ಅಮ್ಮನಿಗೆ ಹೊಸ ಕಾರು ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್ – ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ!

ಕಳೆದ ಕೆಲ ವರ್ಷಗಳಿಂದ ಬರೀ ವಿವಾದಗಳಿಂದ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ಈಗ ಪಾಸಿಟಿವ್ ವಿಚಾರಗಳಿಂದ ಸುದ್ದಿಯಾಗ್ತಿದ್ದಾರೆ. ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಡ್ರೋನ್ ಪ್ರತಾಪ್ ರಿಯಾಲಿಟಿ ಶೋಗಳ ಮೂಲಕ ಮಿಂಚುತ್ತಿದ್ದಾರೆ. ಇದೀಗ ಡ್ರೋನ್ ತನ್ನ ತಾಯಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅಮ್ಮನಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ..
ಇದನ್ನೂ ಓದಿ: ಸಿಎಂ ಆರೋಗ್ಯದಲ್ಲಿ ಏರುಪೇರು – ಇಂದು ಇಡೀ ದಿನ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಸಿದ್ಧರಾಮಯ್ಯ
ಹೌದು, ಬಿಗ್ ಬಾಸ್ ಗೆ ಹೋಗಿ ಬಂದ್ಮೇಲೆ ಡ್ರೋನ್ ಪ್ರತಾಪ್ ಕಂಪ್ಲೀಟ್ ಬದಲಾಗಿದ್ದಾರೆ. ತಂದೆ ತಾಯಿಗೆ ಒಳ್ಳೆ ಮಗನಾಗಿ ಇನ್ಮುಂದೆ ಇರ್ತೇನೆ ಅಂತಾ ದೊಡ್ಮನೆಯಲ್ಲಿ ಮಾತು ಕೊಟ್ಟಿದ್ರು.. ಇದೀಗ ಕೊಟ್ಟ ಮಾತನ್ನ ಡ್ರೋನ್ ಉಳಿಸಿಕೊಂಡಿದ್ದಾರೆ. ಇದೀಗ ತನ್ನ ತಾಯಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಊರಿನಿಂದ ತಾಯಿಯನ್ನು ಕರೆಸಿಕೊಂಡು ಸರ್ಪ್ರೈಸ್ ನೀಡಿದ್ದಾರೆ ಪ್ರತಾಪ್. ಹೊಸ ಕಾರು ನೋಡಿ ಭಾವುಕರಾದ ತಾಯಿ, ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.
ತಮ್ಮ ಅಪ್ಪ – ಅಮ್ಮ ಊರಲ್ಲಿ ಓಡಾಡಲು ಅನುಕೂಲವಾಗಲಿ ಎಂದು ಹೊಸ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಊರಿನಿಂದ ಬಂದ ತಾಯಿಯನ್ನು ಕಾರು ಶೋರೂಮ್ವರೆಗೂ ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಹೋಗಿ, ಸರ್ಪ್ರೈಸ್ ನೀಡಿದ್ದಾರೆ ಡ್ರೋನ್ ಪ್ರತಾಪ್. ತಮ್ಮ ತಂದೆ ತಾಯಿಗೆ ಉಡುಗೊರೆಯಾಗಿ ಹ್ಯುಂಡೈ ಕ್ರೆಟಾ ಕಾರನ್ನು ನೀಡಿದ್ದಾರೆ. ಇದರ ಬೆಲೆ 20 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಕಾರಿನ ಕೀ ಪಡೆದ ಪ್ರತಾಪ್ ತಾಯಿ ಭಾವುಕರಾಗಿದ್ದರು. ಮಗನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಒಂದು ಕಾಲದಲ್ಲಿ ಮನೆಯಿಂದ ದೂರವಿದ್ದ ಪ್ರತಾಪ್, ಬಿಗ್ ಬಾಸ್ ಶೋಗೆ ಬಂದಮೇಲೆ ಫ್ಯಾಮಿಲಿ ಜೊತೆಗೆ ಒಂದಾಗಿದ್ದಾರೆ. ಬಹಳ ವರ್ಷಗಳ ನಂತರ ಮಗನನ್ನು ನೋಡಲು ತಂದೆ ಮರಿಮಾದಯ್ಯ ಆಗಮಿಸಿದ್ದರು. ಆಗ ತಂದೆಯನ್ನು ನೋಡಿ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದರು.

ನೋಡಿರಿ

