ಟೆಸ್ಟ್ ರನ್‌ನಲ್ಲಿ ಟಾಪ್ 10 ಸ್ಥಾನ ಪಡೆದ ಭಾರತೀಯರು ಯಾರೆಲ್ಲಾ ಗೊತ್ತಾ?
ಕೊಹ್ಲಿ ಹಿಂದಿಕ್ಕಿ ಗಿಲ್ KING ಆಗಿದ್ದೇಗೆ?

2019ರಲ್ಲಿ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ 254 ರನ್‌ಗಳಿಸಿದ್ರು. ಈ ಮೊತ್ತವನ್ನು ಶುಭಮನ್ ಗಿಲ್ ಮೀರಿಸಿದ್ದಾರೆ. ವಿರಾಟ್ ಕೊಹ್ಲಿಯ ಈ ದಾಖಲೆಯನ್ನ ಟೀಂ ಇಂಡಿಯಾದ ನಾಯಕ ಶುಭಮನ್ ಗಿಲ್ ಮುರಿದಿದ್ದಾರೆ.
ಅತ್ಯಧಿತ ಟೆಸ್ಟ್ ರನ್ ಗಳಿಸಿರುವ ಭಾರತೀಯ ಎಂಬ ದಾಖಲೆ ಸೆಹ್ವಾಗ್ ಹೆಸರಿನಲ್ಲಿದೆ. ಅಲ್ಲದೇ ಟಾಪ್ ಹೈಯಸ್ಟ್ ಸ್ಕೋರ್‌ನಲ್ಲಿ 4 ಸಲ ವೀರೇಂದ್ರ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ. 2008ರಲ್ಲಿ ಚೆನ್ನೈಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 319 ರನ್ ಸಿಡಿಸಿದ್ದಾರೆ. ಇದನ್ನ ಇಲ್ಲಿ ತನಕ ಯಾವ ಭಾರತೀಯ ಆಟಗಾರ ಕೂಡ ಬೀಟ್ ಮಾಡಿಲ್ಲ. ಅದೂ ಅಲ್ಲದೆ, ಸೆಹ್ವಾಗ್ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಇನ್ನೊಂದು ತ್ರಿಶತಕ ಬಾರಿಸಿದ್ದಾರೆ. 2004 ರಲ್ಲಿ ವೀರೇಂದ್ರ ಸೆಹ್ವಾಗ್ 309 ರನ್‌ಗಳಿಸಿದ್ದಾರೆ. ಸೆಹ್ವಾಗ್‌ನ ಬಿಟ್ರೆ ತ್ರಿಶತಕ ಬಾರಿಸಿದ್ದು ಕರುಣ್ ನಾಯರ್ ಮಾತ್ರ.. ಇಂಗ್ಲೆಂಡ್ ವಿರುದ್ಧ 2016 ರಲ್ಲಿ 303 ರನ್‌ಗಳಿಸಿದ್ದಾರೆ. ಇನ್ನೂ 4ನೇ ಪ್ಲೇಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅವರೇ ಇದ್ದಾರೆ. 2009ರಲ್ಲಿ ಶ್ರೀಲಂಕಾ ವಿರುದ್ಧ 293 ರನ್‌ಗಳಿಸಿದ್ದಾರೆ. ಇನ್ನೂ ಆಸ್ಪ್ರೇಲಿಯಾ ವಿರುದ್ಧ 2001 ರಲ್ಲಿ ವಿ.ವಿ.ಎಸ್. ಲಕ್ಷ್ಮಣ್ 281 ರನ್‌ಗಳಿಸಿದ್ರೆ, ರಾಹುಲ್ ದ್ರಾವಿಡ್ 2004 ರಲ್ಲಿ ಪಾಕಿಸ್ತಾನ ವಿರುದ್ಧ 270 ರನ್‌ಗಳಿಸಿದ್ದಾರೆ. ಈ ಸಲ್ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಶುಭಮನ್ ಗಿಲ್ 269 ರನ್‌ಗಳಿಸಿದ್ದು, 7ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 254 ರನ್‌ಗಳಿಸಿದ್ರೆ, ವೀರೇಂದ್ರ ಸೆಹ್ವಾಗ್ 2006 ರಲ್ಲಿ ಪಾಕ್ ವಿರುದ್ಧ ಪುಣೆಯಲ್ಲಿ 254 ರನ್‌ಗಳಿಸಿದ್ದಾರ. 2004 ರಲ್ಲಿ ಸಚಿನ್ ತೆಂಡುಲ್ಕರ್ ಬಾಂಗ್ಲಾದೇಶ ವಿರುದ್ಧ 248 ರನ್‌ಗಳಿಸಿದ್ದಾರೆ. ) ಇದು ನೋಡಿ ಟೆಸ್ಟ್‌ನಲ್ಲಿ ನಮ್ಮ ಭಾರತೀಯ ಆಟಗಾರರು ಗಳಿಸಿದ ಟಾಪ್ 10 ಸ್ಕೋರ್, ಇದ್ರಲ್ಲಿ ವೀರೇಂದ್ರ ಸೆಹ್ವಾಗ್ ಅವರೇ 4 ಸ್ಥಾನದಲ್ಲಿದ್ದಾರೆ ಅನ್ನೋದೆ ವಿಶೇಷ..
TEST ರನ್.. ಶ್ರೀಲಂಕಾ ಅಧಿಪತಿ
ಟೆಸ್ಟ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ತಂಡ ಅಂದ್ರೆ ಅದು ಶ್ರೀಲಂಕಾ ತಂಡ.. ಭಾರತದ ವಿರುದ್ಧ ಶ್ರೀಲಂಕಾ 1997 ರಲ್ಲಿ 952 ರನ್‌ಗಳಿಸಿದೆ. ಇದು ಟೆಸ್ಟ್ ಇತಿಹಾಸದಲ್ಲಿ ಒಂದು ತಂಡಗಳಿಸಿದ ದಾಖಲೆಯ ಸ್ಕೋರ್ ಆಗಿದೆ. ಈ ಸ್ಕೋರ್ ಬೀಟ್ ಮಾಡೋದು ಇರ್ಲಿ ಇದ್ರ ಹತ್ತಿರ ಕೂಡ ಯಾವ ತಂಡ ಹೋಗಿಲ್ಲ.. ಇನ್ನೂ 2ನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.. ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ದ 903 ರನ್‌ಗಳಿಸಿದೆ. ಇದು ಟೆಸ್ಟ್ ಇತಿಹಾಸದಲ್ಲಿ ಒಂದು ತಂಡ ಗಳಿಸಿದ 2ನೇ ಅತೀ ಹೆಚ್ಚು ರನ್ ಆಗಿದೆ. 3ನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕೂಡ ಇಂಗ್ಲೆಂಡ್ ಇದ್ದು, ಕ್ರಮವಾಗಿ 849ಮತ್ತು 823 ರನ್‌ಗಳಿಸಿದ ತಂಡವಾಗಿದೆ. 5ನೇ ಸ್ಥಾನದಲ್ಲಿರೋ ವೆಸ್ಟ್ ಇಂಡಿಸ್ ಪಾಕ್ ವಿರುದ್ಧ 790 ರನ್‌ಗಳಿಸಿದೆ. ಇನ್ನು ಪಾಕ್ ಭಾರತಕ್ಕಿಂದ ಮೇಲಿದ್ದು 6ನೇ ಸ್ಥಾನದಲ್ಲಿದೆ. ಪಾಕ್ ಟೆಸ್ಟ್ ತಂಡ ಶ್ರೀಲಂಕಾ ವಿರುದ್ಧ 760 ರನ್‌ಗಳಿಸಿದ್ದು, ಅತೀ ಹೆಚ್ಚು ರನ್‌ಗಳಿಸಿದ ತಂಡದಲ್ಲಿ 6ನೇ ಸ್ಥಾನ ಪಡೆದಿದೆ. ಇನ್ನೂ ಭಾರತ 8ನೇ ಸ್ಥಾನದಲ್ಲಿದ್ದು, 2016 ರಲ್ಲಿ ಇಂಗ್ಲೆಂಡ್ ವಿರುದ್ಧ 759 ರನ್‌ಗಳಿಸಿದೆ. ) ಶ್ರೀಲಂಕಾವೇ ಹೈಯೆಸ್ಟ್ ಸ್ಕೋರ್ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದು, 28 ವರ್ಷಗಳಿಂದ ಇದ್ದನ್ನ ಬೀಟ್ ಮಾಡೋಕೆ ಯಾರ ಕೈಯಿಂದ ಕೂಡ ಆಗಿಲ್ಲ..
ಇನ್ನೂ ಟೆಸ್ಟ್‌ನಲ್ಲಿ ಕಡಿಮೆ ಸ್ಕೋರ್ ವಿಚಾರಕ್ಕೆ ಬಂದ್ರೆ ಟಾಪ್ 1ನಲ್ಲಿರೋದು ನ್ಯೂಜಿಲೆಂಡ್ ತಂಡ.. 1955 ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 26 ರನ್‌ಗಳನ್ನ ಮಾತ್ರ ಗಳಿಸಿದೆ. ಇನ್ನೂ 2.3.4.5 ಪ್ಲೇಸ್‌ನಲ್ಲಿ ಸೌತ್ ಆಫ್ರೀಕಾ ಇದ್ದು, 30.30.35.36 ರನ್‌ಗಳಿಸಿದೆ. ಈ ಪಟ್ಟಿಯಲ್ಲಿ ನಮ್ಮ ಭಾರತ 7ನೇ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ ವಿರುದ್ದ 36 ರನ್‌ಗಳಿಸಿದೆ .. ಇದು ಟೆಸ್ಟ್‌ನಲ್ಲಿ ದಾಖಲಾದ ಹೈಯೆಸ್ಟ್ ಅಂಡ್ ಲೋಯಸ್ಟ್ ಸ್ಕೋರ್ ಆಗಿದೆ.

ನೋಡಿರಿ

