್ಟಿನಲ್ಲಿ ಈ ಸಿನಿಮಾ ಮಾತ್ರ ಸಖತ್ ಹೈಪ್ ಕ್ರಿಯೆಟ್ ಮಾಡಿದೆ.. ಚಿನ್ನತಲಾರನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

ನೋಡಿರಿ

