ಜಿಯೋಬ್ಲ್ಯಾಕ್ರಾಕ್ ಮ್ಯುಚುವಲ್ ಫಂಡ್ನ NFOಗೆ ಭರ್ಜರಿ ರೆಸ್ಪಾನ್ಸ್ – 3 ದಿನಕ್ಕೆ 17,800 ಕೋಟಿ ರೂ ಹೂಡಿಕೆ ಸಂಗ್ರಹ

ಜಿಯೋ ಬ್ಲ್ಯಾಕ್ರಾಕ್ ಮ್ಯುಚುವಲ್ ಫಂಡ್ನ ನ್ಯೂ ಫಂಡ್ ಆಫರ್ ಅಥವಾ ಎನ್ಎಫ್ಒಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಹೊಸ ಮ್ಯೂಚುವಲ್ ಫಂಡ್ನ ಚೊಚ್ಚಲ NFO ಮೂಲಕ ಒಟ್ಟಾರೆ 17,800 ಕೋಟಿ ರೂ ಹೂಡಿಕೆ ಬಂದಿದೆ. ಓವರ್ನೈಟ್ ಫಂಡ್, ಲಿಕ್ವಿಡ್ ಫಂಡ್ ಮತ್ತು ಮನಿ ಮಾರ್ಕೆಟ್ ಫಂಡ್ ಎನ್ನುವ ಮೂರು ಫಂಡ್ ಸ್ಕೀಮ್ಗಳಲ್ಲಿ ಈ ಬಂಡವಾಳ ಹರಿದು ಬಂದಿದೆ. ಜೂನ್ 30ರಂದು ಆರಂಭವಾದ ಮೂರು ದಿನಗಳ ಜಿಯೋಬ್ಲ್ಯಾಕ್ರಾಕ್ ಎನ್ಎಫ್ಒ ಜುಲೈ 2ಕ್ಕೆ ಮುಗಿದಿತ್ತು. 90ಕ್ಕೂ ಅಧಿಕ ಸಾಂಸ್ಥಿಕ ಹೂಡಿಕೆದಾರರು ಈ ಮೂರು ಸ್ಕೀಮ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೀಟೇಲ್ ಹೂಡಿಕೆದಾರರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ವರದಿ ಪ್ರಕಾರ 67,000 ವ್ಯಕ್ತಿಗಳು ಈ ಮೂರು ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಎನ್ಎಫ್ಒ ಎಂದರೇ ಏನು?
ಎನ್ಎಫ್ಒ ಎಂದರೆ ನ್ಯೂ ಫಂಡ್ ಆಫರ್. ಒಂದು ಮ್ಯೂಚುವಲ್ ಫಂಡ್ ಎಎಂಸಿ ಸಂಸ್ಥೆಯು ಹೊಸ ಸ್ಕೀಮ್ ಆರಂಭಿಸಿದಾಗ ಎನ್ಎಫ್ಒ ಆಫರ್ ಮಾಡುತ್ತದೆ. ಇದು ಮೊದಲ ಬಾರಿಗೆ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಇರುವ ಯೋಜನೆ. ನಿರ್ದಿಷ್ಟ ಆರಂಭ ಬೆಲೆಗೆ ಸ್ಕೀಮ್ನ ಯುನಿಟ್ಗಳನ್ನು ಸಾರ್ವಜನಿಕರಿಗೆ ಮಾರಲಾಗುತ್ತೆ. ಸಾಮಾನ್ಯವಾಗಿ ಎನ್ಎಫ್ಒದಲ್ಲಿ ಒಂದು ಯುನಿಟ್ಗೆ 10 ರೂ ಬೆಲೆ ಇರುತ್ತದೆ. ಜಿಯೋಬ್ಲ್ಯಾಕ್ರಾಕ್ ಫಂಡ್ಗಳ ಒಂದು ಯುನಿಟ್ ಬೆಲೆ 1,000 ರೂ ನಿಗದಿಯಾಗಿದೆ.

ನೋಡಿರಿ

