2ನೇ ಟೆಸ್ಟ್ ಗೆದ್ದ ಗಿಲ್ ಗೆ ಗಂಡಾಂತರ.. ADIDAS ಒಪ್ಪಂದ.. ರಾರಾಜಿಸಿದ NIKE! – BCCIಗೆ ₹250 ಕೋಟಿ ನಷ್ಟವಾಗುತ್ತಾ?

2ನೇ ಟೆಸ್ಟ್ ಗೆದ್ದ ಗಿಲ್ ಗೆ ಗಂಡಾಂತರ.. ADIDAS ಒಪ್ಪಂದ.. ರಾರಾಜಿಸಿದ NIKE! – BCCIಗೆ ₹250 ಕೋಟಿ ನಷ್ಟವಾಗುತ್ತಾ?

ಟೀಂ ಇಂಡಿಯಾದ ಹೊಸ ಪರ್ವಕ್ಕೆ ಮುನ್ನುಡಿ ಬರೆದಿರೋ ನಾಯಕ ಶುಭ್ ಮನ್ ಗಿಲ್ ಮೊದಲ ಟೆಸ್ಟ್ ಸರಣಿಯಲ್ಲೇ ದಾಖಲೆಗಳ ಸರಮಾಲೆ ಸೃಷ್ಟಿಸಿದ್ದಾರೆ. 58 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಮೊದಲ ಬಾರಿಗೆ ತಂಡವನ್ನ ಗೆಲ್ಲಿಸಿದ್ದಾರೆ.

ಇದನ್ನೂ ಓದಿ: RCB ವೇಗಿ ಯಶ್ ದಯಾಳ್ ವಿರುದ್ಧ FIR – IPL ಹೀರೋ ವೃತ್ತಿಜೀವನಕ್ಕೆ ಕಂಟಕ?

ಇಡೀ ಜಗತ್ತೇ ಈಗ ಶುಭ್​ಮನ್ ಗಿಲ್ ಬಗ್ಗೆ ಮಾತ್ನಾಡ್ತಿದೆ. ಒಬ್ಬ ಕ್ಯಾಪ್ಟನ್ ಆಗಿ ಒಬ್ಬ ಬ್ಯಾಟ್ಸ್​ಮನ್ ಆಗಿ ಇಡೀ ತಂಡಕ್ಕೆ ಮಾದರಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಗೆಲ್ಲೋ ಮೂಲಕ ನಾಯಕನಾಗಿ ಮೊದಲ ಗೆಲುವು ದಾಖಲಿಸಿದ್ದಾರೆ. ಬಟ್ ಎಡ್ಜ್ ಬಾಸ್ಟನ್ ಪಂದ್ಯದ ವೇಳೆ ನಡೆದ ಅದೊಂದು ಎಡವಟ್ಟಿನಿಂದ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಕಾನೂನು ಸಂಕಷ್ಟಕ್ಕೆ ಗುರಿಯಾಗೋದ್ರ ಜೊತೆಗೆ ಬಿಸಿಸಿಐಗೂ ಕೋಟಿ ಕೋಟಿ ನಷ್ಟವಾಗೋ ಭೀತಿ ಎದುರಾಗಿದೆ.

ADIDAS ಜೊತೆ ಒಪ್ಪಂದ.. NIKE ಟೀ ಟೈಟ್ಸ್ ಧರಿಸಿದ್ದ ಗಿಲ್!

ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಸ್ಕೋರ್ 600+ ಆಗ್ತಿದ್ದಂತೆ ನಾಯಕ ಶುಭ್ ಮನ್ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಆಟಗಾರರನ್ನು ವಾಪಸ್ ಕರೆಸಿಕೊಂಡಿದ್ದರು. ಹೀಗೆ ಡಿಕ್ಲೇರ್ ಘೋಷಣೆ ಮಾಡುವಾಗ ಶುಭ್ ಮನ್ ಗಿಲ್ ಧರಿಸಿದ್ದ ಟೀ ಶರ್ಟ್ ವಿವಾದಕ್ಕೆ ಕಾರಣವಾಗಿದೆ. ಶುಭಮನ್ ಗಿಲ್ ನೈಕ್ ಟೈಟ್ಸ್ ಧರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಗಿಲ್ ನೈಕ್ ಟೀಶರ್ಟ್ ಧರಿಸಿರುವುದೇ ಈಗ ವಿವಾದದ ಕೇಂದ್ರ ಬಿಂದು. ಯಾಕಂದ್ರೆ ಖ್ಯಾತ Sports equipment manufacturer ಆದ ADIDAS ಜೊತೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿದೆ.  ಅಧಿಕೃತ ಪಂದ್ಯದ ವೇಳೆ ತಂಡದ ನಾಯಕ ಗಿಲ್ ಬೇರೊಂದು ಸಂಸ್ಥೆಯ ಟಿಶರ್ಟ್ ಧರಿಸಿರುವುದು ಒಪ್ಪಂದದ ಉಲ್ಲಂಘನೆಯಾಗುತ್ತದೆ. ಗಿಲ್ ಡ್ರೆಸಿಂಗ್ ರೂಮಿಂದ ಸೀದಾ ಬಂದು ಡಿಕ್ಲೇರ್ ಘೋಷಿಸ್ತಾರೆ. ಅಲ್ಲಿ ಟೀಂ ಇಂಡಿಯಾದ ಜೆರ್ಸಿಯಲ್ಲೂ ಕೂಡ ಇರೋದಿಲ್ಲ. ನೈಕ್ ಟಿಶರ್ಟ್ ನಲ್ಲಿಯೇ ಆತುರದಿಂದ ಹೊರಗೆ ಬಂದು ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.  ಇದೇ ಈಗ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಬಿಸಿಸಿಐನಿಂದ ನೋಟಿಸ್ ಪಡೆಯೋ ಸಾಧ್ಯತೆ ಇದೆ.

ಒಪ್ಪಂದ ರದ್ದುಗೊಳಿಸುತ್ತಾ ಅಡಿಡಾಸ್ ಸಂಸ್ಥೆ!?

2023ರಲ್ಲಿ ಅಡಿದಾಸ್ ಅಂಸ್ಥೆ ಬಿಸಿಸಿಐ ಜೊತೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದ್ರೆ 2028 ರವರೆಗೆ ಜಾರಿಯಲ್ಲಿರುವಂತೆ 250 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದ್ರಂತೆ ಮೆನ್ಸ್, ವುಮೆನ್ಸ್, ಅಂಡರ್ 19 ಹೀಗೆ ಟೀಂ ಇಂಡಿಯಾದ ಎಲ್ಲಾ ವಿಭಾಗದ ಆಟಗಾರರಿಗೂ ಅಡಿಡಾಸ್​ನಿಂದಲೇ ಕಿಟ್, ಜೆರ್ಸಿ ಸೇರಿದಂತೆ ಎಲ್ಲಾ ಪರಿಕರಗಳು ಸಪ್ಲೈ ಆಗುತ್ತೆ. ಹೀಗಾಗಿ ಪಂದ್ಯದ ವೇಳೆ ಕೇವಲ ಅಡಿದಾಸ್​ಗೆ ಸಂಬಂಧಪಟ್ಟ ವಸ್ತುಗಳನ್ನಷ್ಟೇ ಬಳಸಬೇಕು. ಆದ್ರೀಗ ಗಿಲ್ ರೂಲ್ಸ್ ಬ್ರೇಕ್ ಮಾಡೋದ್ರಿಂದ ಭಾರತೀಯ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವ ಎಲ್ಲಾ ಹಕ್ಕುಗಳನ್ನು ಹೊಂದಿದೆ. ಹಾಗೇ ಪರಿಹಾರವನ್ನೂ ಕೇಳಬಹುದು. ಆದ್ರೆ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರೋ ಬಿಸಿಸಿಐ ಜೊತೆ ಅಡಿಡಾಸ್ ಸಂಸ್ಥೆ ಒಪ್ಪಂದವನ್ನ ಮುರಿದುಕೊಳ್ಳೋದು ಕಷ್ಟ ಸಾಧ್ಯ. ಆಟಗಾರು ಮತ್ತು ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಬಹುದು ಅಷ್ಟೇ. ಅಲ್ದೇ ಶುಭ್​ಮನ್ ಗಿಲ್ NIKE ನ ಬ್ರಾಂಡ್ ಅಂಬಾಸಿಡರ್ ಆಗಿರೋದ್ರಿಂದ ಅವ್ರ ಕಿಟ್ ಧರಿಸುವುದರಲ್ಲಿ ಯಾವುದೇ ವಿವಾದ ಇಲ್ಲ ಅಂತಲೂ ಕೆಲವರ ವಾದ ಇದೆ.

ಒಟ್ನಲ್ಲಿ ಪಂದ್ಯ ಮುಗಿದ್ರೂ ಒಂದಿಲ್ಲೊಂದು ವಿಚಾರಗಳಿಂದ ನಾಯಕ ಶುಭ್​ಮನ್ ಗಿಲ್ ಸುದ್ದಿಯಾಗ್ತಿದ್ದಾರೆ. ಇದೀಗ ನೈಕ್ ಸಂಸ್ಥೆಯ ಟೀ ಶರ್ಟ್ ಧರಿಸಿದ್ದು ಸುದ್ದಿ ಮಾಡ್ತಿದೆ. ಇದ್ರಿಂದ ಅಂತಾ ದೊಡ್ಡ ಮಟ್ಟದ ಪರಿಣಾಮ ಏನೂ ಆಗೋದಿಲ್ಲ ಅನ್ನೋದೇ ಸತ್ಯ.

Shwetha M