ಪ್ಯಾನ್‌ ಇಂಡಿಯಾ ಸ್ಟಾರ್‌ ಆದ್ರೂ ಕಮ್ಮಿಯಾಗಿಲ್ಲ ಕನ್ನಡ ಪ್ರೀತಿ  – ಯಶ್ ಕನ್ನಡ ಪ್ರೇಮಕ್ಕೆ ಜೈ ಎಂದ ಫ್ಯಾನ್ಸ್‌

ಪ್ಯಾನ್‌ ಇಂಡಿಯಾ ಸ್ಟಾರ್‌ ಆದ್ರೂ ಕಮ್ಮಿಯಾಗಿಲ್ಲ ಕನ್ನಡ ಪ್ರೀತಿ  – ಯಶ್ ಕನ್ನಡ ಪ್ರೇಮಕ್ಕೆ ಜೈ ಎಂದ ಫ್ಯಾನ್ಸ್‌

ರಾಕಿಂಗ್‌ ಸ್ಟಾರ್‌ ಯಶ್‌ ರಾಮಾಯಣ ಮತ್ತು ಟಾಕ್ಸಿಕ್ ಸಿನಿಮಾ ಮೂಲಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಈ ಎರಡು ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗುವ ಯತ್ನದಲ್ಲಿದ್ದಾರೆ. ನಿನ್ನೆಯಷ್ಟೇ ರಾಮಾಯಣದ ಸಿನಿಮಾದ ಗಿಂಪ್ಸ್‌ ರಿಲೀಸ್‌ ಆಗಿತ್ತು. ಇದು ಪಕ್ಕಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ ಎಂದು ಕೊಂಡಾಡಿದ್ದಾರೆ. ಆದ್ರೀಗ ಯಶ್‌ ಮತ್ತೊಮ್ಮೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ವಿಶ್ವದ ನಂಬರ್ ವನ್ ಜಾವಲಿನ್ ಪಟು – ನೀರಜ್ ಚೋಪ್ರಾ ಕೆಒಎ ಹಾಲ್ ಆಫ್ ಫೇಮ್ ಗೌರವ 

ಹೌದು, ನಟ ಯಶ್‌ ಟಾಕ್ಸಿಕ್ ಸಿನಿಮಾವನ್ನು ಸಹ ವಿಶ್ವದರ್ಜೆಯಲ್ಲಿಯೇ ನಿರ್ಮಿಸಿದ್ದಾರೆ. ರಾಮಾಯಣ ಹಾಗೂ ಟಾಕ್ಸಿಕ್‌ ಸಿನಿಮಾಗಳ ಮೂಲಕ ವಿಶ್ವ ಸಿನಿಮಾ ರಂಗದಲ್ಲಿ ಅಬ್ಬರಿಸಲು ಯಶ್‌ ಅಬ್ಬರಿಸಲಿದ್ದಾರೆ. ನಿನ್ನೆ ರಾಮಾಯಣ  ಗ್ಲಿಂಪ್ಸ್​ ಬಿಡುಗಡೆ ಆಗಿದ್ದು ರಾಷ್ಟ್ರದಾದ್ಯಂತ ಹಲವು ನಗರಗಳಲ್ಲಿ ಐಮ್ಯಾಕ್ಸ್​​ ಸ್ಕ್ರೀನ್​​ನಲ್ಲಿ ರಾಮಾಯಣ  ಗ್ಲಿಂಪ್ಸ್ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದಾರೆ.   ರಾಮಾಯಣ ಗ್ಲಿಂಪ್ಸ್​ನ ಪೋಸ್ಟರ್​​ಗಳಲ್ಲಿ, ಸಿನಿಮಾನಲ್ಲಿ ನಟಿಸಿರುವ ಪ್ರಮುಖ ನಟ-ನಟಿಯರು ತಮ್ಮ ಸಹಿಗಳನ್ನು ಹಾಕಿದ್ದಾರೆ. ಅದರಂತೆ ನಟ ಯಶ್ ಸಹ ತಮ್ಮ ಸಹಿ ಹಾಕಿದ್ದಾರೆ. ಯಶ್ ಅವರ ಸಹಿ ಕನ್ನಡಿಗರು ಮೆಚ್ಚುವಂತಿದೆ.

ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ನಿರ್ದೇಶಕ ನಿತೀಶ್ ತಿವಾರಿ ಅವರುಗಳು ತಮ್ಮ ಸಹಿಯನ್ನು ಮಾಡಿದ್ದಾರೆ. ಯಶ್ ಹೊರತುಪಡಿಸಿ ಇನ್ನೆಲ್ಲರ ಸಹಿಯೂ ಇಂಗ್ಲೀಷ್ ಭಾಷೆಯಲ್ಲಿದೆ. ಆದರೆ ನಟ ಯಶ್ ಮಾತ್ರ ಕನ್ನಡದಲ್ಲೇ ಸಹಿ ಮಾಡಿದ್ದಾರೆ. ಯಶ್ ಅವರು ಕನ್ನಡದಲ್ಲಿ ಸಹಿ ಮಾಡಿರುವ ಚಿತ್ರಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಟನ ಕನ್ನಡ ಪ್ರೇಮವನ್ನು ಕೊಂಡಾಡುತ್ತಿದ್ದಾರೆ.

Shwetha M