2 ರನ್ ಗೆ ರಾಹುಲ್ ಕ್ಲೀನ್ ಬೌಲ್ಡ್ – 3 ಚೇಂಜಸ್ ಭಾರತಕ್ಕೆ ಪ್ಲಸ್ ಆಗುತ್ತಾ?
ENGಗೆ ಲಕ್ಕಿ ಪಿಚ್​.. ಹೇಗಿದೆ ಗೇಮ್?

2 ರನ್ ಗೆ ರಾಹುಲ್ ಕ್ಲೀನ್ ಬೌಲ್ಡ್ – 3 ಚೇಂಜಸ್ ಭಾರತಕ್ಕೆ ಪ್ಲಸ್ ಆಗುತ್ತಾ?ENGಗೆ ಲಕ್ಕಿ ಪಿಚ್​.. ಹೇಗಿದೆ ಗೇಮ್?

ಇಂಗ್ಲೆಂಡ್‌ನ ಲೀಡ್ಸ್‌ನ ಹೆಡಿಂಗ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲೋ ಮೂಲಕ ಸರಣಿ ಆರಂಭ ಮಾಡಿದೆ. ಸರಣಿ ಸಮಬಲ ಆಗ್ಬೇಕು ಅಂದ್ರೆ ಈ ಪಂದ್ಯ ಗೆಲ್ಲೇಬೇಕು. ಬುಧವಾರದಿಂದ ಶುರುವಾಗಿರೋ ಎರಡನೇ ಮ್ಯಾಚಲ್ಲಿ ಮೂವರನ್ನ ಹೊರಗಿಟ್ಟು  ಬೇರೆಯವ್ರಿಗೆ ಅವಕಾಶ ನೀಡಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಮ್ಯಾಚಲ್ಲಿ ಟಾಸ್ ಗೆದ್ದಿರೋ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡ್ಕೊಂಡಿದೆ.

ಇದನ್ನೂ ಓದಿ : ಹೋಟೆಲ್ ಉದ್ಯಮಿಯಾದ ಮೊಹಮ್ಮದ್ ಸಿರಾಜ್ – ಟೀಮ್ ಇಂಡಿಯಾ ವೇಗಿ ಬದುಕಿನಲ್ಲಿ ಹೊಸ ಇನ್ನಿಂಗ್ಸ್

ಬುಮ್ರಾಗೆ ರೆಸ್ಟ್.. ಸುದರ್ಶನ್ & ಠಾಕೂರ್ ಔಟ್!

ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾಗೆ ರೆಸ್ಟ್ ಕೊಡ್ತಾರೆ ಅನ್ನೋ ಸುದ್ದಿಯಿತ್ತು. ಸೋ ಇದು ನಿಜ ಕೂಡ ಆಗಿದೆ. ಇಡೀ ಸರಣಿಯಲ್ಲಿ 5 ಪಂದ್ಯಗಳಿದ್ದು 3 ಪಂದ್ಯಗಳನ್ನಷ್ಟೇ ಆಡಿಸೋದು ಅಂತಾ ಬಿಸಿಸಿಐ ಮೊದ್ಲೇ ಫಿಕ್ಸ್ ಆಗಿತ್ತು. ಅದ್ರಂತೆ ಮೊದಲ ಪಂದ್ಯ ಆಡಿದ್ದ ಬುಮ್ರಾರನ್ನ ಎರಡನೇ ಪಂದ್ಯದಿಂದ ಕೈಬಿಡಲಾಗಿದೆ. ಸೋ ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್‌ದೀಪ್ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಮೊದಲ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಫೇಲ್ಯೂರ್ ಆಗಿದ್ದ ಶಾರ್ದುಲ್ ಠಾಕೂರ್​ರನ್ನ​ ಡ್ರಾಪ್ ಮಾಡಿ ವಾಷಿಂಗ್ಟನ್ ಸುಂದರ್ ರನ್ನ ಕಣಕ್ಕಿಳಿಸಲಾಗಿದೆ. ಇನ್ನು ಡೆಬ್ಯು ಮ್ಯಾಚ್​ನಲ್ಲಿ ಅಷ್ಟೇನು ಸೌಂಡ್ ಮಾಡದ ಸಾಯಿ ಸುದರ್ಶನ್​ಗೂ ಕೂಡ ಬೆಂಚ್ ಕಾಯಿಸಿ ನಿತಿಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದ್ದಾರೆ. ಉಳಿದಂತೆ ಮೊದಲನೇ ಪಂದ್ಯದಲ್ಲಿ ಇದ್ದ ಆಟಗಾರರೇ ಕಂಟಿನ್ಯೂ ಆಗ್ತಾರೆ. ಸೋ ಟೀಂ ಇಂಡಿಯಾದ ಪ್ಲೇಯಿಂಗ್ 11 ಡಿಫ್ರೆಂಟ್ ಆಗಿದ್ದು ಎಫೆಕ್ಟೀವ್ ಆಗಿ ಕಾಣ್ತಿದೆ. ಬಟ್ ಆಲ್​ರೌಂಡ್ ಪ್ರದರ್ಶನ ಬರಬೇಕು ಅಷ್ಟೇ. ಇದೇ ಹೋಪ್ಸ್​ನಲ್ಲೇ ಭಾರತದ ಪರ ಜೈಸ್ವಾಲ್ ಮತ್ತು ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ಆರಂಭದಲ್ಲೇ ಆಘಾತ ಎದುರಾಗಿದೆ.

2 ರನ್ ಗೆ ಕ್ಲೀನ್ ಬೌಲ್ಡ್ ಆದ ಕೆಎಲ್ ರಾಹುಲ್!

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತದ ಪರ ಜೈಸ್ವಾಲ್ ಮತ್ತು ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ರು. ಈ ಪಂದ್ಯದಲ್ಲೂ ರಾಹುಲ್ ತಾಳ್ಮೆಯಿಂದಲೇ ಬ್ಯಾಟ್ ಬೀಸ್ತಿದ್ರು. ಮತ್ತೊಂದೆಡೆ ಜೈಸ್ವಾಲ್ ಕೂಡ ಒಳ್ಳೆ ಇನ್ನಿಂಗ್ಸ್ ಕಟ್ಟುತ್ತಿದ್ರು. ಆದ್ರೆ ಅಷ್ಟ್ರಲ್ಲೇ ಕೆಎಲ್ ರಾಹುಲ್ ವಿಕೆಟ್ ಉರುಳಿತು. 26 ಎಸೆತಗಳಲ್ಲಿ 2 ರನ್ ಗಳಿಸಿದ್ದ ರಾಹುಲ್ ಕ್ರಿಸ್ ವೋಕ್ಸ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಕಳೆದ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ಈ ಬಾರಿ ನಿರಾಸೆ ಮೂಡಿಸಿದ್ರು. 15 ರನ್ ಗಳಿಸಿದ್ದಾಗಲೇ ಟೀಂ ಇಂಡಿಯಾ ತನ್ನ ಮೊದಲ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ.

ಎಡ್ಜ್ ಬಾಸ್ಟನ್ ಮೈದಾನದಲ್ಲಿ ಗೆದ್ದೇ ಇಲ್ಲ ಭಾರತ!

ಸರಣಿಯ ಎರಡನೇ ಪಂದ್ಯ ನಡೆಯುತ್ತಿರೋ ಎಡ್ಜ್ ಬಾಸ್ಟನ್ ಮೈದಾನ ಭಾರತದ ಪಾಲಿಗೆ ವಿಲನ್ ಆಗಿದೆ. ಈ ಮೈದಾನದಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನೂ ಗೆಲ್ಲೋಕೆ ಸಾಧ್ಯವಾಗಿಲ್ಲ. ಭಾರತ ಹಾಗೂ ಇಂಗ್ಲೆಂಡ್ ನಡುವೆ 1967ರಲ್ಲಿ ಮೊದಲ ಪಂದ್ಯ ನಡೆಯಿತು. ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದ ಭಾರತ 132 ರನ್‌ಗಳಿಂದ ಸೋತಿತು. 2022ರಲ್ಲಿ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ಸಿಯಲ್ಲಿ ಕೊನೇ ಪಂದ್ಯವಾಡಿತ್ತು. ಅಂದ್ರೆ ಟೋಟಲ್ ಆಗಿ ಭಾರತ ಈ ಗ್ರೌಂಡ್​ನಲ್ಲಿ 8 ಪಂದ್ಯಗಳನ್ನ ಆಡಿದ್ದು ಒಂದು ಮ್ಯಾಚ್​ನೂ ಗೆದ್ದಿಲ್ಲ. 1986ರಲ್ಲಿ ಕಪಿಲ್ ದೇವ್ ಕ್ಯಾಪ್ಟನ್ಸಿಯಲ್ಲಿ ಡ್ರಾ ಮಾಡಿಕೊಂಡಿದ್ದೇ ಭಾರತದ ಬಹುದೊಡ್ಡ ಸಾಧನೆಯಾಗಿದೆ..

ಫೀಲ್ಡಿಂಗ್ ನಲ್ಲೂ ಭಾರತ ತಂಡದಿಂದ ಮಹತ್ವದ ಬದಲಾವಣೆ!

ಮೊದಲ ಮ್ಯಾಚಲ್ಲಿ ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ ಅನ್ನೋದು ಎಲ್ರಿಗೂ ಗೊತ್ತಿರೋದೇ. ಫಸ್ಟ್ ಇನ್ನಿಂಗ್ಸ್​ನಲ್ಲಿ 5, ಸೆಕೆಂಡ್ ಇನ್ನಿಂಗ್ಸ್​ನಲ್ಲಿ 3 ಸೇರಿ ಒಟ್ಟು 8 ಕ್ಯಾಚ್ ಬಿಟ್ಟಿದ್ರು. ಅದ್ರಲ್ಲೂ ಜೈಸ್ವಾಲ್ 4 ಕ್ಯಾಚ್ ಕೈಚೆಲ್ಲಿದ್ರು.  ಹೀಗಾಗಿ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಫೀಲ್ಡಿಂಗ್​ನಲ್ಲಿ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಕ್ಯಾಚ್​​ ಡ್ರಾಪ್​ ಮಾಡಿ ದುಬಾರಿಯಾದ ಯಶಸ್ವಿ ಜೈಸ್ವಾಲ್​ನ ಸ್ಲಿಪ್​​ನಿಂದ ಶಿಫ್ಟ್​ ಮಾಡಲಾಗಿದೆ. ಶಾರ್ಟ್​​​ ಲೆಗ್​ ಹಾಗೂ ಸಿಲ್ಲಿ ಪಾಯಿಂಟ್​​ನಲ್ಲಿ ಫೀಲ್ಡಿಂಗ್​ ಮಾಡುವಂತೆ ಜೈಸ್ವಾಲ್​ಗೆ ಸೂಚನೆ ನೀಡಲಾಗಿದೆ. ಅಂದ್ಹಾಗೆ, ಜೈಸ್ವಾಲ್​ನ ಶಿಫ್ಟ್​ ಮಾಡೋಕೆ ಮೊದಲ ಟೆಸ್ಟ್​ನ ​ಕಳಪೆ ಫೀಲ್ಡಿಂಗ್​ ಮಾತ್ರ ಕಾರಣವಲ್ಲ. 2024ರ ಆರಂಭದಿಂಲೂ ಜೈಸ್ವಾಲ್​​​​ದ್ದು ಇದೇ ಕಥೆ. 2024ರ ನಂತರ ಯಶಸ್ವಿ ಜೈಸ್ವಾಲ್​​ ಒಟ್ಟು 18 ಕ್ಯಾಚ್​​ಗಳನ್ನ ಹಿಡಿದಿದ್ದಾರೆ. 7 ಕ್ಯಾಚ್​​​ಗಳನ್ನ ಡ್ರಾಪ್​ ಮಾಡಿದ್ದಾರೆ. ಜೈಸ್ವಾಲ್​ ಕ್ಯಾಚಿಂಗ್​ ಎಫಿಶಿಯನ್ಸಿ ಶೇಕಡಾ 72 ಆಗಿದೆ. ಹೀಗಾಗಿ ಮ್ಯಾನೇಜ್​ಮೆಂಟ್ ಫೀಲ್ಡಿಂಗ್​ ಸೆಟ್​​​ ಅಪ್​ ಅನ್ನೇ ಬದಲಿಸಿದೆ. ಜೈಸ್ವಾಲ್​ ಸ್ಥಾನದಲ್ಲಿ ನಿತೀಶ್​ ಕುಮಾರ್​​ ರೆಡ್ಡಿ ಕಾಣಿಸಿಕೊಳ್ತಾರೆ.

Shantha Kumari