ಕಮಲ್ ಹಾಸನ್‌ಗೆ ಬಿಗ್ ಶಾಕ್ – ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್!

ನಟ ಕಮಲ್ ಹಾಸನ್ ಒಂದಲ್ಲ ಒಂದು ವಿಚಾರದಕ್ಕೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಕನ್ನಡದ ಬಗ್ಗೆ ಮಾತನಾಡಿ ಕರುನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ರು. ಥಗ್ ಲೈಫ್ ಸಿನಿಮಾ ರಿಲೀಸ್ ವೇಳೆ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈ ವಿವಾದ ಇನ್ನೂ ಕಡಿಮೆ ಆಗಿಲ್ಲ. ಅವರ ಬಗ್ಗೆ ಕೋರ್ಟ್‌ನಲ್ಲಿ ಕೇಸ್ಗಳು ನಡೆಯುತ್ತಲೇ ಇವೆ. ಇದೀಗ ಕಮಲ್ ಹಾಸನ್‌ಗೆ ಕೋರ್ಟ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 64 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಇತಿಹಾಸಿಕ ಸ್ಮಾರಕಗಳು ಮುಳುಗಡೆ ಭೀತಿ
ಕಮಲ್ ಹಾಸನ್ ಇತ್ತೀಚೆಗೆ ಕನ್ನಡ ಹುಟ್ಟಿದ್ದು ತಮಿಳಿನಿಂದ ಅನ್ನೋ ಹೇಳಿಕೆ ನೀಡಿದ ಬೆನ್ನಲೇ ನಟನ ವಿರುದ್ಧ ಆಕ್ರೋಶ ವ್ಯಕ್ತವಾಯ್ತು. ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದ್ದು, ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಇದೀಗ ಈಗ ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ಕಮಲ್ ಹಾಸನ್‌ಗೆ ಕೋರ್ಟ್ ನಿರ್ಬಂಧ ಹೇರಿದೆ. ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೆ ನೀಡದಂತೆ ನಿರ್ಬಂಧ ಹೇರಿ ಬೆಂಗಳೂರಿನ 31ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಒಂದೊಮ್ಮೆ ಅವರು ಆದೇಶ ಮೀರಿದರೆ ನ್ಯಾಯಾಂಗ ನಿಂದನೆ ಮಾಡಿದಂತೆ ಆಗುತ್ತದೆ.
ಕಮಲ್ ಹಾಸನ್ ‘ಥಗ್ ಲೈಫ್’ ಸಿನಿಮಾ ಒಟಿಟಿಗೆ ಬಂದಿದೆ. ಜುಲೈ 2ರಂದು ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರಸಾರ ಕಂಡಿದೆ. ಈ ಚಿತ್ರ ಕನ್ನಡ ವರ್ಷನ್ ಸಿದ್ಧವಿದ್ದರೂ ಅದನ್ನು ಈ ಮೊದಲು ರಿಲೀಸ್ ಮಾಡಲು ತಂಡ ಮುಂದೆ ಬಂದಿರಲಿಲ್ಲ. ಈಗ ಒಟಿಟಿಯಲ್ಲಿ ಕನ್ನಡ ವರ್ಷನ್ ರಿಲೀಸ್ ಆಗಿದೆ.

ನೋಡಿರಿ

