ಭಾರತ ಗೆಲ್ಲುತ್ತಾ Or ಡ್ರಾ ಆಗುತ್ತಾ – 400+ ರನ್ಸ್ ಗಳಿಸಿ ಡಿಕ್ಲೇರ್ ಘೋಷಣೆ?
ಬ್ಯಾಟಿಂಗ್ & ಬೌಲಿಂಗ್ ಲೆಕ್ಕಾಚಾರಗಳೇನು?

ಭಾರತ ಗೆಲ್ಲುತ್ತಾ Or ಡ್ರಾ ಆಗುತ್ತಾ – 400+ ರನ್ಸ್ ಗಳಿಸಿ ಡಿಕ್ಲೇರ್ ಘೋಷಣೆ?ಬ್ಯಾಟಿಂಗ್ & ಬೌಲಿಂಗ್ ಲೆಕ್ಕಾಚಾರಗಳೇನು?

ಕ್ಯಾಪ್ಟನ್ ಶುಭ್​ಮನ್ ಗಿಲ್ ಅವರ ಡಬಲ್ ಸೆಂಚುರಿ ಇನ್ನಿಂಗ್ಸ್​ನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 587 ರನ್‌ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು 407 ರನ್‌ಗಳಿಗೆ ಭಾರತ ಆಲೌಟ್ ಮಾಡಿದೆ. ಮೊಹಮ್ಮದ್ ಸಿರಾಜ್ 6 ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ರೆ ಆಕಾಶ್ ದೀಪ್ 4 ವಿಕೆಟ್‌ಗಳನ್ನು ಬೇಟೆಯಾಡಿದ್ರು. ಇಂಗ್ಲೆಂಡ್ ಪರ ಜೇಮಿ ಸ್ಮಿತ್ 184 ಮತ್ತು ಹ್ಯಾರಿ ಬ್ರೂಕ್ 158 ರನ್ ಗಳಿಸಿದ್ದು ಸ್ವಲ್ಪ ಕ್ಯಾಲ್ಕುಲೇಷನ್ಸ್​ನ ಉಲ್ಟಾ ಮಾಡ್ತು. ಭಾರತಕ್ಕೆ ಸಿಗಬಹುದಾಗಿದ್ದ ಫಾಲೋ ಆನ್ ಅವಕಾಶವನ್ನ ಕಸಿದುಕೊಳ್ತು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿರೋ ಭಾರತ ಮೂರನೇ ದಿನದಾಟದಲ್ಲಿ  ತನ್ನ ಮೊದಲ ವಿಕೆಟ್ ಕಳ್ಕೊಂಡಿದೆ. 28 ರನ್ ಗಳಿಸಿದ್ದ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಕ್ರಿಸ್​ನಲ್ಲಿದ್ದು ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ರು.

ಇದನ್ನೂ ಓದಿ : 80 ಎಸೆತ.. ಸೆಂಚುರಿ.. ಸ್ಮಿತ್ ಸಿಡಿಲು.. ಟೆಸ್ಟ್ ನಲ್ಲಿ ಮೆಕಲಂ ರೆಕಾರ್ಡ್ ಹೇಗಿದೆ? – ಫಾಸ್ಟೆಸ್ಟ್ ಸೆಂಚುರಿ ಲಿಸ್ಟ್ ನಲ್ಲಿ ಯಾರೆಲ್ಲಾ? 

ಎರಡನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ, ಭಾರತ 9 ವಿಕೆಟ್‌ಗಳು ಬಾಕಿ ಇರುವಾಗ 244 ರನ್‌ಗಳ ಮುನ್ನಡೆ ಸಾಧಿಸಿತ್ತು. ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ 4ನೇ ದಿನದಂದು ಭಾರತ ಎರಡನೇ ಇನ್ನಿಂಗ್ಸ್ ರೀ ಸ್ಟಾರ್ಟ್ ಮಾಡಿದೆ. ಪಂದ್ಯ ಈಗ ರೋಚಕ ಘಟ್ಟ ತಲುಪಿದ್ದು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳೋಕೆ ಭಾರತ ಮುಂದಾಗಬಹುದು. ಯಾಕಂದ್ರೆ ಇದಾಗ್ಲೇ ನಾಲ್ಕನೇ ದಿನದಾಟ ಆಗಿರೋದ್ರಿಂದ ಭಾನುವಾರ ಅಂದ್ರೆ ನಾಳೆ ಪಂದ್ಯದ ಕೊನೇ ದಿನ ಆಗಿರುತ್ತೆ. ಹೀಗಾಗಿ ವೇಗವಾಗಿ ಹೆಚ್ಚೆಚ್ಚು ರನ್ಸ್ ಸ್ಕೋರ್ ಮಾಡಿ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಬಹುದು. ಈಗಾಗ್ಲೇ 244 ರನ್ಸ್ ಮುನ್ನಡೆ ಇರೋದ್ರಿಂದ ಹಾಗೇ 9 ವಿಕೆಟ್​​ಗಳು ಉಳಿದಿರೋ ಪರಿಣಾಮ ಉಳಿದ ಬ್ಯಾಟ್ಸ್​ಮನ್ಸ್ ವೇಗವಾಗಿ ರನ್ಸ್ ಸ್ಕೋರ್ ಮಾಡ್ಬೇಕಾಗುತ್ತೆ. 400 ಕ್ಕಿಂತ ಹೆಚ್ಚು ಗುರಿಯನ್ನು ನಿಗದಿಪಡಿಸಲು ಟಾರ್ಗೆಟ್ ಇಟ್ಕೊಂಡಿದೆ. ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ನೀಡಿದ್ರೆ ಇನ್ನೂ ಒಳ್ಳೇದೇ.

ಈಗಾಗ್ಲೇ ಮೊದಲ ಇನ್ನಿಂಗ್ಸ್​ನಲ್ಲಿ ಹಿನ್ನಡೆ ಅನುಭವಿಸಿರೋ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದಲ್ಲಿ ಭಾರತವನ್ನ ಬೇಗನೇ ಆಲೌಟ್ ಮಾಡೋ ಪ್ಲ್ಯಾನ್​ನಲ್ಲಿದ್ದಾರೆ. ಅಂದ್ರೆ ಬಿಗ್ ಸ್ಕೋರ್ ಬರದಂತೆ ತಡೆಯೋದು ಅವ್ರ ಪ್ಲ್ಯಾನ್. ಇವತ್ತಿನ ದಿನದ ಅಂತ್ಯದ ವೇಳೆಗೆ ಭಾರತವನ್ನು ಆಲೌಟ್ ಮಾಡಿದ್ರೆ ಕೊನೇ ದಿನದಾಟದಲ್ಲಿ ಸ್ಕೋರ್ ಬೆನ್ನತ್ತೋಕೆ ಸಾಕಷ್ಟು ಸಮಯಾವಕಾಶ ಸಿಗುತ್ತೆ. ಅದೂ ಅಲ್ದೇ ಇಂಗ್ಲೆಂಡ್ ಬ್ಯಾಟರ್ಸ್ ಬಾಝ್ ಬಾಲ್ ಅಸ್ತ್ರವನ್ನ ಪ್ರಯೋಗ ಮಾಡೋದ್ರಿಂದ ಒಂದಿಬ್ರು ಬ್ಯಾಟರ್ಸ್ ಸೆಟಲ್ ಆದ್ರೂ ಅಂದ್ರೆ ಎಷ್ಟೇ ಬಿಗ್ ಸ್ಕೋರ್ ಇದ್ರೂ ಚೇಸ್ ಮಾಡಿ ಬಿಡ್ತಾರೆ.  ಕಳೆದ ಪಂದ್ಯದಲ್ಲೇ 350+ ಸ್ಕೋರ್​ನ ಬೆನ್ನಟ್ಟಿ ಗೆದ್ದು ಬೀಗಿದ್ರು. ಸೋ ಅದೇ ಕಾನ್ಫಿಡೆನ್ಸ್​ನಲ್ಲೇ ಈ ಪಂದ್ಯವನ್ನೂ ಮುಗಿಸೋಕೆ ಕಾಯ್ತಿದ್ದಾರೆ. ಹೀಗಾಗಿ ಆಂಗ್ಲರನ್ನ ಕಾಡ್ಬೇಕು ಅಂದ್ರೆ ಭಾರತ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಬಿಗ್ ಸ್ಕೋರ್ ಕಲೆ ಹಾಕಲೇಬೇಕು.=

ಶುಭಮನ್ ಗಿಲ್ ಅವರ ಅದ್ಭುತ 269 ರನ್​ಗಳ ಇನ್ನಿಂಗ್ಸ್ ಈಗ ಎಡ್ಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಬಟ್ ನಾಲ್ಕು ಮತ್ತು ಐದನೇ ದಿನದ ಪರ್ಫಾಮೆನ್ಸ್ ಮೇಲೆ ಡಿಪೆಂಡ್ ಆಗಿದೆ ಅಷ್ಟೇ. ಶನಿವಾರದ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟರ್ಸ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿರಬೇಕು. ಹಾಗೇ ಹತ್ತತ್ರ 500 ರನ್ಸ್ ಬಂತು ಅಂದ್ರೆ ಅಡ್ವಾಂಟೇಜಸ್ ಜಾಸ್ತಿ ಇರುತ್ತೆ. ಸೋ ಇಡೀ ದಿನ ಭಾರತ ಬ್ಯಾಟಿಂಗ್ ಉಳಿಸಿಕೊಳ್ಬೇಕು. ಹಾಗೇ ಬಿಗ್ ಸ್ಕೋರ್ ನೀಡಿ ಕೊನೇ ದಿನದಾಟದಲ್ಲಿ ಬೌಲಿಂಗ್​ಗೆ ಬರಬೇಕು. ಇಂಗ್ಲೆಂಡ್ ಬ್ಯಾಟರ್ಸ್ ಸೆಟಲ್ ಆಗೋಕೆ ಬಿಡ್ದೇ ಬೇಗನೇ ಔಟ್ ಮಾಡಬೇಕು. ಕೊನೇ ದಿನದಾಟ ಮುಗಿಯೋ ಮುನ್ನ ಆಲೌಟ್ ಮಾಡಿದ್ರೆ ಭಾರತ ಐತಿಹಾಸಿಕ ಗೆಲುವು ಸಾಧಿಸುತ್ತೆ. ಹಾಗೇನಾದ್ರೂ ಭಾರತ ನೀಡಿದ ಗುರಿ ಬೆನ್ನಟ್ಟೋಕೆ ಸಾಧ್ಯವಾಗದೆ ಇಂಗ್ಲೆಂಡ್ ತಂಡ ವಿಕೆಟ್ ಉಳಿಸಿಕೊಂಡ್ರೆ ಮ್ಯಾಚ್ ಡ್ರಾ ಆದ್ರೂ ಆಗಬಹುದು. ಅಥವಾ ಸ್ಕೋರ್ ಬೆನ್ನಟ್ಟಿ ಗೆದ್ರೂ ಆಶ್ಚರ್ಯ ಇಲ್ಲ.

Shantha Kumari