ಮದುವೆಗೂ ಮುನ್ನವೇ ಮಗುಗಾಗಿ ಬೇಡಿಕೆಯಿಟ್ಟ ಡ್ರೋನ್ ಪ್ರತಾಪ್ – ಮಕ್ಕಳು ಬೇಡ ಅಂದ್ರೆ ಡಿವೋರ್ಸ್ ಫಿಕ್ಸ್!

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಈಗ ಅಂತಿಮ ಹಂತಕ್ಕೆ ಬಂದಿದೆ. ಈಗಾಗ್ಲೇ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್ನ ಸಾಕಷ್ಟು ಅರ್ಥ ಮಾಡಿಕೊಂಡಿದ್ದಾರೆ. ಅವ್ರ ಬೇಕು ಬೇಡಗಳನ್ನ ತಿಳಿದುಕೊಂಡಿದ್ದಾರೆ.. ಇದ್ರಲ್ಲಿ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿ ಮಾತ್ರ ವೀಕ್ಷಕರನ್ನ ಮೋಡಿ ಮಾಡ್ತಿದ್ದಾರೆ. ಆದ್ರೀಗ ಡ್ರೋನ್ ಪ್ರತಾಪ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.. ಮದುವೆ ಆಗೋದಿಕ್ಕೆ ಮುನ್ನವೇ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮಕ್ಕಳಗಾಲಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ ದಾರುಣ ಅಂತ್ಯ – ಮಗುವಿನ ಆಸೆಯಲ್ಲಿ ಪ್ರಾಣಬಿಟ್ಟ ಅಮಾಯಕಿ
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಭರ್ಜರಿಯಾಗೇ ಮನರಂಜನೆ ನೀಡ್ತಿದೆ.. ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಲಾಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್ನಲ್ಲಿ ತೊಡಗಿಸಿಕೊಂಡಿವೆ. ಪ್ರಪೋಸಲ್ ರೌಂಡ್, ಆ ರೌಂಡ್, ಈ ರೌಂಡ್ ಎನ್ನುತ್ತಲೇ ರಿಯಲ್ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಳ್ಳುತ್ತಿವೆ. ಇದಾಗಲೇ ಈ ಶೋನಲ್ಲಿ ಹಲವು ರೌಂಡ್ ಆಗಿದ್ದು, ಪ್ರಪೋಸ್, ರೊಮಾನ್ಸ್, ಮದುವೆಯ ನಂತರ ಮಕ್ಕಳವರೆಗೂ ಬಂದು ನಿಂತಿದೆ! ಈ ಶೋನಲ್ಲಿ ಹೆಚ್ಚು ಹೈಲೈಟ್ ಆಗ್ತಿರೋದು ಅಂದ್ರೆ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿ.. ಗಗನಾಳನ್ನ ಇಂಪ್ರೆಸ್ ಮಾಡಲು ಡ್ರೋನ್ ಪ್ರತಾಪ್ ಬಿಗ್ ಸರ್ಪ್ರೈಸ್ ಕೊಡ್ತಾನೆ ಇರ್ತಾರೆ.. ಡ್ರೋನ್ ಪ್ರತಾಪ್ ತರ ಮನಸ್ಸಿರೋ ಹುಡುಗನೇ ನಮಗೆ ಸಿಗ್ಲಿ ಅಂತಾ ಅದೆಷ್ಟೋ ಯುವತಿಯರು ಹೇಳ್ತಿರ್ತಾರೆ.. ಆದ್ರೀಗ ಡ್ರೋನ್ ಪ್ರತಾಪ್ ಮದುವೆ ಆಗೋದಿಕ್ಕೂ ಮುನ್ನವೇ ತನ್ನ ಹೆಂಡ್ತಿಗೆ ಡಿವೋರ್ಸ್ ಕೊಡೋದಾಗಿ ಹೇಳಿದ್ದಾರೆ..
ಹೌದು.. ಕಳೆದ ವಾರ ಮನೆಗೆ ಬರೋ ಹೆಂಡ್ತಿಯ ಮನಸನ್ನ ಎಷ್ಟು ಅರ್ಥ ಮಾಡ್ಕೋಬೇಕು ಅನ್ನೋ ಟಾಸ್ಕ್ ಅನ್ನ ನೀಡಲಾಗಿತ್ತು.. ಇದ್ರಲ್ಲಿ ಡ್ರೋನ್ ಪ್ರತಾಪ್ ಗೆ ಮಹಿಳಾ ವೀಕ್ಷಕರು ಕೆಲ ಪ್ರಶ್ನೆಗಳನ್ನ ಕೇಳಿದ್ರು.. ಈ ವೇಳೆ ಯುವತಿಯೊಬ್ರು ಡ್ರೋನ್ ಪ್ರತಾಪ್ಗೆ ಒಂದು ವೇಳೆ ನಿಮ್ಮ ಹೆಂಡ್ತಿಯಾದವಳು ಮಕ್ಕಳು ಬೇಡ ಅಂದ್ರೆ ಏನು ಮಾಡ್ತೀರಿ ಎಂದು ಕೇಳಿದ್ದಾರೆ. ಆಗ ಡ್ರೋನ್ ಪ್ರತಾಪ್.. ನನಗೆ ಮಕ್ಕಳು ಬೇಕೇ ಬೇಕು. ಅದನ್ನು ಮುಂಚಿತವಾಗಿಯೇ ಮಾತನಾಡಿಕೊಳ್ತೇನೆ. ಮನಸ್ಸಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. ಆಗ ರವಿಚಂದ್ರನ್ ಅವರು, ಅಲ್ಲಿ ಇದ್ದ ಪ್ರಶ್ನೆ ಮದುವೆಯಾದ ಮೇಲೆ ಮಗು ಬೇಡ ಎಂದರೆ ಏನು ಮಾಡುತ್ತೀ ಎನ್ನುವುದು, ಮದುವೆಗೆ ಮುನ್ನವೇ ಡಿಸಿಷನ್ ತಗೊಂಡ್ವಿ ಎನ್ನುವ ಪ್ರಶ್ನೆಯೆಲ್ಲಾ ಬರುವುದಿಲ್ಲ. ಒಂದು ವೇಳೆ ಮದುವೆಯಾದ ಮೇಲೆ ಮಗುನೇ ಆಗದೇ ಇರುವ ಪರಿಸ್ಥಿತಿ ಇರಬಹುದು, ಮಗುನೇ ಬೇಡ ಎನ್ನುವ ಪರಿಸ್ಥಿತಿ ಇರಬಹುದು. ಆ ಸಮಯದಲ್ಲಿ ಏನು ಮಾಡುತ್ತಿ ಎಂದು ಕೇಳಿದ್ದಾರೆ. ಅದಕ್ಕೆ ಡ್ರೋನ್ ಪ್ರತಾಪ್, ಒಂದು ವೇಳೆ ಮಗು ಆಗುವ ಸ್ಥಿತಿ ಇದ್ದರೂ ಮಗು ಬೇಡ ಅಂದ್ರೆ ಆಕೆಗೆ ಡಿವೋರ್ಸ್ ಕೊಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿದ ಗಗನಾ ಒಂದು ಕ್ಷಣ ಶಾಕ್ ಆಗಿದ್ದಾರೆ. ಆದ್ರೆ ಡ್ರೋನ್ ಪ್ರತಾಪ್ ಮಾತನ್ನ ಜಡ್ಜಸ್ ಒಪ್ಪಿಕೊಂಡಿದ್ದಾರೆ. ಕೊನೆಗೆ ಗಗನಾ ಬಳಿ ನಿರಂಜನ್, ಈ ಮಾತಿಗೆ ನೀವು ಒಪ್ಪುತ್ತೀರಾ ಕೇಳಿದ್ದಾರೆ.. ಆಗ ಗಗನಾ ಕೂಡ ಡ್ರೋನ್ ಪ್ರತಾಪ್ ಹೇಳಿದ್ದು ಸರಿ ಇದೆ. ಒಂದು ವೇಳೆ ಮಗು ಆದ ಮೇಲೆ ಇಬ್ಬರೂ ಕೇರ್ ಮಾಡಬೇಕಾಗುತ್ತದೆ. ಅಮ್ಮ ಮಗುವನ್ನು ಬೇಡ ಎಂದುಬಿಟ್ಟರೆ ಕಷ್ಟ ಆಗುತ್ತದೆ. ಅದಕ್ಕಾಗಿಯೇ ಇವರು ಹೇಳಿದ್ದು ಸರಿಯಿದೆ ಎಂದಿದ್ದಾರೆ. ಅದಕ್ಕೆ ನಿರಂಜನ್ ತಮಾಷೆಗೆ ಹಾಗಿದ್ದರೆ ಇವ್ರು ಡಿವೋರ್ಸ್ ಆಗೋದನ್ನೇ ನೀವು ಕಾಯ್ತಾ ಇದ್ದೀರಾ ಎಂದು ಗಗನಾಳ ಕಾಲೆಳೆದಿದ್ದಾರೆ.
ಇದೀಗ ಈ ಎಪಿಸೋಡ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಈ ಶೋನಲ್ಲಿ ರೊಮಾನ್ಸ್, ಮದುವೆ, ಮಕ್ಕಳು ಎಲ್ಲವೂ ಆಯ್ತು.. ರಿಯಾಲಿಟಿ ಷೋ ಹೆಸರಿನಲ್ಲಿ ಇನ್ನು ಏನೇನು ನೋಡಬೇಕೋ ಅಂತಾ ಕಾಮೆಂಟ್ ಮಾಡ್ತಿದ್ದಾರೆ.. ಇನ್ನೂ ಕೆಲವರು ಈ ಶೋನಲ್ಲಿ ಇಷ್ಟೊಂದು ಡ್ರಾಮಾ ಬೇಕಾ.. ಡ್ರೋನ್ ಪ್ರತಾಪ್, ಗಗನಾ ರಿಯಲ್ ಪ್ರೇಮಿಗಳಂತೆ ವರ್ತಿಸುತ್ತಿದ್ದಾರೆ. ಗಗನಾಗಾಗಿ ಮಹಾತ್ಯಾಗಿಯಾದವರಂತೆ ಡ್ರೋನ್ ಪ್ರತಾಪ್ ವರ್ತಿಸುತ್ತಿದ್ದರೆ, ಆ ಪ್ರೀತಿಯನ್ನು ನೋಡಿ, ಜೀವನದಲ್ಲಿ ಪ್ರೀತಿಯನ್ನೇ ಕಾಣದವರಂತೆ ಗಗನಾ ಕಣ್ಣೀರು ಸುರಿಸುತ್ತಿದ್ದಾರೆ. ಇಷ್ಟೊಂದು ಓವರ್ ಆಕ್ಟಿಂಗ್ ಯಾಕೆ ಬೇಕು.. ಟಿಆರ್ಪಿಗಾಗಿ ಏನ್ ಬೇಕಾದ್ರೂ ಮಾಡ್ತೀರಾ ಅಂತಾ ಕಾಮೆಂಟ್ ಮಾಡಿದ್ದಾರೆ ವೀಕ್ಷಕರು..
ಮತ್ತೊಂದ್ಕಡೆ ಡ್ರೋನ್ ಪ್ರತಾಪ್ ತಾಯಿಗೆ ಬಿಗ್ಸರ್ಪ್ರೈಸ್ ಕೊಟ್ಟಿದ್ದಾರೆ.. ತಂದೆ ತಾಯಿ ಊರಿನಲ್ಲಿ ಓಡಾಡೋಕೆ ಕಾರ್ ಕೊಡಿಸಿದ್ದಾರೆ.. ಬರೋಬ್ಬರಿ 20 ಲಕ್ಷ ರುಪಾಯಿಯ ಕಾರ್ ಅನ್ನ ಗಿಫ್ಟ್ ಆಗಿ ನೀಡಿದ್ದಾರೆ. ಡ್ರೋನ್ ಪ್ರತಾಪ್ ಸರ್ಪ್ರೈಸ್ ಗೆ ಅವ್ರ ತಾಯಿ ಭಾವುಕರಾಗಿದ್ದಾರೆ.. ಅನಂದ ಭಾಷ್ಪ ಸುರಿಸುತ್ತಾ ಮಗನನ್ನ ಗಟ್ಟಿಯಾಗಿ ಅಪ್ಪಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ತಾಯಿಗೆ ಕೊಟ್ಟಿರೋ ಸರ್ಪ್ರೈಸ್ ನೋಡಿ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ ಅಂತಾ ಕಾಮೆಂಟ್ ಮಾಡಿದ್ದಾರೆ.

ನೋಡಿರಿ

