ಬುಮ್ರಾ ರೀ ಎಂಟ್ರಿ.. ಪ್ರಸಿದ್ಧ್ ಕೃಷ್ಣ ಡ್ರಾಪ್ – ಚಾನ್ಸ್ ಕೊಟ್ರೂ ಸದ್ದು ಮಾಡದವರಿಗೆ ಬೆಂಚ್ ಫಿಕ್ಸ್!

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಗೆದ್ದು ಎರಡನೇ ಪಂದ್ಯದಲ್ಲೂ ನಾವೇ ವಿನ್ನರ್ಸ್ ಅಂತಾ ಇಂಗ್ಲೆಂಡ್ ಟೀಂ ಬಡಾಯಿ ಕೊಚ್ಚಿಕೊಳ್ತಿತ್ತು. ಬಟ್ ಆಕಾಶ್ ದೀಪ್ ಮತ್ತು ಸಿರಾಜ್ ಕೊಟ್ಟ ಬೌಲಿಂಗ್ ಡೋಸ್ಗೆ ಈಗ ಗಾಯಗೊಂಡ ಸಿಂಹದಂತಾಗಿದ್ದಾರೆ. ಅದೂ ಕೂಡ ಎಡ್ಜ್ ಬಾಸ್ಟನ್ನಲ್ಲಿ ಮೊದಲ ಬಾರಿಗೆ ಸೋತಿರೋದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಹೀಗಾಗಿ ಶತಾಯ ಗತಾಯ ಲೀಡ್ಸ್ನಲ್ಲಿ ಟಫ್ ಫೈಟ್ ಕೊಡೋಕೆ ಕಾಯ್ತಿದ್ದಾರೆ. ಹಾಗೇ ಇಬ್ಬರು ಮಾರಕ ವೇಗಿಗಳನ್ನೂ ಅಖಾಡಕ್ಕಿಸೋ ಪ್ಲ್ಯಾನ್ನಲ್ಲಿದ್ದಾರೆ. ಮತ್ತೊಂದೆಡೆ ಎಡ್ಜ್ಬಾಸ್ಟನ್ನಲ್ಲಿ ನೀಡಿದ ಬ್ಲಾಕ್ ಬಸ್ಟರ್ ಪರ್ಫಾಮೆನ್ಸ್ನೇ ಕಂಟಿನ್ಯೂ ಮಾಡೋಕೆ ಶುಭ್ಮನ್ ಗಿಲ್ ಬಳಗ ಪಕ್ಕಾ ಪ್ಲ್ಯಾನ್ ಮಾಡಿದೆ. ಅಲ್ದೇ ಪ್ಲೇಯಿಂಗ್ 11ನಲ್ಲೂ ಒಂದಷ್ಟು ಬದಲಾವಣೆಗಳಾಗಲಿವೆ.
ಇದನ್ನೂ ಓದಿ : RCB ವೇಗಿ ಯಶ್ ದಯಾಳ್ ವಿರುದ್ಧ FIR – IPL ಹೀರೋ ವೃತ್ತಿಜೀವನಕ್ಕೆ ಕಂಟಕ?
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದ ಪ್ರಸಿದ್ಧ್ಗೆ ಇಂಗ್ಲೆಂಡ್ ಪ್ರವಾಸಕ್ಕೆ ಟಿಕೆಟ್ ಸಿಕ್ಕಿತ್ತು. ಇಲ್ಲೂ ಕೂಡ ಅಂಥದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದ್ರು. ಆದ್ರೆ ಆಡಿರುವಂಥ 2 ಪಂದ್ಯಗಳಲ್ಲಿ ಯಾವುದೇ ಇಂಪ್ಯಾಪ್ಟ್ ಮಾಡದ ಪ್ರಸಿದ್ಧ್ ಕೃಷ್ಣ 3ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಮೊದಲ ಟೆಸ್ಟ್ನಲ್ಲಿ 5 ವಿಕೆಟ್ ಪಡೆದ್ರೂ ರನ್ಸ್ ನೀಡುವಲ್ಲಿ ದುಬಾರಿಯಾಗಿದ್ದರು. ಬಟ್ 2ನೇ ಪಂದ್ಯದಲ್ಲಿ ಕೃಷ್ಣಗೆ ಸಿಕ್ಕಿದ್ದು ಒಂದೇ ವಿಕೆಟ್. ಅದೂ ಅಲ್ದೇ ಲಾರ್ಡ್ಸ್ನಲ್ಲಿ ನಡೆಯಲಿರೋ ಮೂರನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವುದು ಬಹುತೇಕ ಕನ್ಫರ್ಮ್ ಇದೆ. ಸೋ ಬುಮ್ರಾ ಇನ್ ಆದ್ರೆ ಪ್ರಸಿದ್ಧ್ ಹೊರಬೀಳೋದು ಗ್ಯಾರಂಟಿ. 2ನೇ ಟೆಸ್ಟ್ನ ಗೆಲುವಿನ ರೂವಾರಿಗಳಾದ ಆಕಾಶ್ದೀಪ್ ಮತ್ತು ಮೊಹಮ್ಮದ್ ಸಿರಾಜ್ ಮೂರನೇ ಪಂದ್ಯಕ್ಕೆ ಸೆಲೆಕ್ಟ್ ಆಗ್ತಾರೆ. ಸೋ ಬುಮ್ರಾಗೆ ಪ್ರಸಿದ್ಧ್ ಸ್ಥಾನ ಬಿಟ್ಟುಕೊಡಬೇಕಾಗುತ್ತೆ.
ದುಬಾರಿ ಕೃಷ್ಣ ಡ್ರಾಪ್?
2025 ರ ಐಪಿಎಲ್ ನಲ್ಲಿ ಪರ್ಪಲ್ ಗೆದ್ದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಇಂಗ್ಲೆಂಡ್ ಪ್ರವಾಸದಲ್ಲಿ ಮೂರನೆ ಪಂದ್ಯದಿಂದ ಡ್ರಾಪ್ ಮಾಡೋ ಚಾನ್ಸಸ್
ಆಕಾಶ್ ದೀಪ್ 187 ರನ್ ನೀಡಿ 10 ವಿಕೆಟ್, ಸಿರಾಜ್ ಒಟ್ಟು 7 ವಿಕೆಟ್
ಇಂಗ್ಲೆಂಡ್ ಆಟಗಾರರು ಪ್ರಸಿದ್ಧ್ ಕೃಷ್ಣ ಅವರ ಮೇಲೆ ಟಿ20 ಶೈಲಿಯಲ್ಲಿ ಬ್ಯಾಟಿಂಗ್
ಜೇಮಿ ಸ್ಮಿತ್ 4, 6, 4, 4, ವೈಡ್, 4 ರನ್ ಗಳೊಂದಿಗೆ ಒಂದೇ ಓವರ್ ನಲ್ಲಿ 23 ರನ್
ಕೃಷ್ಣ ಬೌಲಿಂಗ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ ಕಾಮೆಂಟೇಟರ್ಸ್ ಕೂಡ ಅಸಮಾಧಾನ
ಪ್ರಸಿದ್ಧ್ ಕೃಷ್ಣ 42 ಓವರ್ಗಳಲ್ಲಿ 6 ಕ್ಕಿಂತ ಹೆಚ್ಚು ಎಕಾನಮಿಯಲ್ಲಿ 220 ರನ್
ಮೊದಲ ಇನ್ನಿಂಗ್ಸ್ ನಲ್ಲಿ 13 ಓವರ್ಗಳಲ್ಲಿ 72 ರನ್ ಗಳನ್ನು ಬಿಟ್ಟುಕೊಟ್ಟರು
ಇಂಗ್ಲೆಂಡ್ 84 ರನ್ ಗಳಿಗೆ 5 ವಿಕೆಟ್, ಬ್ರೂಕ್ ಮತ್ತು ಸ್ಮಿತ್ 303 ರನ್ ಜೊತೆಯಾಟ
ಕೃಷ್ಣ ಅವರ ಕಳಪೆ ಬೌಲಿಂಗ್ನ ಸಂಪೂರ್ಣ ಲಾಭವನ್ನು ಇಂಗ್ಲೆಂಡ್ ಬ್ಯಾಟ್ಸ್ ಮನ್ಸ್
ಪ್ರಸಿದ್ಧ್ ಕೃಷ್ಣ 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ
500 ಎಸೆತಗಳನ್ನು ಬೌಲ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಪ್ರಸಿದ್ಧ್
ಪ್ರತಿ ಓವರ್ ಗೆ 5 ರನ್ ಗಳಿಗಿಂತ ಹೆಚ್ಚಿದ್ದು ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ
ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಎರಡನೇ ಪಂದ್ಯದಲ್ಲಿ ಒಂದೇ ಯಾವುದೇ ಪ್ರಭಾವ ಬೀರೋಕೆ ಆಗ್ಲಿಲ್ಲ. ವಿಕೆಟ್ ಒಂದೇ ತೆಗೆದ್ರು ಅನ್ನೋದಕ್ಕಿಂತ ಹೆಚ್ಚು ರನ್ಸ್ ಬಿಟ್ಟುಕೊಟ್ಟಿದ್ದೇ ಅವ್ರಿಗೆ ಮೈನಸ್ ಆಗಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಆಡೋದು ಡೌಟಿದೆ. ಕೃಷ್ಣ ಅಷ್ಟೇ ಅಲ್ದೇ ಮತ್ತೆ ಕೆಲವರಿಗೂ ಡ್ರಾಪ್ ಭೀತಿ ಎದುರಾಗಿದೆ.
ಬೆಂಚ್ ಕಾದವರಿಗೆ ಚಾನ್ಸ್?
ರನ್ ಸುನಾಮಿ ಎಬ್ಬಿಸಿದ್ದ ಕರುಣ್ 8 ವರ್ಷಗಳ ಬಳಿಕ ಚಾನ್ಸ್
4 ಇನ್ನಿಂಗ್ಸ್ಗಳಲ್ಲ್ಲೂ ಯಾವುದೇ ಬಿಗ್ ಸ್ಕೋರ್ ಕಲೆ ಹಾಕೋಕೆ ಸಾಧ್ಯವಾಗಿಲ್ಲ
ಕ್ರಮವಾಗಿ 0, 20, 31, 26 ರನ್, 4 ಇನ್ನಿಂಗ್ಸ್ ಗಳಿಂದ ಜಸ್ಟ್ 77 ರನ್
ರನ್ ಗಳಿಕೆಗೆ ಪರದಾಡ್ತಿರೋ ಕರುಣ್ನ ಮುಂದಿನ ಪಂದ್ಯದಿಂದ ಡ್ರಾಪ್?
ಲಾರ್ಡ್ಸ್ ಟೆಸ್ಟ್ ನಿಂದ ಡ್ರಾಪ್ ಆದ್ರೆ ಕರುಣ್ ಕರಿಯರ್ ಕೂಡ ಅಂತ್ಯವಾಗುತ್ತಾ?
3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್, ಕರುಣ್ ನಾಯರ್ ಫೇಲ್ಯೂರ್
ಟೆಸ್ಟ್ ಸ್ಪೆಷಲಿಸ್ಟ್ ಅಭಿಮನ್ಯು ವಾರ್ಮ್ ಅಪ್ ಗೇಮ್ನಲ್ಲಿ 68, 80 ರನ್
ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 48ರ ಬ್ಯಾಟಿಂಗ್ ಅವರೇಜ್ ನಲ್ಲಿ 7841 ರನ್
ಆಲ್ರೌಂಡರ್ ನಿತೀಶ್ ರೆಡ್ಡಿ, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಫೇಲ್
ಇಂಗ್ಲೆಂಡ್ ಲಯನ್ಸ್ ಎದುರು ಉತ್ತಮ ಆಟವಾಡಿದ ಜುರೇಲ್ 3 ಹಾಫ್ ಸೆಂಚುರಿ
ಸಾಲಿಡ್ ಟಚ್ ನಲ್ಲಿರೋ ಜುರೇಲ್ಗೆ ಚಾನ್ಸ್ ನೀಡಿದ್ರೆ ಬ್ಯಾಟಿಂಗ್ ಡೆಪ್ತ್ ಹೆಚ್ಚು
ಜುರೇಲ್ ಬದಲಾಗಿ ವೇಗಿ ಆರ್ಷ್ದೀಪ್ ಸಿಂಗ್ನ ಕಣಕ್ಕಿಳಿಸೋ ಲೆಕ್ಕಾಚಾರ
ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕಳೆದ 2 ಪಂದ್ಯಗಳಿಂದ ಬೆಂಚ್
2ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ನಲ್ಲಿ ಮಿಂಚಿದ್ರು
ಕುಲ್ದೀಪ್ ತಂಡಕ್ಕೆ ಬರಬೇಕು ಅಂದ್ರೆ ಜಡೇಜಾ ಅಥವಾ ಸುಂದರ್ ಒಬ್ಬರ ಡ್ರಾಪ್
ಸದ್ಯ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಭಾರತ 2 ಪಂದ್ಯಗಳಲ್ಲಿ 1 ಜಯ, 1 ಸೋಲಿನೊಂದಿಗೆ ಶೇ.50 ಗೆಲುವಿನ ಪ್ರತಿಶತ ಹೊಂದಿದೆ. ಆಡಿರುವ 2 ಪಂದ್ಯಗಳಲ್ಲೂ ಗೆದ್ದಿರುವ ಆಸ್ಟ್ರೇಲಿಯಾ ಅಗ್ರಸ್ಥಾನ ಕಾಯ್ದುಕೊಂಡಿದ್ದು, 2 ಪಂದ್ಯಗಳಲ್ಲಿ 1 ಗೆಲುವು, 1 ಡ್ರಾಗೊಂದಿಗೆ ಶೇ.66.67 ಗೆಲುವಿನ ಪ್ರತಿಶತ ಹೊಂದಿರುವ ಶ್ರೀಲಂಕಾ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 4ನೇ, ಬಾಂಗ್ಲಾದೇಶ 5ನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಲಾರ್ಡ್ಸ್ನಲ್ಲಿ ಮತ್ತೊಂದು ಜಯಭೇರಿಯ ನಿರೀಕ್ಷೆಯಲ್ಲಿರೋ ಟೀಮ್ ಇಂಡಿಯಾ ಮೇಜರ್ ಸರ್ಜರಿ ಮಾಡೋದಂತೂ ಪಕ್ಕಾ.

ನೋಡಿರಿ

