ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ @44 – ಬಾಲ್ಯ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಷನ್

ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ @44 – ಬಾಲ್ಯ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಷನ್

ಟೀಂ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಧೋನಿ ತಮ್ಮ ಹುಟ್ಟುಹಬ್ಬವನ್ನ ಬಾಲ್ಯ ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕ್ಯಾಪ್ಟನ್ ಕೂಲ್ ಇನ್ನು ಮುಂದೆ ಧೋನಿಗೆ ಸ್ವಂತ – ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್‌ಗಾಗಿ ಧೋನಿ ಅರ್ಜಿ

ವಿಶ್ವಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಧೋನಿ ಜುಲೈ 7, 1981ರಲ್ಲಿ ಜನಿಸಿದ್ದರು.  2004 ರಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಭಾರತ ತಂಡದ ನಾಯಕರಾಗಿ ಟ್ವೆಂಟಿ ಕ್ರಿಕೆಟ್, ಏಕದಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಧೋನಿಯ ಮೊದಲ ಗುರು ಸಚಿನ್ ತೆಂಡುಲ್ಕರ್. ಸಚಿನ್ ತೆಂಡುಲ್ಕರ್ ಆಟವನ್ನು ನೋಡುತ್ತಾ ಕ್ರಿಕೆಟ್ ಆಡಲು ಶುರಮಾಡಿದೆ ಎಂದು ಎಂ ಎಸ್ ಧೋನಿ ಹಲವಾರು ಬಾರಿ ಹೇಳಿದ್ದಾರೆ. ಧೋನಿ ಸಣ್ಣವರಿದ್ದಾಗ ಜಾತ್ರೆಯಲ್ಲಿ ಸಚಿನ್ ಫೋಟೋ ಖರೀದಿಸಿ ಮನೆಯ ಗೋಡೆಯ ಮೇಲೆ ಅಂಟಿಸಿಕೊಂಡಿದ್ದರಂತೆ. ವಿದೇಶದಲ್ಲಿ ಪಂದ್ಯಗಳು ನಡೆಯುತ್ತಿದ್ದಾಗ, ಸಚಿನ್ ಆಟ ನೋಡಲು ಮುಂಜಾನೆಯೇ ಎದ್ದು ಟಿವಿ ಮುಂದೆ ಧೋನಿ ಹಾಜರಿರುತ್ತಿದ್ದರು. ಈ ವಿಚಾರವನ್ನ ಸ್ವತಃ ಧೋನಿ ಸಂದರ್ಶನವೊಂದರಲ್ಲಿ ಹೇಳಿದ್ದರು. 2007ನೇ ಇಸವಿಯಲ್ಲಿ ಎಂ ಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡುವಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶಿಫಾರಸು ಮಾಡಿದ್ದು ವಿಶೇಷವಾಗಿತ್ತು.

ರೈಲ್ವೆ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಬೆಳೆದ ಕತೆಯೇ ಒಂದು ರೋಚಕ ಅಧ್ಯಾಯ. ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆ ಪಡೆದ ಟೀಂ ಇಂಡಿಯಾದ ಎರಡನೇ ಕ್ರಿಕೆಟಿಗನಾಗಿದ್ದಾರೆ ಧೋನಿ. 2011 ನವೆಂಬರ್ 01 ರಂದು ಧೋನಿಗೆ ಈ ಪದವಿ ನೀಡಿ ಗೌರವಿಸಲಾಗಿತ್ತು.

ಇನ್ನು ಮಹಿ ಹೇರ್‌ಸ್ಟೈಲ್‌ನಿಂದಲೂ ಅಭಿಮಾನಿಗಳ ಮನಗೆದ್ದ ಕ್ರಿಕೆಟರ್. ಲಾಂಗ್ ಹೇರ್ ಸ್ಟೈಲ್ ಮಾಡಲು ಕಾರಣ ಸ್ನೇಹಿತ ಹಾಗೂ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರೇ ಸ್ಪೂರ್ತಿಯಂತೆ. ಹೀಗಾಗಿ ಧೋನಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಉದ್ದವಾದ ಕೂದಲನ್ನು ಬೆಳೆಸಿದ್ದರು.

ಎಂಎಸ್ ಧೋನಿ ಸೋಮವಾರ ರಾಂಚಿಯಲ್ಲಿ ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬಾಲ್ಯದ ಆಪ್ತ ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಧೋನಿ ಕೇಕ್ ಕಟ್ ಮಾಡುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೋಳಿಲ್ಲದ ಟಿ-ಶರ್ಟ್ ಧರಿಸಿ ಧೋನಿ ನಗುತ್ತಾ ಕೇಕ್ ಕತ್ತರಿಸಿದ್ದಾರೆ.

Sulekha