ಬುಮ್ರಾ ಎಂಟ್ರಿ.. ದುಬಾರಿ ಕೃಷ್ಣ ಔಟ್ – ಕರುಣ್‌ಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್
ಟಾಸ್ ಗೆದ್ದು ಆಂಗ್ಲರ ಆಟ

ಬುಮ್ರಾ ಎಂಟ್ರಿ.. ದುಬಾರಿ ಕೃಷ್ಣ ಔಟ್  –  ಕರುಣ್‌ಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್ಟಾಸ್ ಗೆದ್ದು ಆಂಗ್ಲರ ಆಟ

ಇಂಗ್ಲೆಂಡ್‌ನ ಲೀಡ್ಸ್‌  ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಸರಣಿ ಆರಂಭ ಮಾಡಿತ್ತು.. ಬಟ್ ಬರ್ಮಿಂಗ್ ಹ್ಯಾಂನಲ್ಲಿ ಸೋಲಿನ ಸೇಡನ್ನ ಗಿಲ್ ಪಡೆ ತೀರಿಸಿಕೊಂಡಿತ್ತು.. 2ನೇ ಟೆಸ್ಟ್ ಗೆದ್ದ ಟೀಂ ಇಂಡಿಯಾ ಲೀಡ್ಸ್‌ ಅಂಗಳದಲ್ಲಿ 3ನೇ ಟೆಸ್ಟ್‌ ಗೆಲ್ಲೋಕೆ ಪಣ ತೊಟ್ಟಿದೆ.

ಪ್ರಸಿದ್ಧ್ ಔಟ್.. ಬುಮ್ರಾ ಇನ್

3ನೇ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ ಯಾವುದೇ ದೊಡ್ಡ ಬದಲಾವಣೆ ಮಾಡಿಲ್ಲ.. ಲಾರ್ಡ್ಸ್​ ಟೆಸ್ಟ್​ ಪಂದ್ಯದಲ್ಲಿ ಜಸ್​​ಪ್ರಿತ್ ಬೂಮ್ರಾ ಕಮ್​ಬ್ಯಾಕ್​ ಮಾಡಿದ್ದಾರೆ.. ಹೀಗಾಗಿ ದುಬಾರಿ ಪ್ರಸಿದ್ಧ್​ ಕೃಷ್ಣ  ​ಹೊರ ಬಿದ್ದಿದ್ದಾರೆ. ಪ್ರಸಿದ್ಧ್ ಎರಡೂ ಟೆಸ್ಟ್‌ಗಳಲ್ಲಿ ಸಿಕ್ಕಾಪಟ್ಟೆ ರನ್​ ಬಿಟ್ಟುಕೊಟ್ಟು ಕೆಟ್ಟ ದಾಖಲೆ ಬರೆದಿದ್ರು.  ದುಬಾರಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತೀಯ ಅಭಿಮಾನಿಗಳು ಕೃಷ್ಣರನ್ನು ಬಹಳಷ್ಟು ಟ್ರೋಲ್ ಮಾಡಿದ್ದರು. ಹೀಗಾಗಿ ಇವರನ್ನ ಕೈ ಬಿಟ್ಟು ಬುಮ್ರಾಗೆ ಚಾನ್ಸ್ ನೀಡಲಾಗಿದೆ.  ಬುಮ್ರಾ ವಾಪಸ್ ಬಂದಿದ್ದು ಬಿಟ್ರೆ ತಂಡದಲ್ಲಿ ಯಾವುದೇ ದೊಡ್ಡ ಚೇಂಜ್ ಆಗಿಲ್ಲ.. ಬುಮ್ರಾ ಬಂದಿರೋದು ಬೌಲಿಂಗ್‌ಗೆ ದೊಡ್ಡ ಬಲ ಬಂದಿದೆ.

ಕರುಣ್ ನಾಯರ್ ಸಿಕ್ಕಿದೆ ಬಿಗ್ ಚಾನ್ಸ್ 

1ಮತ್ತು 2 ನೇ ಟೆಸ್ಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕರುಣ್ ನಾಯರ್ ಅವರನ್ನ  3ನೇ ಟೆಸ್ಟ್ ನಲ್ಲಿ ಕೈ ಬಿಡಲಾಗುತ್ತೆ ಅಂತ ಚರ್ಚೆ ಆಗಿತ್ತು. ಬಟ್ ಲಾರ್ಡ್ಸ್ ಟೆಸ್ಟ್‌ಗೆ ಕರುಣ್ ನಾಯರ್‌ ಚಾನ್ಸ್ ಸಿಕ್ಕಿದೆ. ಎರಡು ಪಂದ್ಯಗಳಲ್ಲಿ ವಿಫಲವಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ.  8 ವರ್ಷಗಳ ನಂತರ ಕರುಣ್ ನಾಯರ್‌ಗೆ ಭಾರತೀಯ ಟೆಸ್ಟ್ ತಂಡದಲ್ಲಿ ಅವಕಾಶ ನೀಡಿದ್ರೂ ಕಳೆದ ಎರಡು ಪಂದ್ಯದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.. 3ನೇ ಅವಕಾಶವನ್ನ ಕರುಣ್ ನಾಯರ್ ಸರಿಯಾಗಿ ಬಳಸಿಕೊಳ್ಳಬೇಕು. ಇಲ್ಲವಾದ್ರೆ ಡಿಯಾರ್ ಕ್ರಿಕೆಟ್ ಕರುಣ್ ಅವರನ್ನ ಕೈ ಬಿಡೋದು ಪಕ್ಕಾ..

 ಟಾಸ್‌ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

 3ನೇ ಪಂದ್ಯದಲ್ಲೂ  ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಎರಡು ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು..  ಎರಡನೇ ಟೆಸ್ಟ್‌ನಲ್ಲಿ ಬೌಲಿಂಗ್ ಆಯ್ಕೆ ಮಾಡ್ಕೊಂಡಿದ್ದು  ಇಂಗ್ಲೆಂಡ್‌ಗೆ ಉಲ್ಟಾ ಹೊಡೆದಿತ್ತು. ಬಟ್ ಈ ಸಲ ಲಾರ್ಡ್ಸ್‌ನಲ್ಲಿ ಟಾಸ್ ಗೆದ್ದಿರೋ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡ್ಕೊಂಡು ಬ್ಯಾಟಿಂಗ್ ಮಾಡುತ್ತಿದೆ.

ಇನ್ನೂ ಮೊದಲ ಟೆಸ್ಟ್ ಸೋತ ಟೀಮ್ ಇಂಡಿಯಾ, 2ನೇ ಟೆಸ್ಟ್​ನಲ್ಲಿ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಸಂಘಟಿತ ಆಟವಾಡಿದೆ. ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಸರಣಿ ಸಮಬಲ ಮಾಡಿಕೊಂಡಿರುವ ಟೀಮ್ ಇಂಡಿಯಾಗೆ ಲಾರ್ಡ್ಸ್​ ಟೆಸ್ಟ್​ ಮೋಸ್ಟ್ ಇಂಪಾರ್ಟೆಂಟ್. ಸರಣಿ ಗೆಲ್ಲುವಿನ ದೃಷ್ಟಿಯಿಂದ ಈ ಮ್ಯಾಚ್ ಗೆಲ್ಲಬೇಕು. ಈ ನಿಟ್ಟಿನಲ್ಲಿ ಲಾರ್ಡ್ಸ್​ನಲ್ಲಿ ಲೀಡ್ ಪಡೆದುಕೊಳ್ಳಬೇಕಿದೆ. ಹೀಗಾಗಿ ಎಚ್ಚರಿಕೆಯ ಜೊತೆಗೆ ಸಂಘಟಿತ ಆಟ ಮತ್ತೊಮ್ಮೆ ಹೊರಬರಬೇಕಿದೆ.  ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡೋದ್ರಿಂದ ಬೌಲರ್‌ಗಳು  ಆಂಗ್ಲ ಪಡೆಯನ್ನ ಕಟ್ಟಿ ಹಾಕಬೇಕಿದೆ.

 

 

Kishor KV