19 ಪಂದ್ಯ.. 12 ಸೋಲು.. 3 ಗೆಲುವು.. ಭಾರತಕ್ಕೆ ಲಾರ್ಡ್ಸ್ ಅಗ್ನಿ ‘ಪರೀಕ್ಷೆ’ – ಬೇಕಂತಲೇ ಹಸಿರು ಪಿಚ್ ಮಾಡಿದ್ರಾ?

ಕ್ರಿಕೆಟ್ ಕಾಶಿಯೆಂದೇ ಪ್ರಸಿದ್ಧವಾಗಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆಡುವುದು ಯಾವತ್ತಿದ್ದರೂ ಸ್ಪೇಷಲ್.. ಆದ್ರೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಪಿಚ್ ಈ ಹಿಂದಿನ ಲೀಡ್ಸ್ ಮತ್ತು ಬರ್ಮಿಂಗ್ ಹ್ಯಾಂನಲ್ಲಿ ಆಡಿದ ಪಿಚ್ ಗಳಂತಲ್ಲವೇ ಅಲ್ಲ.. ಲೀಡ್ಸ್ ನಲ್ಲಿ ಸೋತ್ರೂ ಬರ್ಮಿಂಗ್ ಹ್ಯಾಂನಲ್ಲಿ ಭಾರತ ಬೊಂಬಾಟ್ ಪ್ರದರ್ಶನ ನೀಡಿದೆ. ಇನ್ನೂ ಲಾರ್ಡ್ಸ್‌ನಲ್ಲಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದೆ.. ಇಂಗ್ಲೆಂಡ್ ಕೂಡ 2ನೇ ಪಂದ್ಯದ ಸೋಲಿನಿಂದ ರೊಚ್ಚಿಗೆದ್ದು ತನಗೆ ನೆರವಾಗುವಂತೆ ಪಿಚ್ ಮಾಡಿಸಿಕೊಂಡಿದೆ.
ಇದನ್ನೂ ಓದಿ: ಟ್ರೋಲರ್‌ಗಳಿಗೇನು ಗೊತ್ತು ಬುಮ್ರಾ ಬೆಲೆ? – ಭಾರತದ ಆಸ್ತಿಗೆ ಇದೆಂಥಾ ಅವಮಾನ?
ಬರ್ಮಿಂಗ್ ಹ್ಯಾಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದಿರೋ ಟೀಂ ಇಂಡಿಯಾಗೆ ಯಾಕೋ 3ನೇ ಟೆಸ್ಟ್ ಅಗ್ನಿ ಪರೀಕ್ಷೆಯಂತಿದೆ. ಯಾಕಂದ್ರೆ 2ನೇ ಟೆಸ್ಟ್ ಸೋಲಿನಿಂದ ಕಂಗೆಟ್ಟ ಇಂಗ್ಲೆಂಡ್ ಇಲ್ಲಿ ಸ್ವಲ್ಪ ರಣತಂತ್ರ ಮಾಡಿದಂತೆ ಕಾಣುತ್ತಿದೆ. ಇಲ್ಲಿ ಭಾರತ ಈ ಹಿಂದೆ ಗೆದ್ದ ಪಂದ್ಯವನ್ನ ಲೆಕ್ಕಹಾಕಿ ಈಗಿನ ಟೀಂಗೆ ಕಂಪ್ಯಾರ್ ಮಾಡಿದ್ರೆ ಟೀಂ ಇಂಡಿಯಾಗೆ ಸ್ವಲ್ಪ ಸವಾಲು ಅನ್ಸುತ್ತೆ..
ಅಂದಹಾಗೇ ಈ ಲಾರ್ಡ್ಸ್ ಮೈದಾನ ಏನ್ ಇದೆ ಇಲ್ಲಿ ಭಾರತ ತಂಡ ಇದುವರೆಗೆ ಒಟ್ಟು 19 ಪಂದ್ಯವ್ನ ಆಡಿದೆ. ಬಟ್ ಈ ಲಾರ್ಡ್ಸ್ ಪಿಚ್‌ನಲ್ಲಿ ಟೀಂ ಇಂಡಿಯಾ ದಾಖಲೆ ಚೆನ್ನಾಗಿಲ್ಲ.. ಇಲ್ಲಿ ಟೀಂ ಇಂಡಿಯಾ ಗೆದ್ದಿಗಿಂತ ಡ್ರಾ ಆಗಿದ್ದೆ ಹೆಟ್ಟು.. ಈ ಐತಿಹಾಸಿಕ ಮೈದಾನವಾದ್ರೂ ಭಾರತೀಯ ತಂಡದ ದಾಖಲೆ ಇಲ್ಲಿ ತುಂಬಾ ಕಳಪೆಯಾಗಿದೆ.
ಭಾರತಕ್ಕೆ ಕೈ ಹಿಡಿಯದ ಲಾರ್ಡ್ಸ್ ಅಂಗಳ
ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಈ ಮೈದಾನದಲ್ಲಿ ಭಾರತ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ 12 ಪಂದ್ಯಗಳನ್ನು ಸೋತಿದೆ. ಕೇವಲ 3 ಪಂದ್ಯಗಳನ್ನು ಗೆದ್ದಿದೆ. ಉಳಿದ 4 ಪಂದ್ಯಗಳು ಡ್ರಾ ಆಗಿವೆ.
1986 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಈ ಮೈದಾನದಲ್ಲಿ ಮೊದಲ ಬಾರಿಗೆ ಜಯಗಳಿಸಿತು. ಅದಾದ ನಂತರ, ಭಾರತ ತಂಡವು ತನ್ನ ಎರಡನೇ ಗೆಲುವು ಸಾಧಿಸಲು 28 ವರ್ಷಗಳ ಕಾಲ ಕಾಯಬೇಕಾಯಿತು. 2014 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದಿತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ಮೈದಾನದಲ್ಲಿ ಮೂರನೇ ಗೆಲುವು ಸಾಧಿಸಿತು. 2021 ರಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಹೀನಾಯವಾಗಿ ಸೋಲಿಸಿತು.
ಈ ಬಾರಿ ಲಾರ್ಡ್ಸ್ ಪಿಚ್ ಸ್ಥಿತಿ ಹೇಗಿದೆ?
ಇನ್ನೂ ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್‌ಗಳಿಗೆ ಪಿಚ್ ಹೇಗೆ ಅನ್ನೋದ್ರ ಬಗ್ಗೆ ಒಂದು ಕ್ಲಿಯರ್ ಪಿಚ್ಚರ್ ಸಿಕ್ಕಿದೆ. ಈ ಪಿಚ್ ಫುಲ್ ಹಸಿರು ಬಣ್ಣದಿಂದ ಕೂಡಿದೆ. ಅಂದ್ರೆ ಹುಲ್ಲು ಜಾಸ್ತಿ ಇದೆ. ಈ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ, ಆದರೆ ನಂತರ ಇಲ್ಲಿ ಉತ್ತಮ ಸೂರ್ಯನ ಬೆಳಕು ಇದ್ದರೆ, ಪಿಚ್ ಬ್ಯಾಟಿಂಗ್‌ಗೆ ಸಂಪೂರ್ಣವಾಗಿ ಅನುಕೂಲಕರವಾಗುತ್ತದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಇನ್ನಿಂಗ್ಸ್ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳು ಇಲ್ಲಿ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದರೆ, ನಂತರ ರನ್ ಗಳಿಸುವುದು ಸ್ವಲ್ಪ ಸುಲಭವಾಗುತ್ತದೆ. ಅದೇ ಸಮಯದಲ್ಲಿ, ಬೌಲರ್‌ಗಳು ಆರಂಭಿಕ ಸಹಾಯದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ಅನಗತ್ಯ ಹೊಡೆತಕ್ಕೆ ಹೋಗಬಾರದು
ಇನ್ನು ಹಸಿರು ಪಿಚ್‌ನಿಂದಾಗಿ ಭಾರತದ ಬ್ಯಾಟರ್‌ಗಳಿಗೆ ಲಾರ್ಡ್ಸ್ ಸ್ವಲ್ಪ ಸವಾಲು ಅನಿಸುತ್ತೆ.. ಇಲ್ಲಿ ಬ್ಯಾಟ್ಸ್‌ಮನ್‌ಗಳು ಬೇಕಾಬಿಟ್ಟಿ ಹೊಡೆತಕ್ಕೆ ಹೋಗಬಾರದು. ಲಾರ್ಡ್ಸ್ ನಲ್ಲಿ ಇಳಿಜಾರಿನಿಂದ ಕೂಡಿದ್ರಿಂದ ಭಾರತದದ ಬ್ಯಾಟ್ಸ್‌ಮನ್‌ಗಳು ಜಾಗರೂಕತೆಯಿಂದ ಆಡಬೇಕಾಗುತ್ತದೆ.
ಲಾರ್ಡ್ಸ್‌ನಲ್ಲಿ ಮೂವರಿಗೆ ಮಾತ್ರ ಆಡಿದ ಅನುಭವ
ಲೀಡ್ಸ್ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿತ್ತು. ಆದರೆ, ಲಾರ್ಡ್ಸ್‌ನಲ್ಲಿ ಕಠಿಣ ಪರಿಸ್ಥಿತಿ ಇರುವ ಸಾಧ್ಯತೆಗಳಿವೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ 2 ಬಾರಿ ಮತ್ತು ರಿಷಬ್ ಪಂತ್ ಒಂದು ಬಾರಿ ಮಾತ್ರ ಈ ಹಿಂದೆ ಲಾರ್ಡ್ಸ್‌ನಲ್ಲಿ ಆಡಿದ್ದಾರೆ. ನಾಯಕ ಶುಭ್ಮನ್ ಗಿಲ್ ಸೇರಿದಂತೆ ಎಲ್ಲರಿಗೂ ಇದು ಮೊದಲ ಅನುಭವವಾಗಿದೆ. ಭಾರತದ ಬ್ಯಾಟರ್‌ಗಳು ಎರಡು ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದರ ಮೇಲೆ ಸರಣಿಯ ಭವಿಷ್ಯ ನಿರ್ಧಾರವಾಗಲಿದೆ.

ನೋಡಿರಿ

