ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಗುಡ್‌ನ್ಯೂಸ್ – ಆಗಸ್ಟ್‌ ನಿಂದ ಹಳದಿ ಮಾರ್ಗ ಸಂಚಾರ ಆರಂಭ?

ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಗುಡ್‌ನ್ಯೂಸ್ – ಆಗಸ್ಟ್‌ ನಿಂದ ಹಳದಿ ಮಾರ್ಗ ಸಂಚಾರ ಆರಂಭ?

ಬಹಳ ದಿನಗಳಿಂದ ಕಾದು ಕಾದು ಸುಸ್ತಾದ ಮೆಟ್ರೋ ಪ್ರಯಾಣಿಕರಿಗೆ ಆಗಸ್ಟ್‌ ನಿಂದ ಗುಡ್‌ನ್ಯೂಸ್ ನೀಡುವುದ್ದಕ್ಕೆ BMRCL ಮುಂದಾಗಿದೆ. 19.15 ಕಿಮೀ ಉದ್ದದ ಈ ಮಾರ್ಗವು ಬೊಮ್ಮಸಂದ್ರದಿಂದ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಆರ್‌ವಿ ರಸ್ತೆಯನ್ನು ಸಂಪರ್ಕ ಮಾಡುತ್ತೆ.  ರೈಲುಗಳ ಕೊರತೆಯಿಂದಾಗಿ ಇದರ ಉದ್ಘಾಟನೆ ತುಂಬಾ ಲೇಟ್ ಆಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಸದ್ಯ 3 ರೈಲುಗಳನ್ನ ಹೊಂದಿದ್ದು,  ಇವು ಪ್ರತಿ 25 ನಿಮಿಷಗಳಿಗೊಮ್ಮೆ ಚಲಿಸಲಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

BMRCL ಈ ಮಾರ್ಗದಲ್ಲಿ ಚಾಲಕರಹಿತ ರೈಲುಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ. ಜುಲೈ 15 ರ ನಂತರ ಸುರಕ್ಷತಾ ತಪಾಸಣೆ ನಡೆಯಲಿದೆ. ಇದು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ ಎಲ್ಲಾ 16 ನಿಲ್ದಾಣಗಳಲ್ಲಿ ಹಳಿ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗುತ್ತದೆ. ಬೈಯಪ್ಪನಹಳ್ಳಿ ಡಿಪೋದಲ್ಲಿನ ಆಪರೇಷನಲ್ ಕಂಟ್ರೋಲ್ ಸೆಂಟರ್ ಗೆ ಭೇಟಿ ನೀಡಲು ಒಂದು ದಿನವನ್ನು ಮೀಸಲಿಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ ಅಂತ್ಯದೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಆಗಸ್ಟ್ ಮೊದಲ ವಾರದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ತಿಳಿಸಿದ್ದಾರೆ.

Kishor KV