‘ರಾಮಾಯಣ’ ಗ್ಲಿಂಪ್ಸ್ ಬಿಡುಗಡೆ – ರಾವಣನ ಅವತಾರದಲ್ಲಿ ಯಶ್ ಖಡಕ್ ಲುಕ್

ಕಾತರದಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ರಾಮಾಯಣ ಚಿತ್ರತಂಡ ಗುಡ್‌ನ್ಯೂಸ್ ಕೊಟ್ಟಿದೆ.ಇಂದು ರಾಮಾಯಣದ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಹಿಂದೆ ಕೂಡ ರಾಮಾಯಣ ಕುರಿತು ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಬಂದಿದ್ರೂ ಈಗ ಬರ್ತಿರೋ ರಾಮಾಯಣ ಚಿತ್ರರಂಗದಲ್ಲಿ ಸಂಚನ ಮೂಡಿಸಿದೆ. ಈ ಸಿನಿಮಾವನ್ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಈಗ ರಾಮಾಯಣದ ಗ್ಲಿಂಪ್ಸ್ ನ್ನ ಒಂಬತ್ತು ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ದೇಶದ 9 ನಗರಗಳಲ್ಲಿ ಇಂದು ರಾಮಾಯಣ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ.

ರಾಮಾಯಣ ಸಿನಿಮಾನಲ್ಲಿ ರಿಯಾಲಿಟಿ ಮತ್ತು ವಿಎಫ್ಎಕ್ಸ್ ಎರಡನ್ನೂ ಬಳಸಿ ಅದ್ಭುತ ಲೋಕವೊಂದನ್ನು ಸೃಷ್ಟಿ ಮಾಡಿರುವುದು ಗ್ಲಿಂಪ್ಸ್ ನೋಡಿದ್ರೆ ತಿಳಿದು ಬರುತ್ತೆ. ಈ ಗ್ಲಿಂಪ್ಸ್ ನಲ್ಲಿ ತೂಗು ದ್ವೀಪಗಳು, ಪುರಾತನ ದೇವಾಲಯಗಳು, ಹಿಮಾಲಯದ ಮೇಲೆ ವೇಗವಾಗಿ ಹಾರುತ್ತಿರುವ ಹನುಮ.. ಜಿಂಕೆಗಳ ಹಿಂಡು ಸೇರಿದಂತೆ ಹಲವು ದೃಶ್ಯಗಳನ್ನು ತೋರಿಸಲಾಗಿದೆ. ಒಟ್ಟಾರೆಯಾಗಿ ‘ರಾಮಾಯಣ’ ಸಿನಿಮಾನಲ್ಲಿ ರಾಮಾಯಣ ಕತೆಯನ್ನು ಹಿಂದೆಂದೂ ಯಾವ ಸಿನಿಮಾ, ಧಾರಾವಾಹಿಯೂ ಕಟ್ಟಿಕೊಡದ ರೀತಿಯಲ್ಲಿ ಈ ಸಿನಿಮಾದಲ್ಲಿ ಕಟ್ಟಿ ಕೊಡುವುದ್ದಕ್ಕೆ ಚಿತ್ರತಂಡ ಮುಂದಾಗಿದೆ.

ಈ ಬಗ್ಗೆ ಯಶ್ ಕೂಡ ಪೊಸ್ಟ್ ಹಾಕಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವದಿಂದ ಪ್ರಸ್ತುತಪಡಿಸುತ್ತಿದ್ದೇವೆ. ರಾಮ ರಾವಣನ ಅಮರ ಕಥೆಯನ್ನು ಆಚರಿಸೋಣ.ನಮ್ಮ ಸತ್ಯ. ನಮ್ಮ ಇತಿಹಾಸ ಎಂದು ಬರೆದುಕೊಂಡಿದ್ದಾರೆ.

ಪ್ರಭು ರಾಮನ ಮಹಿಮೆ, ಒಂದು ಹೊಸ ಯುಗದ ಪ್ರಾರಂಭ’, ‘ರಾಮನ ಶಕ್ತಿ ಧರ್ಮದ ವಿಜಯ’ ಎಂಬಿತ್ಯಾದಿ ಸಾಲುಗಳು ಟೀಸರ್ನಲ್ಲಿ ಹಿನ್ನೆಲೆ ಧ್ವಿನಿಯಾಗಿ ಕೇಳುತ್ತವೆ. ಈ ಗ್ಲಿಂಪ್ಸ್ ನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣುತ್ತಾರೆ. ರಾವಣನಾಗಿ ಯಶ್ ಅವರನ್ನು ತೋರಿಸಲಾಗಿದೆ. ಯಶ್ ಮುಖ ತೋರಿಸಿಲ್ಲ, ಬದಲಿಗೆ ಹಿಂದಿನಿಂದ ಅಜಾನುಬಾಹು ದೇಹವನ್ನು ಮಾತ್ರವೇ ತೋರಿಸಲಾಗಿದೆ.

ನೋಡಿರಿ

