ಟನಲ್ ರಸ್ತೆ ಆರಂಭಕ್ಕೂ ಮೊದಲೇ ಟೋಲ್ ಲೆಕ್ಕಾಚಾರ – ಬಿಬಿಎಂಪಿ ನಿರ್ಧಾರಕ್ಕೆ ಸವಾರರು ಗರಂ

ಟನಲ್ ರಸ್ತೆ ಆರಂಭಕ್ಕೂ ಮೊದಲೇ ಟೋಲ್ ಲೆಕ್ಕಾಚಾರ – ಬಿಬಿಎಂಪಿ ನಿರ್ಧಾರಕ್ಕೆ ಸವಾರರು ಗರಂ

ಬೆಂಗಳೂರಿನಲ್ಲಿ ಬ್ಯುಸಿ ರೋಡ್ ಆಗಿರುವ ಹೆಬ್ಬಾಳ ಟು ಸಿಲ್ಕ್ ಬೋರ್ಡ್ ರಸ್ತೆಯ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಸವಾರರಿಗೆ ಅನುಕೂಲವಾಗಲು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದೀಗ ಟನಲ್ ರಸ್ತೆ ಕಾಮಗಾರಿ ಆರಂಭವಾಗುವುದಕ್ಕೂ ಮೊದಲೇ ಟೋಲ್ ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ಓದಿ:ಪ್ರವಾಸಿಗರ ಸ್ವರ್ಗ ಎತ್ತಿನಭುಜಕ್ಕೆ ನೋ ಎಂಟ್ರಿ! – 1 ತಿಂಗಳು ಚಾರಣಕ್ಕೆ ಬ್ರೇಕ್!

ಕೂಸು ಹುಟ್ಟೋಕು ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನೋ ಮಾತಿದೆ. ಈ ಮಾತು ನಮ್ಮ ಬೆಂಗಳೂರು ಮಹಾನಗರ ಪಾಲಿಕೆಗೆ ಸರಿಯಾಗಿಯೇ ಅನ್ವಯಿಸುತ್ತದೆ. ಬಿಬಿಎಂಪಿ ಸುರಂಗ ರಸ್ತೆ ನಿರ್ಮಾಣ ಮಾಡುವ ಮುಂಚೆಯೇ ಟೋಲ್ ದರ ನಿಗದಿಗೆ ಮಾಡಿದೆ. ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ನಿರ್ಮಾಣ ಆಗ್ತಿರುವ ಸುರಂಗ ಮಾರ್ಗಕ್ಕೆ ಸರ್ಕಾರ ಈಗಷ್ಟೇ ಅನುಮೋದನೆ ಕೊಟ್ಟಿದೆ. ಇನ್ನೇನು ಕಾಮಗಾರಿ ಕೂಡ ಶುರು ಆಗಲಿದೆ. ಆದರೆ ಅದಕ್ಕೂ ಮೊದಲೇ ಪಾಲಿಕೆ ಸುರಂಗ ರಸ್ತೆಗೆ ಟೋಲ್ ದರ ನಿಗದಿ ಮಾಡಿದೆ. ಇನ್ನೂ ಕೂಡ ನಿರ್ಮಾಣವೇ ಆಗದ ಟನಲ್ ರಸ್ತೆಗೆ ವಾಹನಗಳಿಂದ ವಸೂಲಿ ಮಾಡಬೇಕಾದ ಶುಲ್ಕವನ್ನು ನಿಗದಿ ಪಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಸುರಂಗ ಮಾರ್ಗವನ್ನು ಮಾಡಲು ಮುಂದಾಗಿದೆ. 16 ಕಿಲೋ ಮೀಟರ್ ದೂರಕ್ಕೆ 230-250 ರೂಪಾಯಿ ಟೋಲ್ ಶುಲ್ಕಕ್ಕೆ ಪ್ರಸ್ತಾವನೆಯನ್ನು ಇಟ್ಟಿದೆ. ಪ್ರತಿ ಕಿಲೋಮೀಟರ್​ ಸಂಚಾರಕ್ಕೆ ಪಾಲಿಕೆ 19 ರೂಪಾಯಿ ದರ ನಿಗದಿ ಮಾಡಿದೆ. ಈ ಮೂಲಕ ಒಟ್ಟು 16 ಕಿಲೋಮೀಟರ್​​ ಸುರಂಗ ಮಾರ್ಗದ ಪ್ರಯಾಣಕ್ಕೆ ವಾಹನ ಸವಾರರು 280 ರೂಪಾಯಿ ಪಾವತಿಸಬೇಕಿದೆ.

ಹೆಬ್ಬಾಳದಿಂದ ಶುರು ಆಗಲಿರುವ ಸುರಂಗ ಮಾರ್ಗ ಸಿಲ್ಕ್ ಬೋರ್ಡ್‌ವರೆಗೆ 16 ಕಿಲೋಮೀಟರ್​ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಇನ್ನೂ ಕೂಡ ಐದಾರು ವರ್ಷಗಳ ಕಾಲ ಕಾಯಬೇಕಿದೆ. ಆದರೆ ಅದಕ್ಕೂ ಮೊದಲೇ ಟೋಲ್ ದರ ನಿಗದಿ ಮಾಡಿರುವ ಪಾಲಿಕೆ, ಜನರ ಜೇಬಿಗೆ ಕನ್ನಾ ಹಾಕುವುದನ್ನೇ ಮೊದಲ ಆದ್ಯತೆ ಮಾಡಿಕೊಂಡಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Sulekha