ಜೋ ರೂಟ್ ಬೌಲ್ಡ್ ಆಗಿದ್ದ ಬಾಲ್ ನೋ ಬಾಲ್ ಆಗಿತ್ತಾ? – ಎಂಸಿಸಿ ಕೊಟ್ಟ ಕ್ಲಾರಿಫಿಕೇಷನ್‌ಗೆ ಆಂಗ್ಲರು ಥಂಡಾ

ಜೋ ರೂಟ್ ಬೌಲ್ಡ್ ಆಗಿದ್ದ ಬಾಲ್ ನೋ ಬಾಲ್ ಆಗಿತ್ತಾ? – ಎಂಸಿಸಿ ಕೊಟ್ಟ ಕ್ಲಾರಿಫಿಕೇಷನ್‌ಗೆ ಆಂಗ್ಲರು ಥಂಡಾ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿ ಆಕಾಶ್ ದೀಪ್. ಎರಡೂ ಇನ್ನಿಂಗ್ಸ್​ಗಳಿಂದ 10 ವಿಕೆಟ್ ಬೇಟೆಯಾಡಿ ಆಂಗ್ಲರ ಸೊಕ್ಕು ಮುರಿದಿದ್ದರು. ಇದೀಗ ಆಕಾಶ್ ದೀಪ್ ಪ್ರದರ್ಶನ ಬ್ರಿಟಿಷರ ನಿದ್ದೆಗೆಡಿಸಿದೆ. ಹೀನಾಯವಾಗಿ ಸೋತು ಈಗ ಮೋಸ ಮಾಡಿ ಗೆದ್ದಿದ್ದಾರೆ ಅನ್ನೋ ಹಣೆಪಟ್ಟಿ ಕಟ್ಟಲು ಹೊಸ ತಗಾದೆ ತೆಗೆದಿದ್ದಾರೆ. ಆಕಾಶ್ ದೀಪ್ ಬೌಲಿಂಗ್​ನಲ್ಲಿ ಔಟೇ ಇಲ್ಲದಿದ್ರೂ ಔಟ್ ಕೊಟ್ಟಿದ್ದಾರೆ ಅಂತಾ ಕಿರಿಕ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನಿದು ವಿವಾದ? ಎಂಸಿಸಿ ಕೊಟ್ಟ ಕ್ಲಾರಿಟಿ ಏನು? ಇಂಗ್ಲೆಂಡಿಗರ ವಾದ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಬುಮ್ರಾ ರೀ ಎಂಟ್ರಿ.. ಪ್ರಸಿದ್ಧ್ ಕೃಷ್ಣ ಡ್ರಾಪ್ – ಚಾನ್ಸ್ ಕೊಟ್ರೂ ಸದ್ದು ಮಾಡದವರಿಗೆ ಬೆಂಚ್ ಫಿಕ್ಸ್!

ಆಕಾಶ್ ದೀಪ್ ಬೌಲಿಂಗ್​ನಲ್ಲಿ ನಿಜಕ್ಕೂ ಅದೇನೋ ಮ್ಯಾಜಿಕ್ ಇದೆ. ಪ್ರತೀ ಬಾಲ್​ನಲ್ಲೂ ಬ್ರಿಟಿಷರನ್ನ ಕಾಡಿದ ಆಕಾಶ್ 10 ವಿಕೆಟ್​ಗಳನ್ನ ಉರುಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಆದರೆ, ಸ್ಟಾರ್ ಬ್ಯಾಟರ್ ಆಗಿರೋ ಜೋ ರೂಟ್ ಅವ್ರ ಕ್ಲೀನ್ ಬೌಲ್ಡ್ ವಿಕೆಟ್ ಮಾತ್ರ ಸಿಕ್ಕಾಪಟ್ಟೆ ಕಾಂಟ್ರವರ್ಸಿಯಾಗಿದೆ. ಇದು ಔಟೇ ಇರ್ಲಿಲ್ಲ ಅಂತಾ ಕಿರಿಕ್ ತೆಗೆದಿದ್ದಾರೆ ಜೋ ರೂಟ್.

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಜೋ ರೂಟ್ ಅವರ ಔಟ್ ವಿವಾದ ಸೃಷ್ಟಿಸಿದೆ. ಭಾರತದ ವೇಗಿ ಆಕಾಶ್ ದೀಪ್ ನೋ-ಬಾಲ್ ಎಸೆದಿದ್ದಾರೆ. ಹೀಗಾಗಿ ರೂಟ್ ಅವರ ಔಟ್ ಅನ್ನು ರದ್ದುಗೊಳಿಸಬೇಕು ಎಂದು ಕೆಲವು ಅಭಿಮಾನಿಗಳು ಮತ್ತು ತಜ್ಞರು ವರಸೆ ಶುರು ಮಾಡಿದ್ದಾರೆ. ರೂಟ್ ಕ್ಲೀನ್ ಬೌಲ್ಡ್ ಆಗಿದ್ದರೂ, ಬೌಲರ್‌ನ ಬ್ಯಾಕ್-ಫೂಟ್ ‘ರಿಟರ್ನ್ ಕ್ರೀಸ್’ ಅನ್ನು ಸ್ಪರ್ಶಿಸಿದೆ. ಸೋ ಇದು  ನೋ-ಬಾಲ್ ಬಂದಿದೆ ಅನ್ನೋದು ಅವ್ರ ವಾದ. ಹಾಗೇ ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು, ಪೋಸ್ಟ್​ಗಳು ಸದ್ದು ಮಾಡ್ತಿವೆ. ಬಟ್ ಇದಕ್ಕೆಲ್ಲಾ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಕ್ಲಾರಿಫಿಕೇಷನ್ ಕೊಟ್ಟಿದೆ.

ಆಕಾಶ್ ದೀಪ್ ಅವ್ರ ನೋ ಬಾಲ್ ವಿವಾದದ ಬಗ್ಗೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಸ್ಪಷ್ಟನೆ ನೀಡಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಆಕಾಶ್ ದೀಪ್ ಎಸೆದ ಚೆಂಡಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕೆಲ ಅಭಿಮಾನಿಗಳು ಮತ್ತು ವಿಶ್ಲೇಷಕರು ಅದನ್ನ ನೋ ಬಾಲ್ ಎಂದಿದ್ರು. ಆದರೆ, ಆಕಾಶ್ ದೀಪ್ ಕ್ರೀಸ್‌ನಿಂದ ಸ್ವಲ್ಪ ಹೊರಗೆ ಕಾಲಿಟ್ಟಿದ್ದರೂ, ಮೂರನೇ ಅಂಪೈರ್ ಅದನ್ನು ನೋ ಬಾಲ್ ಎಂದು ಪರಿಗಣಿಸಲಿಲ್ಲ. ಇದು ಕಾನೂನು ಪ್ರಕಾರ ಸರಿಯಾದ ನಿರ್ಧಾರವೇ ಆಗಿದೆ ಎಂದು MCC ಸ್ಪಷ್ಟಪಡಿಸಲು ಸಂತೋಷಪಡುತ್ತದೆ  ಎಂದು MCC ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಇದು ಫೇರ್ ಡೆಲಿವರಿ ಅನ್ನೋದು ದೃಢಪಟ್ಟಿದೆ. ಮೋಸ ಮಾಡಿದ್ದಾರೆ. ಜೋರೂಟ್ ಔಟೇ ಇರಲಿಲ್ಲ ಎಂದವರ ಬಾಯಿಗೆ ಬೀಗ ಬಿದ್ದಿದೆ.

ಒಟ್ನಲ್ಲಿ ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೇ ಪಂದ್ಯದಲ್ಲಿ ಸೋತ್ರೂ ಇಂಗ್ಲೆಂಡ್​ನವ್ರು ಸುಲಭಕ್ಕೆ ಅದನ್ನ ಅರಗಿಸಿಕೊಳ್ಳೋಕೆ ರೆಡಿ ಇಲ್ಲ. ಏನೋ ಒಂದು ಕ್ಯಾತೆ ತೆಗೆದು ಭಾರತವನ್ನ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಸೋದು ಅವ್ರ ಉದ್ದೇಶ. ಈಗ ಎಂಸಿಸಿಯೇ ಕ್ಲಾರಿಫಿಕೇಷನ್ ಕೊಟ್ಟಿರೋದ್ರಿಂದ ಅವ್ರ ಆಟ ನಡೀಲಿಲ್ಲ ಅಷ್ಟೇ. ಅದನ್ನೆಲ್ಲಾ ಸೈಡ್​ಗಿಟ್ಟು ನೋಡಿದ್ರೂ ಅವ್ರು ಎಷ್ಟೇ ತಿಪ್ಪರಲಾಗ ಹೊಡೆದ್ರೂ ಈ ಪಂದ್ಯವನ್ನ ಗೆಲ್ಲೋಕೆ ಆಗ್ತಿರಲಿಲ್ಲ. ಆ ಬಾಲ್​ ನೋ ಬಾಲ್ ಆಗಿ ರೂಟ್ ಬಚಾವಾಗಿದ್ರೂ ಮತ್ತೆ ವಿಕೆಟ್ ಬೀಳಲೇಬೇಕಿತ್ತು. ಯಾಕಂದ್ರೆ ಭಾರತ ಏನು ಸಣ್ಣ ಮಾರ್ಜಿನ್​ನಲ್ಲಿ ಗೆದ್ದಿಲ್ಲ.

Sulekha