ಕಿಚ್ಚ ಸುದೀಪ್‌ ಹೊಸ ಸಿನಿಮಾ ಅನೌನ್ಸ್‌! – 6 ತಿಂಗಳಲ್ಲೇ ತೆರೆಗೆ ಅಪ್ಪಳಿಸಲಿದೆ ಕೆ 47!

ಕಿಚ್ಚ ಸುದೀಪ್‌ ಹೊಸ ಸಿನಿಮಾ ಅನೌನ್ಸ್‌! – 6 ತಿಂಗಳಲ್ಲೇ ತೆರೆಗೆ ಅಪ್ಪಳಿಸಲಿದೆ ಕೆ 47!

ನಟ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸುದೀಪ್‌ ಮತ್ತೊಂದು ಹೊಸ ಚಿತ್ರವನ್ನ ಅನೌನ್ಸ್‌ ಮಾಡಿದ್ದಾರೆ. ಈ ಚಿತ್ರಕ್ಕೆ ‘ಕೆ 47’ ಎನ್ನುವ ಶೀರ್ಷಿಕೆ ಇಡಲಾಗಿದೆ. ಅಷ್ಟೇ ಅಲ್ಲ ಸಿನಿಮಾ ರಿಲೀಸ್‌ ಡೇಟ್‌ ಕೂಟ ಫಿಕ್ಸ್‌ ಆಗಿದೆ.

ಇದನ್ನೂ ಓದಿ: 80 ಎಸೆತ.. ಸೆಂಚುರಿ.. ಸ್ಮಿತ್ ಸಿಡಿಲು.. ಟೆಸ್ಟ್ ನಲ್ಲಿ ಮೆಕಲಂ ರೆಕಾರ್ಡ್ ಹೇಗಿದೆ? – ಫಾಸ್ಟೆಸ್ಟ್ ಸೆಂಚುರಿ ಲಿಸ್ಟ್ ನಲ್ಲಿ ಯಾರೆಲ್ಲಾ? 

ನಟ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕಾರ್ಯಕ್ರಮ ಹೋಸ್ಟ್‌ ಮಾಡೋದಿಕ್ಕೆ ಶುರು ಮಾಡಿದ್ಮೇಲೆ ಕಡಿಮೆ ಸಿನಿಮಾ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ರು. ಇದೀಗ ಸುದೀಪ್‌ ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಕೇವಲ ಆರು ತಿಂಗಳಲ್ಲಿ ಸಿನಿಮಾ ಮಾಡಿ ಪ್ರೇಕ್ಷಕರ ಎದುರು ಇಡಲು ಅವರು ಪಣ ತೊಟ್ಟಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ನಿರ್ದೇಶನ ಮಾಡಿದ್ದು ತಮಿಳಿನ ವಿಜಯ್ ಕಾರ್ತಿಕೇಯ ಅವರು. ಈಗ ಅವರ ಜೊತೆಯೇ ಸುದೀಪ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ K47 ಎಂದು ಶೀರ್ಷಿಕೆ ಇಡಲಾಗಿದೆ. ಜುಲೈ 7ರಿಂದ ಸಿನಿಮಾದ ಶೂಟ್ ತಮಿಳಿನಾಡಿನಲ್ಲಿ ಆರಂಭ ಆಗಲಿದೆ. ಈ ಸಿನಿಮಾನ ಡಿಸೆಂಬರ್ 25ಕ್ಕೆ ಪ್ರೇಕ್ಷಕರ ಎದುರು ಇಡುವ ಆಲೋಚನೆಯಲ್ಲಿ ಅವರಿದ್ದಾರೆ.

ಸುದೀಪ್ ಅವರು ಈಗಾಗಲೇ ‘ಬಿಲ್ಲ ರಂಗ ಬಾಷ’ ಚಿತ್ರದ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಬಿಗ್ ಬಾಸ್ ಕೂಡ ನಿರೂಪಣೆ ಮಾಡಲಿದ್ದಾರೆ. ಇವುಗಳ ಮಧ್ಯೆ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದರ ಶೂಟಿಂಗ್ ಬಗ್ಗೆ ಹಾಗೂ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

‘ನಿಜಕ್ಕೂ ಟೈಟ್ ಶೆಡ್ಯೂಲ್ ಆಗಲಿದೆ. ಬಿಲ್ಲ ರಂಗ ಬಾಷ ಈ ವರ್ಷಕ್ಕೆ ರಿಲೀಸ್ ಆಗೋದಿಲ್ಲ. ಅದು ದೊಡ್ಡ ಪ್ರಾಜೆಕ್ಟ್. ಹೀಗಾಗಿ, ಈ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಮಾಡಬೇಕು ಎಂಬುದು ನಮ್ಮ ಹಠ. ಟೀಂನಲ್ಲಿ ಸಾಕಷ್ಟು ಎನರ್ಜಿ ಇದೆ. ಈ ಬಾರಿ ಯಾವುದೇ ಸ್ಯಾಟರ್​ಡೇ, ಸಂಡೇ ಎನ್ನದೇ ಕೆಲಸ ಮಾಡಬೇಕು. ಆ ರೀತಿಯಲ್ಲಿ ಕೆಲಸ ಮಾಡುವ ಆಲೋಚನೆ ಇದೆ’ ಎಂದಿದ್ದಾರೆ ಅವರು.

ಒಂದು ಸಿನಿಮಾನ ಆರು ತಿಂಗಳಲ್ಲಿ ಶೂಟ್ ಮಾಡಿ ಪ್ರೇಕ್ಷಕರ ಎದುರು ಇಡೋದು ಎಂದರೆ ಅದು ಸಣ್ಣ ಸಾಧನೆಯಲ್ಲ. ಅದರಲ್ಲೂ ಸ್ಟಾರ್ ಹೀರೋಗಳ ಸಿನಿಮಾ ಎಂದರೆ ಅದು ಮತ್ತೂ ದೊಡ್ಡ ಚಾಲೆಂಜ್. ಈ ಚಾಲೆಂಜ್​ನ ಸುದೀಪ್ ಸ್ವೀಕರಿಸಿದ್ದಾರೆ.

Shwetha M