ಹಣದುಬ್ಬರ.. ಸರ್ಕಾರದ ಅಸ್ಥಿರತೆ – ಪಾಕಿಸ್ತಾನ ಜೊತೆಗಿನ 25 ವರ್ಷಗಳ ನಂಟಿಗೆ ಮೈಕ್ರೋಸಾಫ್ಟ್ ಗುಡ್ ಬೈ

ಅಮೆರಿಕದ ಮೂಲದ ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ ಕಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿಯಲ್ಲಿದೆ. ಅದೂ ಕೂಡ ಉದ್ಯೋಗ ಕಡಿತದ ಮೂಲಕ. ಶೇ. 4ರಷ್ಟು ಅಂದರೆ 9,100 ಉದ್ಯೋಗಿಗಳಿಗೆ ಗೇಟ್‌ಪಾಸ್ ಕೊಡಲು ಕಂಪನಿ ಸಜ್ಜಾಗಿದೆ. ಈ ಲೇ ಆಫ್ ಬೆಳವಣಿಗೆಗಳ ನಡುವೆ ಪಾಕಿಸ್ತಾನಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಪಾಕ್ನಲ್ಲಿನ ತನ್ನೆಲ್ಲ ವ್ಯವಹಾರಗಳನ್ನ ಸ್ಥಗಿತಗೊಳಿಸಿದೆ.
ಇದನ್ನೂ ಓದಿ : ಆಂಗ್ಲರ ಗಿರಗಿಟ್ಲೆ ಆಡಿಸಿದ ಗಿಲ್.. ಡಕೆಟ್ & ಪೋಪ್ DUCK ಶಾಕ್! – 587 ರನ್.. ಫಾಲೋ ಆನ್ ಹೇರ್ತಾರಾ?
ಜಗತ್ತಿನ ಅತಿದೊಡ್ಡ ಮತ್ತು ಹಳೆಯ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಕಂಪನಿಯೂ ಪಾಕಿಸ್ತಾನದಲ್ಲಿ ತನ್ನೆಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಸುಮಾರು 25 ವರ್ಷಗಳ ಹಿಂದೆ ಪ್ರಾರಂಭವಾದ ಕಂಪನಿಯು ಈಗ ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ನಿಲ್ಲಿಸಿದೆ. ಬಿಲ್ ಗೇಟ್ಸ್ ಅವರ ಕಂಪನಿಯು ಪಾಕಿಸ್ತಾನದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ಕಂಪನಿಯ ವ್ಯವಹಾರ ಮುಚ್ಚಿರುವುದು ಪಾಕಿಸ್ತಾನಕ್ಕೆ ದೊಡ್ಡ ನಷ್ಟವಾಗುವುದು ಖಚಿತ. ಮೈಕ್ರೋಸಾಫ್ಟ್ ಪಾಕಿಸ್ತಾನದ ಮುಖ್ಯಸ್ಥ ಜಾವೇದ್ ರೆಹಮಾನ್ ಇದನ್ನು ಒಂದು ಯುಗದ ಅಂತ್ಯ ಎಂದು ಕರೆದಿದ್ದಾರೆ. ಮೈಕ್ರೋಸಾಫ್ಟ್ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಯನ್ನು ಮಾರ್ಚ್ 7, 2000 ರಂದು ಪ್ರಾರಂಭಿಸಿತು. ಇದೀಗ 2025ರ ಜುಲೈ 3ಂದು ಕಂಪನಿಯು ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ಮುಚ್ಚುವುದಾಗಿ ಅಧಿಕೃತವಾಗಿ ಘೋಷಿಸಿದೆ. ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಮೈಕ್ರೋಸಾಫ್ಟ್ ಅಧಿಕೃತ ಕಾರಣವನ್ನು ನೀಡದಿದ್ದರೂ, ತಾಂತ್ರಿಕ ಕಂಪನಿಯು ಪಾಕಿಸ್ತಾನದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಿದೆ ಎನ್ನಲಾಗಿದೆ.
ಇನ್ನು ಪಾಕಿಸ್ತಾನದಲ್ಲಿ ಆರ್ಥಿಕ ನಷ್ಟದ ಜೊತೆ ಜೊತೆಗೆ ರಾಜಕೀಯ ಅಸ್ಥಿರತೆಯೂ ಕಾಡ್ತಿದೆ. ಹೆಚ್ಚುತ್ತಿರೋ ಹಣದುಬ್ಬರ, ಹೆಚ್ಚಿನ ತೆರಿಗೆಗಳು, ಟೆಕ್ ಹಾರ್ಡ್‌ವೇರ್ ಪೂರೈಕೆ ವೇಳೆಯಲ್ಲಿ ಆಗ್ತಿರೋ ಸಮಸ್ಯೆಗಳು ಮತ್ತು ಸರ್ಕಾರವು ಆಗಾಗ್ಗೆ ಬದಲಾಗುತ್ತಿರುವುದರಿಂದ ಮೈಕ್ರೋಸಾಫ್ಟ್ ಟೆಕ್ ಕಂಪನಿಯು ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದೆಲ್ಲದರ ಹೊರತಾಗಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ವ್ಯಾಪಾರ ಉದ್ವಿಗ್ನತೆಯಿಂದಾಗಿ ಕಂಪನಿಯು ಮತ್ತಷ್ಟು ನಷ್ಟವನ್ನು ಅನುಭವಿಸುತ್ತಿತ್ತು. 2018 ರಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರವು 3 ಬಿಲಿಯನ್ ಯುಎಸ್ ಡಾಲರ್‌ಗಳಷ್ಟಿತ್ತು, ಆದರೆ 2024 ರಲ್ಲಿ ಅದು ಕೇವಲ 1.2 ಬಿಲಿಯನ್ ಡಾಲರ್‌ಗಳಿಗೆ ಇಳಿದಿದೆ. 2025 ರಲ್ಲಿ ಇದು ಮತ್ತಷ್ಟು ಕಡಿಮೆಯಾಗುವ ಅಂದಾಜಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನದಲ್ಲಿ ಹೂಡಿಕೆ ವಾತಾವರಣವು ಇನ್ನಷ್ಟು ಹದಗೆಟ್ಟಿದೆ.

ನೋಡಿರಿ

