ಮಲೇಷ್ಯಾದಲ್ಲಿ ಭಾರಿ ಭೂಕುಸಿತ- ಇಬ್ಬರು ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ
ಕೌಲಾಲಂಪುರ್: ಮಲೇಷ್ಯಾದ ಕ್ಯಾಂಪ್ ಸೈಟ್ನಲ್ಲಿ ಶುಕ್ರವಾರ ಮುಂಜಾನೆ ಭೂಕುಸಿತದಲ್ಲಿ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ರಾಜಧಾನಿ ಕೌಲಾಲಂಪುರ್ ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಸುಮಾರು 3 ಗಂಟೆಗೆ ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್ಹೌಸ್ ಬಳಿ ಭೂಕುಸಿತವು ಸಂಭವಿಸಿದೆ. ಭೂಕುಸಿತದಲ್ಲಿ ಒಟ್ಟು 79 ಮಂದಿ ಸಿಲುಕಿದ್ದು, 23 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ
ಸುಮಾರು ಒಂದು ಎಕರೆ (0.4 ಹೆಕ್ಟೇರ್) ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಕ್ಯಾಂಪ್ ಸೈಟ್ ನಿಂದ ಅಂದಾಜು 30 ಮೀಟರ್ (100 ಅಡಿ) ನಷ್ಟು ಭೂಕುಸಿತ ಸಂಭವಿಸಿದೆ ಎಂದು ಇಲಾಖೆಯ ನಿರ್ದೇಶಕ ನೊರಾಜಮ್ ಖಾಮಿಸ್ ಹೇಳಿದ್ದಾರೆ.