ರಾಮಾಯಣದಲ್ಲಿ ಯಶ್‌ ರಾವಣ.. – ಹನುಮಾನ್, ಶೂರ್ಪನಕಿ, ಲಕ್ಷ್ಮಣ ಪಾತ್ರ ಯಾರಿಗೆ?

ರಾಮಾಯಣದಲ್ಲಿ ಯಶ್‌ ರಾವಣ.. – ಹನುಮಾನ್, ಶೂರ್ಪನಕಿ, ಲಕ್ಷ್ಮಣ ಪಾತ್ರ ಯಾರಿಗೆ?

ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅಭಿನಯದ ಸಿನಿಮಾ ರಾಮಾಯಣ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಆದ್ರೆ ಯಾರು ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಈ ವರೆಗೂ ರಿವೀಲ್‌ ಆಗಿರಲ್ಲಿ.. ಇದೀಗ ಯಾವ ನಟ, ನಟಿಯರು ಯಾವ ಪಾತ್ರ ಮಾಡ್ತಿದ್ದಾರೆ ಅನ್ನೋದು ರಿವೀಲ್‌ ಆಗಿದೆ.

ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಬಿಗ್‌ ಶಾಕ್‌ – ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್!

ಬಾಲಿವುಡ್​ನ ದಂಗಲ್ ಸಿನಿಮಾ ಖ್ಯಾತಿಯ ಡೈರೆಕ್ಟರ್ ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಡೈರೆಕ್ಟರ್ ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್ ರೆಹಮಾನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು ಮೂವಿ ಎರಡು ಭಾಗಗಳಲ್ಲಿ ಬರಲಿದೆ.

ಹಾಲಿವುಡ್​ನ ಖ್ಯಾತ ಸಾಹಸಿ ನಿರ್ದೇಶಕ ಗೈನೋರಿಸ್ ಈ ಸಿನಿಮಾ ತಂಡ ಸೇರಿದ್ದು ನಿರೀಕ್ಷೆ ಮತ್ತಷ್ಟು ದುಪ್ಪಟ್ಟು ಮಾಡಿದೆ. ಇನ್ನು ಯಾರು ಯಾರು ಯಾವ ಯಾವ ಪಾತ್ರ ಎಂದು ನೋಡುವುದಾದರೆ.. ಸಿನಿಮಾದಲ್ಲಿ ಯಶ್​, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಲೀಡ್​ ರೋಲ್​ನಲ್ಲಿ ಅಭಿನಯಿಸುತ್ತಿದ್ದಾರೆ. ರಾಮ- ರಣಬೀರ್ ಕಪೂರ್, ಸೀತೆ- ಸಾಯಿ ಪಲ್ಲವಿ, ರಾವಣ- ಯಶ್​, ಹನುಮಾನ್- ಸನ್ನಿ ಡಿಯೋಲ್, ದಶರಥ ಮಹಾರಾಜ- ಅರುಣ್ ಗೊವಿಲ್, ಶೂರ್ಪನಕಿ- ರಕುಲ್ ಪ್ರೀತ್ ಸಿಂಗ್, ರಾಣಿ ಕೌಶಲ್ಯ ಪಾತ್ರದಲ್ಲಿ ಇಂದಿರಾ ಕೃಷ್ಣನ್, ಕೈಕೆ- ಲಾರಾದತ್ತ, ಜನಕ- ಅನಿಲ್ ಕಪೂರ್, ಜಟಾಯು- ಅಮಿತಾಬ್ ಬಚ್ಚನ್, ವಿದ್ಯುತ್ಜಿಹ್ವ ಪಾತ್ರದಲ್ಲಿ ವಿವೇಕ್ ಒಬೆರಾಯ್, ವಿಕ್ರಾಂತ್ ಮೆಸ್ಸಿ ಮೇಘನಾದ್, ರವಿ ದುಬೆ ಲಕ್ಷ್ಮಣ, ಮಂಡೋದರಿ- ಕಾಜೋಲ್ ಅಗರ್ವಾಲ್, ಶಿವ ಪಾತ್ರವನ್ನು ಮೋಹಿತ್ ರೈನಾ ಅವರು ನಿರ್ವಹಿಸುತ್ತಿದ್ದಾರೆ. ಇನ್ನು ಈ ಸಿನಿಮಾ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.

Shwetha M